spot_img
spot_img

ಆಧುನಿಕ ಸಂವಿಧಾನಗಳಿಗೆ ಶರಣರ ವಚನ ಸಂವಿಧಾನವೇ ಮೂಲ – ಬಿರಾದಾರ

Must Read

- Advertisement -

ಬೆಳಗಾವಿ: ಜಗತ್ತು ಸಂವಿಧಾನದ ಬಗ್ಗೆ ಯೋಚಿಸುವ ಮೊದಲೇ ಸಂಸದೀಯ ವ್ಯವಸ್ಥೆಯನ್ನು ಅಕ್ಷರಶಃ ಜಾರಿಗೊಳಿಸಿದ್ದ ಬಸವಾದಿ ಶರಣರ ವಚನ ಸಂವಿಧಾನವು ಆಧುನಿಕ ಸಂವಿಧಾನಗಳಿಗೆ ಮೂಲವಾಗಿದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.

ಲಿಂಗಾಯತ ಸಂಘಟನೆಯು ಆಯೋಜಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ‌ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ ‘ಶರಣರ ವಚನ ಸಂವಿಧಾನ’ ಎಂಬ ವಿಷಯದ ಕುರಿತು ಅನುಭಾವ ನೀಡಿದ ಅವರು, ಶರಣರ ವಚನ ಸಂವಿಧಾನವು ಬರೆದ ಸಂವಿಧಾನವಾಗಿರದೆ ಬದುಕಿದ ಸಂವಿಧಾನವಾಗಿದೆ. ಸಮಾನತೆ, ಭಾತೃತ್ವ, ಪರೋಪಕಾರ, ಕಾಯಕ, ಪ್ರಸಾದ, ದಾಸೋಹ, ಸ್ತ್ರೀ ಸಬಲೀಕರಣ, ವೈಚಾರಿಕ-ವೈಜ್ಞಾನಿಕ ಮನೋಭಾವಗಳು ಶರಣ ವಚನ ಸಂವಿಧಾನದ ಪ್ರಮುಖ ಆಶಯಗಳಾಗಿವೆ ಎಂದು ಪ್ರತಿಪಾದಿಸಿದರು.

ಶರಣ ಸಂಗಮೇಶ ಅರಳಿಯವರು ಅಧ್ಯಕ್ಷತೆ ವಹಿಸಿದ್ದರು. ಶರಣೆ ಮಹಾದೇವಿ ಅರಳಿಯವರು ಪ್ರಾರ್ಥಿಸಿದರು. ಬಿ.ಪಿ. ಜವಣಿ ವಿ.ಕೆ. ಪಾಟೀಲ ಸುವರ್ಣಾ ಗುಡಸ ವಚನಗಳನ್ನು ಹಾಡಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ವೈ. ಮೆಣಸಿನಕಾಯಿಯವರು ಅತಿಥಿ ಪರಿಚಯ ಮಾಡಿದರು. ಶರಣೆ ವಿದ್ಯಾ ಅಜಗುಣಕರ ದಾಸೋಹಸೇವೆ ಸಲ್ಲಿಸಿದರು.
ಸುರೇಶ ನರಗುಂದ ವಂದಿಸಿದರು.

- Advertisement -

ಆನಂದ ಕರಕಿ, ಸುನಿಲ ಸಾಣಿಕೊಪ್ಪ, ಬಸವರಾಜ ಬಿಜರಗಿ, ವಿರೂಪಾಕ್ಷಿ ದೊಡಮನಿ, ಶಿವಾನಂದ ತಲ್ಲೂರ, ಸದಾಶಿವ ದೇವರಮನಿ, ಶಶಿಭೂಷಣಪಾಟೀಲ, ಬಸವರಾಜ ಕರಡಿಮಠ, ಬಿಬಿ ಮಠಪತಿ, ಶ್ರೀದೇವಿ ನರಗುಂದ, ಉಪಸ್ಥಿತರಿದ್ದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group