ಸಿಂದಗಿ: ಒಂದು ಸಮುದಾಯವನ್ನು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಸುವುದೇ ಮುಸ್ಲಿಂ ಬಾಗವಾನ ಜಮಾತಿನ ಉದ್ದೇಶವಾಗಿದೆ ಜಮಾತಿನ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವುದರ ಮೂಲಕ ನಮ್ಮ ಒಂದು ಸಮುದಾಯವನ್ನು ಎಲ್ಲಾ ರೀತಿಯಿಂದ ಸದೃಢವಾಗಿ ಮಾಡುವುದೇ ಮುಸ್ಲಿಂ ಬಾಗವಾನ ಜಮಾತಿನ ಮೂಲ ಗುರಿಯಾಗಿದೆ ಎಂದು ಮುಸ್ಲಿಂ ಬಾಗವಾನ ಜಮಾತ, ಅಧ್ಯಕ್ಷ ಅಲ್ತಾಫ ಬಾಗವಾನ ಹೇಳಿದರು.
ಪಟ್ಟಣದಲ್ಲಿ ಈದ್ಗಾ ಮಸೀದಿಯ ಮುಂದೆ ನೂತನವಾಗಿ ಮುಸ್ಲಿಂ ಬಾಗವಾನ ಜಮಾತ ಕಾರ್ಯಾಲಯ ಉದ್ಘಾಟನಾ ಹಾಗೂ ಮೈಬೂಬಸಾಬ ಬಾಗವಾನ (ಕೆ.ಜಿ.) ಇವರ ಸ್ಮರಣಾರ್ಥಕವಾಗಿ ಎಸಿ ಶವಪೆಟ್ಟಗೆಯನ್ನು ಮುಸ್ಲಿಂ ಬಾಗವಾನ ಜಮಾತ ಇವರ ವತಿಯಿಂದ ನೀಡಿ ಅವರು ಮಾತನಾಡಿದರು.
ತಾಲೂಕಿನ ಬಾಗವಾನ್ ಸಮುದಾಯದಲ್ಲಿ ಸುಮಾರು 750-800 ಮನೆಗಳಿದು 4000-5000 ಜನಸಂಖ್ಯೆಯನ್ನು ಹೊಂದಿದ ಬಾಗವಾನ ಸಮುದಾಯ ನಗರದ ಒಂದು ದೊಡ್ಡ ಸಮುದಾಯವಾಗಿದೆ ಅದೇ ರೀತಿಯಾಗಿ ಕೇವಲ ಜಮಾತಿನ ಸದಸ್ಯರಷ್ಟೆ ಅಲ್ಲದೆ ಸಮುದಾಯದ ಪ್ರತಿಯೊಬ್ಬರು ಕೂಡ ಈ ಒಂದು ಸಮಾಜದ ಜೊತೆ ನಿಂತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದರ ಮೂಲಕ ಒಂದು ಸಮುದಾಯವನ್ನು ನಾವು ಉನ್ನತಮಟ್ಟಕ್ಕೆ ತಲುಪಿಸಬಹುದು ಎಂದರು.
ಮುಸ್ಲಿಂ ಬಾಗವಾನ ಜಮಾತಿನ ಸಂಘಟನಾ ಕಾರ್ಯದರ್ಶಿ ಬಂದೇನವಾಜ ಶಹಾಪೂರ ಮಾತನಾಡಿ ಸಮಾಜ ಬಾಂಧವರು ಎಲ್ಲ ಒಳ ಪಂಗಡಗಳನ್ನು ಬದಿಗಿಟ್ಟು ಮುಸ್ಲಿಂ ಬಾಗವಾನ ಜಮಾತಿನ ಮೂಲಕ ಸಂಘಟಿತರಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಇಲಿಯಾಸ ಜಾಲವಾದಿ, ನಬಿಲಾಲ ಗೋಳಸಾರ, ಮಹ್ಮದಹನೀಫ ಅಳ್ಳೊಳಿ ಮಾತನಾಡಿದರು,
ಈ ಸಂದರ್ಭದಲ್ಲಿ ಬಾಬುಸಾಬ ತಡವಲ,ಸೈಪನಸಾಬ್ ನಾಟೀಕಾರ, ಸಲೀಮ್ ಬಾ. ಮರ್ತೂರ, ಹುಸೇನ್‍ಭಾಷಾ ಮರ್ತೂರ, ಮೌಲಾಸಾಬ ಖಾ. ಬಾಗವಾನ, ಇನುಸ್ ಶಹಾಪೂರ, ಅಬ್ಬಾಸಲಿ ಬಾಗವಾನ, ಅಬ್ದುಲ್‍ರಶೀದ ನಾಟೀಕಾರ, ಬಸೀರಅಹ್ಮದ್ ಮರ್ತೂರ, ಅಬ್ಬಾಸಲಿ ನರಸಲಗಿ, ಇಮಾಮಸಾಬ್ ಬಾಗವಾನ್, ಸತ್ತಾರ ಮಲ್ಲಾಡಿ, ಮುಲಕಾಬುಡ್ಡಾ ಬಮ್ಮನಜೋಗಿ, ಗೌಸಪಾಕ್ ಬಾಗವಾನ, ಸೈಪನ್ ಖೇಡ ಮದಾರ ಅಳ್ಳೊಳಿ, ಬಾಬುಲಾಲ ಶಹಾಪುರ ಸೇರಿದಂತೆ ಅನೇಕರು ಇದ್ದರು.
ಅಬ್ದುಲ್‍ವಾಹೀದ್ ಬಾಗವಾನ ಸ್ವಾಗತಿಸಿದರು. ಅಬುಬಕರ್ ಡೋಣಿ ನಿರೂಪಿಸಿದರು. ಇಬ್ರಾಹಿಂ ನಾಟೀಕಾರ ವಂದಿಸಿದರು.