Homeಕವನಎರಡು ಕವನಗಳು

ಎರಡು ಕವನಗಳು

 ಮಹಾಮನೆಯ ಮಹಾಮಗಳು
_____________________
ಮಹಾಮನೆಯ ಮಗಳು
ಉರಿಯು೦ಡ ಕರ್ಪುರ
ಕದಳಿಯ ಕತ್ತಲೆಯ
ಬೆಳಗುವ ಮಹಾಬೆಳಗು
ಅಕ್ಕರೆಯ ಅಕ್ಕ
ಮಹಾದೇವಿಯಕ್ಕ

ತೊರೆದು ಕೌಶಿಕನರಮನೆ
ಹೊರಟಳು ಕಲ್ಯಾಣಕೆ
ತುಂಡು ಕಂಬಳಿ ಹೊತ್ತು
ತವರ ಮೋಹವ ಬಿಟ್ಟು
ತರು ಗುಲ್ಮ ಲತೆ ಹೂವು
ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು

ಮಗಳೆ೦ದು ಕರೆದೊಯ್ದ
ಅನುಭವದ ಮಂಟಪಕೆ
ಅಣ್ಣ ಬಸವಣ್ಣ ಶರಣರ ದಂಡು
ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ
ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ

ಉಡತಡಿಯ ಉಡುಗೊರೆ
ಕಲ್ಯಾಣದ ಐಸಿರಿ
ಶ್ರೀಶೈಲಕೆ ನಡೆ ನಿಂತಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು
___________________________

ಬಸವಾ ಎಂದರೆ ಬಾಳು
———————————
ಬಸವಾ ಎಂದರೆ ಬಾಳು
ಹಸನಾಯಿತು ನಾಡೊಳು
ವಚನ ಓದಿದರೆ ಮುಕ್ತಿ
ಶರಣ ಅನುಭದ ಶಕ್ತಿ
ಬಿದ್ದವರ ಎತ್ತಿದನು ನಮ್ಮ ಬಸವಣ್ಣ
ಕಾಯಕವಾ ಕಲಿಸುತಲಿ
ದಾಸೋಹವ ಮಾಡುತಲಿ
ಸಮತೆಯ ಗೀತೆ ಬರೆದನು ನಮ್ಮಣ್ಣ .
ವರ್ಗ ವರ್ಣವ ತೊರೆದು
ಗುಡಿ ಗೋಪುರ ಕೆಡುವಿ
ನಿಂತನು ದಿಟ್ಟೆದೆಯ ಕಲ್ಯಾಣದಣ್ಣ
ಕಿಡಿಗಳು ಇಟ್ಟರು ಕರ್ಪುರದ ಕೊಳ್ಳೆ
ಧಗ ಧಗಿಸಿ ಉರಿದವೋ
ಶರಣರ ವಚನಗಳು .
ಮತ್ತೆ ಹೆಕ್ಕಿದರು ಎಡೆಯೂರ ಯತಿಗಳು
ಹಳಕಟ್ಟಿ ಅಜ್ಜನು ಹಾಕಿದನು ಅಚ್ಚನು
ವಚನಗಳು ಗುಡುಗುತಿವೆ ಕ್ರಾಂತಿಯ ಗೀತೆ
ಬಸವಾ ಬಸವಾ ಎನ್ನುವ ಮನಕೆ
ನುಡಿ ನಮನ ಹಣೆ ಹಚ್ಚು
ಬಸವಾ ಎಂದರೆ ಬಾಳು
ಹಸನಾಯಿತು ನಾಡೊಳು
————————————–
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group