spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ಶಿಕ್ಷಕರ ದಿನಾಚರಣೆ

Must Read

- Advertisement -

ಗುರುವಿನ ಸೇವೆ ಎಂದೆಂದಿಗೂ ಮಿಗಿಲು,ಗುರು ಶಿಷ್ಯರ ಸಂಬಂಧ ಎಲ್ಲದಕ್ಕೂ ಮೀರಿದ್ದು – ಶಿಕ್ಷಕಿ ಸುಮಿತ್ರಾ ಕರವಿನಕೊಪ್ಪ ಅಭಿಮತ.

ಬೆಳಗಾವಿ: ಕಾಲಾಂತರದಿಂದ ಗಮನಿಸುತ್ತ ಬಂದರೂ ಗುರುವಿನ ಸೇವೆ ಎಂದೆಂದಿಗೂ ಮಿಗಿಲಾದದ್ದು. ಆದಿಕಾಲದ ಸಾಕ್ರೆಟಿಸ್ ಅರಿಸ್ಟಾಟಲ್, ಆಚಾರ್ಯ ದ್ರೋಣ, ರಾಮಕೃಷ್ಣ ಪರಮಹಂಸ, ಚಾಣಕ್ಯ ಮುಂತಾದ ಮಹಾನ್ ಗುರುಗಳ ದಿವ್ಯ ಶಕ್ತಿಯಿಂದಲೇ ಬೆಳಕಿಗೆ ಬಂದದ್ದು ಅಲೆಕ್ಸಾಂಡರ್, ಏಕಲವ್ಯ, ಸ್ವಾಮಿ ವಿವೇಕಾನಂದ, ಚಂದ್ರಗುಪ್ತ ಮೌರ್ಯನಂತಹ ಮಹಾನ್ ವ್ಯಕ್ತಿತ್ವಗಳು. ಆಗಿನ ಗುರು ಶಿಷ್ಯರ ಆ ಗಾಢವಾದ ಸಂಬಂಧ, ಕಲಿಕೆಯಲ್ಲಿ ಆಸಕ್ತಿ, ಗುರುವಿನ ಮೇಲಿನ ಭಕ್ತಿ  ನಿಜಕ್ಕೂ ಅನನ್ಯ. ಆ ಮಾದರಿಯ  ಸಂಬಂಧದ ಜೊತೆಗೆ ಗುರುವಿನ ಮಹತ್ವವನ್ನು ಎತ್ತಿ ಹಿಡಿಯುತ್ತಾ ನಾವು ಮುಂದೆ ಸಾಗಬೇಕಿದೆ ಎಂದು ಕಾಕತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಮಿತ್ರಾ ಕರವಿನಕೊಪ್ಪ ಹೇಳಿದರು

ರವಿವಾರ ದಿ.9 ರಂದು ಬೆಳಗಾವಿ ನಗರದ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವ ಮತ್ತು ಗುರು-ಶಿಷ್ಯರ ಸಂಬಂಧದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಶೈಕ್ಷಣಿಕ ಪದ್ಧತಿ ಬದಲಾಗುತ್ತಿದ್ದರೂ ಸಹ ಗುರು ತನ್ನ ಅಸ್ತಿತ್ವ ಕಳೆದುಕೊಳ್ಳದೆ ಜವಾಬ್ದಾರಿ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಹಿಂದಿನ ಇತಿಹಾಸಗಳೇ ಈಗ ನಮಗೆ ಮಾದರಿಯಾಗಿ ಮುಂದುವರಿಯಬೇಕು. ಎಂದು ಗತಕಾಲದ ಇತಿಹಾಸವನ್ನು ಮೆಲಕು ಹಾಕುತ್ತಾ ಗುರು ಶಿಷ್ಯರ ಮಹತ್ವವನ್ನು ಎತ್ತಿ ಹಿಡಿಯುವ ಹಲವಾರು ನಿದರ್ಶನಗಳನ್ನು ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಧರ್ಮ, ಸಂಸ್ಕೃತಿ, ಆಚಾರ,ವಿಚಾರ, ನಡೆ ನುಡಿಗಳ ಸಮರ್ಪಕ ಅನುಷ್ಠಾನಕ್ಕೆ  ಗುರುವೇ ಮೂಲ. ಆ ನಿಟ್ಟಿನಲ್ಲಿ ಗುರು ಸಾಮಾಜಿಕ ಜವಾಬ್ದಾರಿಯ ಪ್ರಮುಖ ಕೊಂಡಿ ಎಂದು ಬಣ್ಣಿಸಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿಯರಾದ ಮಾಲಾ ಬುಳ್ಳಾ, ಗೀತಾ ಗಾಣಿಗೇರ, ನಿವೃತ್ತಿ ಹೊಂದಿದ ಡಿ. ಎಸ್. ಪೂಜಾರ, ಶೋಭಾ ಪಾಶ್ಚಾಪುರ, ಬಿ. ಬಿ. ಕಮತೆ, ಎಂ. ವೈ. ಮೆಣಸಿನಕಾಯಿ ಮತ್ತು ಶಿಕ್ಷಕರ ಸಂಘಟನೆಯ ಪ್ರಮುಖರಾದ ರಾಮು ಗುಗ್ಗವಾಡ,ರಮೇಶ ಗೋಣಿ,ಪ್ರಕಾಶ ದೇಯನ್ನವರ ರವರನ್ನು ಸಂಘಟನೆ ವತಿಯಿಂದ ಸತ್ಕರಿಸಲಾಯಿತು. ಸತ್ಕಾರ ಸ್ವೀಕರಿಸಿ   ಶಿಕ್ಷಕಿ ಮಾಲಾ ಬುಳ್ಳಾ ಮಾತನಾಡಿ, ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಆ ನಿಟ್ಟಿನಲ್ಲಿ ಈ ಪವಿತ್ರ ವೃತ್ತಿಯ ಜವಾಬ್ದಾರಿ ಮುಂದುವರಿಸಿಕೊಂಡು ಕೈಲಾದ ಸೇವೆಯನ್ನು ಮಾಡುತ್ತ ಮುಂದೆ ಸಾಗುತ್ತೇನೆ ಎಂದರು. 

- Advertisement -

ರಾಮು ಗುಗ್ಗವಾಡ ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಆ ನಿಟ್ಟಿನಲ್ಲಿ ಸೂಕ್ತ ಹೆಜ್ಜೆ ಹಾಕಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆನಂದ್ ಕರ್ಕಿ ವಿ.ಕೆ ಪಾಟೀಲ ಶಂಕರ ಗುಡಸ ಶಿಕ್ಷಕಿಯರಾದ ಡಾ. ದಾನಮ್ಮ ಜಳಕಿ,ಗೀತಾ ತಿಗಡಿ, ಕಮಲಾ ಗಣಾಚಾರಿ, ಶಾಂತಮ್ಮ ತಿಗಡಿ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಾನಂದ ತಲ್ಲೂರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group