ಜೀವನದ ಸತ್ಯಾಸತ್ಯತೆಗಳೇ ಪಾಠ ಕಲಿಸುವ ಶಿಕ್ಷಕರು

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ನಿದ್ದೆ ಬಂದವರನ್ನು ಎಚ್ಚರಿಸಬಹುದು. ನಿದ್ದೆ ಬಂದ ಹಾಗೆ ನಾಟಕಮಾಡುವ ಮಧ್ಯವರ್ತಿಗಳನ್ನು ಎಚ್ಚರಿಸೋದು ಕಷ್ಟ. ಹೀಗಾಗಿ ಮಾನವ, ಮಧ್ಯವರ್ತಿ, ಮನುಕುಲ, ಮಹಿಳೆ,ಮಕ್ಕಳು ಎಲ್ಲಾ ತಿಳಿದರೂ ತಪ್ಪು ಹೆಜ್ಜೆ ಹಾಕಿ ಹಿಂದೆ ತಿರುಗಿ ನೋಡದೆ ಮುಂದೆ ಮುಂದೆ ಹೊರಗೆ ನಡೆದು ಸರ್ಕಾರದ ವಶವಾಗಿದ್ದಾರೆ. ಇಲ್ಲಿ ಸರ್ಕಾರ ಎಂದರೆ ಯಾರು ನಮಗೆ ಸಹಕರಿಸುತ್ತಾರೆ‌ ಯಾರು ನಮ್ಮ ಜೀವ ಉಳಿಸುತ್ತಾರೆ, ಯಾರು ಏನು ಕೊಡುತ್ತಾರೆ ಹೀಗೇ‌ ಪರಾವಲಂಬನೆ ಯ ಹಾದಿಯಲ್ಲಿ ಮುಂದೆ ನಡೆದು ಅರೆನಿದ್ದೆಯಲ್ಲಿಯೇ ಕಾಲಕಳೆಯುತ್ತಿದ್ದರೆ ಪೂರ್ಣನಿದ್ದೆ ಹೋಗುವ ಸಮಯ ಬಂದಾಗ ಯಾವುದೆ ಮಧ್ಯವರ್ತಿಗಳು ಇರೋದಿಲ್ಲ. ಹೀಗೆ ನಾವು ಏನೇ ಹೇಳಿ

ಕೇಳಿ,ನೋಡಿ,ಓದಿದರೂ ಅದರೊಳಗೆ ಹೊಕ್ಕಿ ನೋಡದೆ ಸತ್ಯ ಸತ್ಯವಾಗಿರೋದಿಲ್ಲ. ಇಷ್ಟಕ್ಕೂ ಸತ್ಯ ನಿದ್ದೆ ಮಾಡಿದವರಿಗೆ ಕಾಣೋದಿಲ್ಲ. ಅವರಿಗೆ ಎಚ್ಚರಿಸಿ ತಿಳಿಸಬಹುದು. ಆದರೆ ಕೆಲವರು ಸತ್ಯಾಸತ್ಯತೆಯ ಮಧ್ಯೆ ನಿಂತು ವ್ಯವಹಾರ ನಡೆಸುವಾಗ ಅಸತ್ಯಕ್ಕೆ ಹೆಚ್ಚು ಹಣ
ಸತ್ಯಕ್ಕೆ ಹಣವಿಲ್ಲವಾದರೆ‌ ಅವರು ವ್ಯವಹಾರಕ್ಕಾಗಿ ಹಣಕ್ಕಾಗಿ ಸತ್ಯ ಮುಚ್ಚಿಟ್ಟುಕೊಂಡಿರುವಾಗ ಪೂರ್ಣಸತ್ಯ
ತಿಳಿಸಿದರೂ ಒಪ್ಪದೆ ಜನರನ್ನು ದಾರಿತಪ್ಪಿಸುತ್ತಾರೆ.ಎಲ್ಲಿಯವರೆಗೆ ಸತ್ಯಜ್ಞಾನದ ಶಿಕ್ಷಣ ಸಿಗುವುದಿಲ್ಲವೋ ಅಲ್ಲಿಯವರೆಗೆ ಸತ್ಯವನ್ನು ಅಸತ್ಯವೆಂದು, ಅಸತ್ಯವನ್ನು ಸತ್ಯವೆಂದು ವಾದ ವಿವಾದ ಮಾಡುವವರಿರುತ್ತಾರೆ. ಒಟ್ಟಿನಲ್ಲಿ ನಮ್ಮೊಳಗೆ ಸತ್ಯಜ್ಞಾನವಿದ್ದರೆ ಹೊರಗಿನ ಸತ್ಯಾಸತ್ಯತೆ ಅರ್ಥಮಾಡಿಕೊಂಡು ನಮನ್ನು ನಾವು
ಸರಿಪಡಿಸಿಕೊಳ್ಳಲು ಸಾಧ್ಯ. ನಮ್ಮಲ್ಲೇ ಇರದ ಸತ್ಯ
ಪರರಲ್ಲಿ ಕಾಣೋದು ಕಷ್ಟ. ಒಟ್ಟಿನಲ್ಲಿ ಸತ್ಯ ಮಿಥ್ಯದ ನಡುವಿನ ಅರ್ಧಸತ್ಯ ಮಾನವನ ಜೀವನದಲ್ಲಿ ಅಂತರ ಸೃಷ್ಟಿಸಿ ವ್ಯವಹಾರದಲ್ಲಿ ಮುಳುಗಿಸಿದೆ. ಹಣದ ಲಾಭಕ್ಕಾಗಿ ಜ್ಞಾನವನ್ನು ಬಿಡಬೇಕು. ಜ್ಞಾನಕ್ಕಾಗಿ ಹಣ ದಾನಮಾಡಬೇಕು. ದಾನ ಮಾಡೋದರಲ್ಲಿಯೂ ಜ್ಞಾನ
ಇರಬೇಕು.ದಾನವರಿಗೆ ಮಾಡಿದ ದಾನ ವ್ಯರ್ಥ.
ಜ್ಞಾನ, ವಿದ್ಯೆ, ಅನ್ನ, ವಸ್ತ್ರ, ವಸತಿ,ಗೋ,ಬಂಗಾರ, ಕನ್ಯೆ, ಭೂಮಿ……ಇವೆಲ್ಲದರ ಹಿಂದೆ ಒಂದು ಅರ್ಥವಿತ್ತು.ಈಗ ಇವೆಲ್ಲವೂ ಭ್ರಷ್ಟಾಚಾರ ದ ಹಣದಲ್ಲಿ ನಡೆದಿದೆ ಹಾಗೆಯೇ ಭ್ರಷ್ಟರಿಗೆ ಇನ್ನಷ್ಟು ಶಕ್ತಿ ಬರುತ್ತಿದೆ. ಇದರ ಜೊತೆಗೆ ಪ್ರಜಾಪ್ರಭುತ್ವದಲ್ಲಿ ಮುಖ್ಯವಾಗಿರುವ ಮತದಾನ ಜನರ ಜೀವನವನ್ನು ವಿರುದ್ದ ದಿಕ್ಕಿನಲ್ಲಿ
ನಡೆಸಿಕೊಂಡು ಸಜ್ಜನರ ಸತ್ಯವನ್ನು ಮಣ್ಣುಪಾಲು ಮಾಡಿ ಅಸುರರಿಗೆ ದಾರಿ ಮಾಡಿಕೊಟ್ಟರೆ ಇದರಿಂದ ನಷ್ಟ ಯಾರಿಗೆ? ಆತ್ಮಹತ್ಯೆಯೆಂದರೆ ಜೀವ ತೆಗೆದುಕೊಳ್ಳುವುದಲ್ಲ ಸತ್ಯ,ಧರ್ಮಕ್ಕೆ ವಿರುದ್ದ ನಿಲ್ಲುವುದು ಎನ್ನುವುದು ಆಧ್ಯಾತ್ಮ ಸತ್ಯ. ನಮ್ಮಿಂದ ಏನೂ ಮಾಡಲಾಗೋದಿಲ್ಲವೆನ್ನುವವರೊಮ್ಮೆ ಯೋಚಿಸಿದರೆ ಈವರೆಗೆ ನಡೆದಿರೋದೆಲ್ಲಾ ನಮ್ಮಿಂದಲೇ ನಮ್ಮ ಸಹಕಾರದಿಂದಲೇ ಎಲ್ಲಾ ನಡೆದಿರೋದು. ಸತ್ಯ ತಿಳಿದರೂ ಅದಕ್ಕೆ ಸಹಕಾರ ನೀಡದೆ ತಮ್ಮ ಸ್ವಾರ್ಥ ಸುಖಕ್ಕಾಗಿ ಅಸತ್ಯ,ಅಧರ್ಮ,ಅನ್ಯಾಯಕ್ಕೆ ಬೆಲೆಕೊಟ್ಟು
ಸಹಕರಿಸಿದರೆ ರಾಜಕೀಯ ಬೆಳೆಯಬಹುದು.ನಮ್ಮ ಒಳಗಿನ ರಾಜಯೋಗವಲ್ಲ. ಆಂತರಿಕ ಶುದ್ದತೆಯಿಲ್ಲದೆ
ಸ್ವಚ್ಚಭಾರತ ನಿರ್ಮಾಣ ಅಸಾಧ್ಯ. ಇದಕ್ಕಾಗಿ ಕೋಟ್ಯಂತರ ಹಣವನ್ನು ಸರ್ಕಾರ ಬಳಸಿದರೂ ದೇಶಕ್ಕೆ ನಷ್ಟ. ಶಿಕ್ಷಣದಲ್ಲಿ ಶುದ್ದ ಸತ್ಯದ ವಿಚಾರಗಳನ್ನು ಅಳವಡಿಸಿ ಮಕ್ಕಳಲ್ಲಿರುವ ಸತ್ಯಜ್ಞಾನವನ್ನು ಬೆಳೆಸಿದರೆ ಸ್ವಾವಲಂಬನೆ, ಸ್ವತಂತ್ರ ಜ್ಞಾನ,ಸ್ವಾಭಿಮಾನ, ಸರಳ ಜೀವನ,ಸತ್ಯ,ಧರ್ಮದ ಜೀವನದಿಂದ ಮಹಾತ್ಮರು,ಯೋಗಿಗಳು, ಜ್ಞಾನಿಗಳು ಹೆಚ್ಚಾಗುತ್ತಾರೆ ಶುದ್ದವಾದ ಮನಸ್ಸಿದ್ದರೆ ಎಲ್ಲಾ ಸ್ವಚ್ಚವಾಗಿ ಕಾಣುತ್ತದೆ. ಇಲ್ಲವಾದರೆ ಅಶುದ್ದವೆ.ಎಷ್ಟೇ ದೇವತೆಗಳನ್ನು ಪೂಜಿಸಿ
ಬೇಡಿದರೂ ಆಂತರಿಕ ಶಕ್ತಿ ಜಾಗೃತವಾಗದಿದ್ದರೆ ಇದು ವ್ಯವಹಾರಕ್ಕಷ್ಟೇ ಸೀಮಿತವಾಗಿರುತ್ತದೆ. ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನಿಗಳ ಅಗತ್ಯವಿದೆ. ಆತ್ಮಜ್ಞಾನ ನಮ್ಮ ಮೂಲ ಧರ್ಮ ಕರ್ಮ ಬೆಳೆಸೋ ಶಿಕ್ಷಣದಲ್ಲಿದೆ. ನಮ್ಮ
ಮೂಲ ಧರ್ಮ ಮಾನವಧರ್ಮ ,ಕರ್ಮ ಸತ್ಯದ ಕರ್ಮ. ಏನೇ ಕೆಲಸಮಾಡಿದರೂ ಅದು ಧರ್ಮ ಕರ್ಮಕ್ಕೆ ಪೂರಕವಾಗಿರಬೇಕು. ಇದನ್ನು ಹಿಂದಿನ ಗುರುಕುಲದಲ್ಲಿ ಕಲಿಸಲಾಗುತ್ತಿತ್ತು. ಈಗ ಕೆಲವು ಗುರುಕುಲಗಳು ನಿಸ್ವಾರ್ಥ, ನಿರಹಂಕಾರದಿಂದ ನಡೆದಿದ್ದರೂ ಅಲ್ಲಿಯೂ ಭ್ರಷ್ಟ ರಾಜಕೀಯತೆ ಪ್ರವೇಶ ಮಾಡಿ ಗುರುಕುಲದಲ್ಲಿ ಆಡಂಬರ,ವೈಭವ,ಆಧುನಿಕತೆ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಕಷ್ಟದ ಪರಿಜ್ಞಾನವಿಲ್ಲದೆ ಸುಖವಾಗಿ ಓದಿ ತಿಳಿದು ಹೊರ ಬಂದು ವ್ಯವಹಾರಕ್ಕೆ ಜ್ಞಾನವನ್ನು ಬಳಸಿದರೆ, ಮೂಲ ಸತ್ಯದವರೆಗೆ ಜ್ಞಾನ ಬೆಳೆಯುವುದಿಲ್ಲ. ಇವರನ್ನು ಅರ್ಧ ಸತ್ಯದ ಮಾಧ್ಯಮ,ಮಧ್ಯವರ್ತಿಗಳು ,
ಮಾನವರೆನ್ನಬಹುದು. ಮಹಾತ್ಮರಾಗಲು ಇನ್ನೂ ಆಳವಾಗಿ ಚಿಂತನೆ ನಡೆಸಿದರೆ
ಉತ್ತಮ ಮಹಾತ್ಮರಾಗಬಹುದು.ಭಾರತದ ಭವಿಷ್ಯ ಮಹಾತ್ಮರ ಜ್ಞಾನದಲ್ಲಿದೆ. ವಿಜ್ಞಾನಿಗಳ ಭೌತಿಕ ಸತ್ಯ ಜ್ಞಾನಿಗಳ ಆಧ್ಯಾತ್ಮ ಸತ್ಯವನ್ನು ಸಾಮಾನ್ಯರ ನಡುವಿದ್ದು ಸಾಮಾನ್ಯರಂತೆ ಜೀವನ ನಡೆಸಿ,ಸಂಸಾರದ ಜೊತೆಗೆ ಸಮಾಜ ಸೇವೆ ಮಾಡೋವವರಲ್ಲಿದೆ. ಸಾಮಾನ್ಯರ ಸತ್ಯ
ವಿಶೇಷಜ್ಞಾನಿಗಳ ಸತ್ಯಕ್ಕೆ ಅಡಿಪಾಯವಾದರೆ ಉತ್ತಮ. ಕಾರಣ ಭೂಮಿ ಮೇಲಿರುವ ಸತ್ಯ,ಆಕಾಶ,ಪಾತಾಳಕ್ಕೆ ಮಧ್ಯ ನಿಂತಿದೆ. ಭೂಮಿಯ ಸಾಮಾನ್ಯಜ್ಞಾನ ಬಿಟ್ಟು
ನೇರವಾಗಿ ಆಕಾಶಕ್ಕೆ ಹಾರಿ ದುರ್ಭಳಕೆ ಮಾಡಿಕೊಂಡರೆ ಪಾತಾಳದವರೆಗೆ ಇಳಿಯಬೇಕು. ನಿಂತ ನೆಲ ಜಲದ,ಋಣ ತೀರಿಸಲು ಇದ್ದಲ್ಲೇ ನಿಂತು ಚಿಂತನೆ ಮಾಡಿದರೆ ಉತ್ತಮ. ಧ್ಯಾನ ಮಾಡೋದಕ್ಕೆ ಕಾಡೇಬೇಕೆಂದಿಲ್ಲ.ಮನಸ್ಸನ್ನು ಒಂದು ಕಡೆ ನಿಲ್ಲಿಸಿಕೊಂಡರೆ ಸಾಕು.ನಾವು ನಾವಾಗಿರೋದಕ್ಕೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಉನ್ನತ ವ್ಯಕ್ತಿಗಳ ಸಹಕಾರ ಬೇಡ.ಉನ್ನತ ವಿಚಾರಗಳ ಜ್ಞಾನವೂ ಬೇಡ. ಸಾಮಾನ್ಯಜ್ಞಾನವಿದ್ದರೆ ನಿಧಾನವಾಗಿ ಉನ್ನತಿ ಕಾಣಬಹುದು.ಎಲ್ಲವೂ ನಮ್ಮೊಳಗಿದೆ.ಆದರೆ ನಮ್ಮ ಮನಸ್ಸು ಮಾತ್ರ ಹೊರಗಿನ ರಾಜಕೀಯದೆಡೆಗೆ ನಡೆದು ಈಗ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲಾಗದೆ ಪರರ ಹಿಂದೆ ಜೀವ ನಡೆದಿದೆ. ಹಾಗಾದರೆ ಇಲ್ಲಿ ನಷ್ಟ ಕಷ್ಟ

ಯಾರಿಗಾಗಿದೆ? ನನಗೇ ನಷ್ಟವಾದಾಗ ಪರರನ್ನು ತೆಗೆಳಿದರೆ ಸರಿಯಾಗುವುದೆ? ನಾನು ಸರಿಯಾದ ಕಡೆ ನಡೆಯುವುದನ್ನು ಕಲಿಯಬೇಕೆ? ಕಲಿಕೆ ಯಲ್ಲಿಯೇ ಪರರ ಜ್ಞಾನವಿದ್ದರೆ ಪರಮಾತ್ಮ ಸಿಗುವನೆ? ಮಾನವನ ಭೌತಿಕಾಸಕ್ತಿಗೆ ಕಾರಣವೇ ವಿಜ್ಞಾನ. ಹಾಗಂತ ವಿಜ್ಞಾನ ಇಲ್ಲದೆ ಜೀವನವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯಜ್ಞಾನ ಅಗತ್ಯವಿದೆ ಎನ್ನಬಹುದು.ಎಲ್ಲದ್ದಕ್ಕೂ
ಇತಿಮಿತಿ ಇದೆ.ಮಿತಿಮೀರಿದರೆ ಅಸಹ್ಯ,ಅನರ್ಥ,ಅಪಾಯ,ಅನ್ಯಾಯ,ಅಧರ್ಮ,ಅಸತ್ಯ,ಅಹಂಕಾರ, ಅಸಹಕಾರ ಕಟ್ಟಿಟ್ಟ ಬುತ್ತಿ. ಇದಕ್ಕಾಗಿ ತಿರುಗಿ ಬರುವುದು ಉತ್ತಮ.”ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಮೂಲ ಧರ್ಮ ಕರ್ಮದ ಕಡೆಗೆ ಬರೋದಕ್ಕೆ ಮೂಲ ಭಾಷೆಯ ದೇಶೀಯ ಶಿಕ್ಷಣದ ಅಗತ್ಯವಿದೆ.ಪ್ರಾಥಮಿಕ ಶಿಕ್ಷಣದಲ್ಲಿ ಇದಕ್ಕೆ ಅವಕಾಶ,ಸಹಕಾರ ನೀಡಿದಾಗಲೇ ದೇಶದ ಸಮಸ್ಯೆಗೆ ಪರಿಹಾರವಿದೆ.ಆತ್ಮನಿರ್ಭರ ಭಾರತ
ವಿದೇಶಿ ವಿಜ್ಞಾನದಲ್ಲಿಲ್ಲ.ಸ್ವದೇಶದ ಆತ್ಮಜ್ಞಾನದಲ್ಲಿದೆ. ಕೆಲವರು ಸುಳ್ಳಿನಿಂದಲೇ ರಾಜಕೀಯ ನಡೆಸಿಕೊಂಡು ಸತ್ಯ ಮರೆಮಾಚುತ್ತಾರೆ,ಕೆಲವರು ಸತ್ಯವನ್ನು ಬಿಚ್ಚಿಡುತ್ತಾ ಸುಳ್ಳನ್ನು ತೋರಿಸುತ್ತಾರೆ. ಒಟ್ಟಿನಲ್ಲಿ ಜೀವನದಲ್ಲಿ ಸತ್ಯಾಸತ್ಯತೆಗಳೇ ಪಾಠ ಕಲಿಸುವ‌ ಶಿಕ್ಷಕರು. ಶಿಕ್ಷಕರು ಹೊರಗಿಲ್ಲ ಒಳಗಿದ್ದಾರೆ. ಶಿಕ್ಷೆ ಅನುಭವಿಸಿಯೇ ಪಾಠ ಕಲಿಯಬೇಕು. ಶಿಕ್ಷೆಯಿಲ್ಲದ ಪಾಠದಿಂದ ಉತ್ತಮ ಶಿಷ್ಯರು ಹುಟ್ಟೋದಿಲ್ಲ. ಇದು ಭಾರತೀಯರ ಮೂಲ ಶಿಕ್ಷಣದಲ್ಲಿತ್ತು. ಇದಕ್ಕೆ ವಿರುದ್ದ ದದಿಕ್ಕಿನಲ್ಲಿ ಭಾರತ ಇಂದು ನಡೆದಿರೋದಕ್ಕೆ
ಭಾರತೀಯರ ಸಮಸ್ಯೆಗೆ ಪರಿಹಾರವಿಲ್ಲವಾಗಿದೆ. ಸಮಸ್ಯೆ ಬೆಳೆದಿರೋದೆ ನಮ್ಮ ಅಜ್ಞಾನದ ಸಹಕಾರದಿಂದ ಹೀಗಿರುವಾಗ ಅದನ್ನು ನಾವೇ ಅನುಭವಿಸಬೇಕಿದೆ ಅವರವರ ಚೌಕಟ್ಟಿನಲ್ಲಿ ಅವರೇ ಸರಿ.ಆದರೆ ಚೌಕಟ್ಟು ದೇಶಕ್ಕಿಲ್ಲ ಎನ್ನುವುದಾದರೆ ದೊಡ್ಡ ಸಮಸ್ಯೆ ದೇಹದೊಳಗೆ
ರೋಗವಾಗಿರುತ್ತದೆ. ರೋಗಕ್ಕೆ ಮದ್ದು ಒಳಗಿದ್ದರೂ ಹೊರಗಿನಿಂದ ತುಂಬುತ್ತಿದ್ದರೆ ಇನ್ನಷ್ಟು ರೋಗ ಹೆಚ್ಚುವುದು. ಕೊಳೆತಿರುವ ಹಣ್ಣಿನ ಜೊತೆಗೆ ಮತ್ತಷ್ಟು ಹಣ್ಣು ಕಾಯಿ ಸೇರಿಸಿದರೆ ಸ್ವಚ್ಚವಾಗಿರುವುದೆ?.ಯೋಗಿಗಳ ದೇಶವನ್ನು ರೋಗಿಗಳು ನಡೆಸಿದರೆ ಆರೋಗ್ಯವಂತ ಪ್ರಜೆಗಳಿರುವರೆ?


- Advertisement -

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!