spot_img
spot_img

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ

Must Read

spot_img
- Advertisement -

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2024

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ,ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಮತ್ತು ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಬೆಳಗಾವಿ ಇವರ ಸಹಯೋಗದಲ್ಲಿ ದಿ. 16 ರಂದು ನಗರ ಕೇಂದ್ರ ಗ್ರಂಥಾಲಯದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” 2024 ಸಪ್ತಾಹ ಆಚರಣೆ ಮಾಡಲಾಯಿತು.

ಈ ಸಮಾರಂಭದ ಉದ್ಘಾಟನೆಯನ್ನು ಡಾ.ಗೀತಾ ಕಾಂಬಳೆ , ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು , ಅವರು ದೀಪ ಬೆಳಗಿಸುವ ಮೂಲಕ ಮಾಡಿ ಮಾತನಾಡುತ್ತಾ, ಈ ವರ್ಷದ ಘೋಷವಾಕ್ಯವಾದ “ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ” ಮೊದಲಿನ ಕಾರ್ಯ ಕ್ಷೇತ್ರ ಮತ್ತು ಈಗಿನ ಕಾರ್ಯ ಕ್ಷೇತ್ರ ಭಿನ್ನವಾಗಿದ್ದು,ಒತ್ತಡದ ಸನ್ನಿವೇಶಗಳು ಬಹಳಷ್ಟು ಮಾನಸಿಕ ಸಮಸ್ಯೆ ಮತ್ತು ಕಾಯಿಲೆಗಳಿಗೆ ದಾರಿ ಮಾಡಿ ಕೊಡುತ್ತಿವೆ ಎಂದು ಹೇಳಿದರು.

- Advertisement -

ಅವುಗಳ ಸೂಕ್ತ ನಿರ್ವಹಣೆ ಮತ್ತು ಮಾನಸಿಕ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸಂಯೋಜಕರು ಎ ಪಿ ಡಿ ಸಂಸ್ಥೆಯ ಕು. ಕಾವೇರಿ ಅವರು ಮಾತನಾಡುತ್ತಾ, ಮಾನಸಿಕ ಕಾಯಿಲೆಗಳಿಂದ ದೂರ ಇರಲು ಸಕಾರಾತ್ಮಕ ಚಿಂತನೆಗಳೊಂದಿಗೆ ಮುಂದೆ ಸಾಗುವುದು ಮತ್ತು ನಕಾರಾತ್ಮಕ ಭಾವನೆಗಳನ್ನು ಹೊಡೆದು ಓಡಿಸುವ ಕಲೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶ್ರೀಮತಿ ಸವಿತಾ ತಿಗಡಿ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ ಅವರು ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ 14416, ಮತ್ತು ತಾಲೂಕಾ ಮಟ್ಟದ ಮನೋ ಚೈತನ್ಯ ಕ್ಲಿನಿಕ್ ಬಗ್ಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಕೇಂದ್ರ ಗ್ರಂಥಾಲಯ ಬೆಳಗಾವಿಯ ಗ್ರಂಥಪಾಲಕರಾದ ಶಶಿಕಲಾ ಸೀಮೀಮಠ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಡಾ.ಅಬ್ರಾರ ಪುಣೇಕರ,ಮನೋವೈದ್ಯರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ,ಅವರು ಮಾನಸಿಕ ಕಾಯಿಲೆಗಳು, ಲಕ್ಷಣಗಳು, ಕಾರಣಗಳು ,ಚಿಕಿತ್ಸೆ ಮತ್ತುಆಪ್ತ ಸಮಾಲೋಚನೆ ಬಗ್ಗೆ ಮಾತನಾಡಿದರು. ಕು.ಪೂಜಾ ಅವರು ಪ್ರಾರ್ಥಿಸಿ ಎಲ್ಲರನ್ನೂ ಸ್ವಾಗತಿಸಿದರು. ಶಿವಾಜಿ ಮಾಲ್ಗೆನ್ನವರ್ ಅವರು ನಿರೂಪಿಸಿದರು. ಪ್ರಕಾಶ ಇಚಲಕರಂಜಿ ವಂದಿಸಿದರು.

- Advertisement -

ಈ ಸಂದರ್ಭದಲ್ಲಿ ನಗರ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಎಲ್ಲಾ ಸಿಬ್ಬಂದಿವರ್ಗ,ಸಾರ್ವಜನಿಕ ಓದುಗರು,ವಿಧ್ಯಾರ್ಥಿಗಳು,ಮತ್ತು ಕಾಲೇಜ್ ವಿಧ್ಯಾರ್ಥಿಗಳು , ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group