ದು ನಿಂ ಬೆಳಗಲಿಯವರು ಒಬ್ಬ ಕನ್ನಡ ಲೇಖಕರು. ಇವರು ಕಥೆಗಾರ, ಕಾದಂಬರಿಕಾರ ಹಾಗೂ ಅನುವಾದಕ. ಮಕ್ಕಳ ಸಾಹಿತ್ಯ, ನಗೆಬರಹ, ಪ್ರಬಂಧಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ.
ಪರಿಚಯ/ಶಿಕ್ಷಣ/ವೃತ್ತಿಜೀವನ
ದುರದುಂಡೀಶ್ವರ ನಿಂಗಪ್ಪ ಬೆಳಗಲಿ – ಇದು ಅವರ ಪೂರ್ಣ ಹೆಸರು. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಅವರ ಹುಟ್ಟೂರು. ಜನನ ೧೯೩೧ನೇ ಇಸವಿ ಮಾರ್ಚ ೩೦. ತಂದೆ ನಿಂಗಪ್ಪ, ತಾಯಿ ಚೆನ್ನಮ್ಮ.
ಬನಹಟ್ಟಿ, ಐನಾಪುರ, ಬಾಗಲಕೋಟೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ. ನಂತರ ಮುಂಬಯಿ ಶಿಕ್ಷಣ ಇಲಾಖೆಯ ಎಸ್ ಟಿ ಸಿ, ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಚ್ ಎಸ್ ಸಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವಿಶಾರದ, ಮೈಸೂರು ವಿಶ್ವವಿದ್ಯಾನಿಲಯದ ಡಿಲಿಟ್ ಶಿಕ್ಷಣ.
೧೯೫೧ ಜೂನ ತಿಂಗಳಿನಿಂದ ಬೆಳಗಾವಿ ಜಿಲ್ಲೆಯ ಐನಾಪುರದ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕ. ಬನಹಟ್ಟಿಯ ಎಸ್ ಆರ್ ಎ ಪ್ರೌಢಶಾಲೆಯ ಶಿಕ್ಷಕರಾಗಿ ಹಿಂದಿ ಹಾಗೂ ಕನ್ನಡ ಬೋಧನೆ. ೧೯೮೯ರಲ್ಲಿ ನಿವೃತ್ತಿ.
ಕಥಾಸಂಕಲನ
- ಬೆನ್ನ ಹಿಂದಿನ ಕಣ್ಣು
- ಸಿಟ್ಟ್ಯಾಕೊ ರಾಯ ನನ ಮ್ಯಾಲ
- ಮಾಸ್ತರನ ಹೆಂಡತಿ
- ಗೌಡರ ಮಗಳು ಗೌರಿ
- ಮುಳ್ಳದಾರಿಯಲ್ಲಿ ಬಿರಿದ ಹೂಗಳು
- ಮುತ್ತಿನ ತೆನೆಗಳು
- ಇನ್ನಷ್ಟು ಕಥೆಗಳು
- ಬೇಸಿಗೆಯ ಮೊದಲ ಮಳೆ
ಕಾದಂಬರಿ
- ಮುಳ್ಳು ಮತ್ತು ಮಲ್ಲಿಗೆ
- ಹತ್ತು ಹೆಡೆಯ ಹಾವು
- ತಿರುಗಣಿ ಮಡು (ಪ್ರ್ರೀತಿಯ ಆ ಮುಖ)
- ಹಡೆದವರು
- ಬಿಸಿಲು ಬೆಳದಿಂಗಳು (ಗಂಡಿನ ನೆರಳು)
- ಸೀಮೆಗಳು
- ದಾಕ್ಶಾಯಣಿ (ವಾತ್ಸಲ್ಯಮಯಿ)
- ಜೋಗಿಮರಡಿ
- ಅಂಧೇರ ನಗರಿ
- ರಣಹದ್ದುಗಳು
- ಚಂಬಲ್ ಕಣಿವೆಯಲ್ಲಿ
- ಅಂತಸ್ತಿನ ಮನೆ
- ಮೌನಕ್ರಾಂತಿ
- ದೇವದಾಸಿ
- ಕಾತ್ರಾಳ ರತ್ನಿಯ ಚಾದಂಗಡಿ
ಚರಿತ್ರೆ
- ಪ್ರೇಮಚಂದ ಬದುಕು,ಬರಹ
- ಪಂಡಿತಪ್ಪ ಚಿಕ್ಕೋಡಿ
- ಈಶ್ವರ ಸಣಕಲ್ಲ
- ಬೆಳಕು ಬಿತ್ತಿದವರು
- ಯುಗಚೇತನ-ಪ್ರೇಮಚಂದ್ರ
ಅನುವಾದ
- ಅಕ್ರಮ ಸಂತಾನ (ಮರಾಠಿ ದಲಿತ ಆತ್ಮಕತೆ)
- ಗಬಾಳ (ಮರಾಠಿ ದಲಿತ ಆತ್ಮಕತೆ)
- ಸಮರ್ಥ ರಾಮದಾಸರ ಜೀವನ ಚರಿತ್ರೆ
ಮಕ್ಕಳ ಸಾಹಿತ್ಯ
- ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು
- ಸರ್ವಜ್ಞ
- ಚಿಕ್ಕೋಡಿ ತಮ್ಮಣ್ಣಪ್ಪನವರು
- ಬದುಕುವ ಬಯಕೆ
- ಈಸೋಪನ ಕಥೆಗಳು
- ಮುಂದುವರಿದ ಈಸೋಪನ ಕಥೆಗಳು
- ಮತ್ತಷ್ಟು ಈಸೋಪನ ಕಥೆಗಳು
- ಗಂಗಾಧರ ಮಡಿವಾಳೇಶ್ವರ ತುರಮರಿ
- ಮಡಿವಾಳ ಮಾಚಿದೇವ
- ಮುಲ್ಲಾ ನಸ್ರುದ್ದೀನನ ಹನಿಗತೆಗಳು
- ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು
- ಜಾದೂಪಕ್ಷಿ
- ಅನೇಕ ನಗೆಬರಹಗಳನ್ನು, ಪ್ರಬಂಧಗಳನ್ನು ರಚಿಸಿದ್ದಾರೆ.
ನಗೆಬರಹ
- ಹೆಂಡತಿ ಮತ್ತು ಟ್ರಾನ್ಸಿಸ್ತರ್
- ಸಾಹಿತಿಗಳ ಸಂಗ ಮೋಜಿನ ಪ್ರಸಂಗ
- ಗಂಡ ಹೆಂಡತಿ ಮತ್ತು ಲಗೇಜ್
ಪ್ರಭಂದ
- ಸಾಹಿತ್ಯ, ಸಾಧನ ಮತ್ತು ಜೀವನ
- ಕನ್ನಡದಲ್ಲಿ ಕಾದಂಬರಿ ಸಾಹಿತ್ಯ: ಜಮಖಂಡಿ ತಾಲೂಕ ದರ್ಶನ
- ಇತರ ಸಂಪಾದಿಸಿ
- ಸಾಹಿತಿಗಳ ಸಂಗ ಮೋಜಿನ ಪ್ರಸಂಗ
ಪ್ರಶಸ್ತಿ, ಗೌರವಗಳು
- ಬದುಕುವ ಬಯಕೆಗೆ (೧) ರಾಷ್ಟ್ರೀಯ ಪ್ರಶಸ್ತಿ ಹಾಗು (೨)
- ರಾಷ್ಟ್ರೋತ್ಥಾನ ಬಹುಮಾನ
- ಭಾರತೀಯ ಪ್ರಕಾಶಕರ ಒಕ್ಕೂಟ ಪ್ರಶಸ್ತಿ (ಜಾದೂಪಕ್ಷಿ ಕೃತಿಗೆ)
- ಗೌಡರ ಮಗಳು ಕಥಾಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಥಮ ಬಹುಮಾನ
- ಮುಳ್ಳ ದಾರಿಯಲ್ಲಿ ಬಿರಿದ ಹೂಗಳು ಕಥಾಸಂಕಲನಕ್ಕೆ ಗಂಗಾಧರ ಸಾಹಿತ್ಯ ಪುರಸ್ಕಾರ
- ಮುತ್ತಿನ ತೆನೆಗಳು ಕಥಾಸಂಕಲನಕ್ಕೆ ವಿಶ್ವಬಾರತೀಯ ಪರಿಷತ್ತಿನ ಪ್ರಥಮ ಬಹುಮಾನ
- ದೇವದಾಸಿ ಕಾದಂಬರಿಗೆ (೧) ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ (೨)
- ಸರ್ ಎಮ್.ವಿಶ್ವೇಶ್ವರಯ್ಯ ಪ್ರತಿಷ್ಠಾನದ ಪ್ರಥಮ ಬಹುಮಾನ
- ಅಕ್ರಮ ಸಂತಾನ ಅನುವಾದಕ್ಕೆ ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ , ೧೯೯೩
- ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.
- ೧೯೮೮ ರಲ್ಲಿ ಉತ್ತಮ ಶಿಕ್ಷಕನೆಂದು ರಾಷ್ಟ್ರಪ್ರಶಸ್ತಿ.
- ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಡಾ.ಅಂಬೇಡ್ಕರ್ ಫೆಲೋಶಿಪ್ (೧೯೯೬)
- ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ
- ದೆಹಲಿಯಲ್ಲಿ ನಡೆದ ಪ್ರೇಮ್ ಚಂದ್ ಶತಮಾನೋತ್ಸವದಲ್ಲಿ ಪ್ರತಿನಿಧಿಯಾಗಿ ಭಾಗಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಲೇಖಕರ ಕಮ್ಮಟದಲ್ಲಿ ಆಹ್ವಾನಿತ ಪ್ರತಿನಿಧಿ
- ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ದಲಿತ ಲೇಖಕರ ಸಮ್ಮೇಳನದಲ್ಲಿ ಆಹ್ವಾನಿತ ಪ್ರತಿನಿಧಿ
- ಇವರಿಗೆ ಅರವತ್ತು ವರ್ಷ ವಯಸ್ಸು ತುಂಬಿದ ಸಂದರ್ಭದಲ್ಲಿ ಅಥಣಿ ತಾಲೂಕಿನ ಮಲಾಬಾದದ ವಿಮೋಚನಾ ವಸತಿಶಾಲೆಯಲ್ಲಿ ’ಬೆಳಗಲಿ’ ಎಂಬ ಅಭಿನಂದನಾ ಗ್ರಂಥ ಸಲ್ಲಿಸಿ ಗೌರವಿಸಲಾಗಿದೆ.
ವಿದಾಯ: ೦೮-೦೧-೨೦೦೦
ಮಾಹಿತಿ ಕೃಪೆ: ಅಂತರ್ಜಾಲ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ