spot_img
spot_img

ಹಾನಗಲ್ ತಾಲ್ಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು- ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ

Must Read

- Advertisement -

ಶ್ರೀಮತಿ ಕಾಶೀಕರ ಅವರು ಹಾನಗಲ್ಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಒಬ್ಬ ಸದ್ಗೃಹಿಣಿ.ಮನೆಯಲ್ಲಿ ವೇದ, ಉಪನಿಷತ್ತು, ಬ್ರಾಹ್ಮಣಕಗಳು,ಶ್ಲೋಕಗಳು, ಮುಂತಾದವುಗಳು ಸುಪ್ರಭಾತಗಳು.

ಸಂಪ್ರದಾಯ ಬದ್ದ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಸದಾಕಾಲವೂ ಸಾಹಿತ್ಯ ಮತ್ತು ಸಂಘಟನೆಗಳನ್ನು ಜೊತೆಯಲ್ಲಿ ಬದುಕುತ್ತಿರುವ ಹಿರಿಯ ಸಾಹಿತಿ.

ಎರಡು ನೂರು ವರ್ಷಗಳ ಹಿಂದಿನ ಯಜ್ಞ ಕುಂಡಗಳು:

ವೇದಮೂರ್ತಿ ಪಂಡಿತ ಸೀತಾರಾಮ ಶಾಸ್ತ್ರಿಗಳು ಈ ಮನೆಯ ವೇದ ಶಾಸ್ತ್ರ ಪಾರಂಗತರು. ಹಾನಗಲ್ಲಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಹೆಸರು ಮಾಡಿದವರು. ಸುಮಾರು ಎರಡು ನೂರು ವರ್ಷಗಳ ಹಿಂದೆ ಇದ್ದ ಯಜ್ಞ ಕುಂಡಗಳನ್ನು ಹಾಗೆ ಕಾಯ್ದುಕೊಂಡು ಬಂದಿದ್ದಾರೆ. ಇಲ್ಲಿ ನಿತ್ಯ ಪೂಜೆ,ಹೋಮ,ಹವನಗಳು ನಡೆಯುತ್ತಿರುತ್ತವೆ.

- Advertisement -

ಪ್ರತಿ ದಿನ ಒಂದಲ್ಲ ಒಂದು ರೀತಿಯ ಪೂಜಾ ಕೈಂಕರ್ಯಗಳು ನೇರವೇರುತ್ತವೆ. ಇವರ ಮನೆಯಲ್ಲಿ ನಿತ್ಯವೂ ಪಂಚಾಂಗ ದರ್ಶನ ಮಾಡಿಸುತ್ತಾರೆ. ಜಾತಕ ದೋಷಗಳನ್ನು ಸರಿಪಡಿಸುವ ಕಾರ್ಯ ನೆರವೇರುತ್ತಾರೆ.

ಗಜ ಗೌರಿ ವೃತ:

ಪ್ರತಿ ವರ್ಷ ಇವರ ಮನೆಯಲ್ಲಿ ನಡೆಯುವ ಈ ವೃತ ವಿಶೇಷ. ಹತ್ತು ಹಲವು ಭಕ್ಷ್ಯಗಳನ್ನು ತಯಾರಿಸಿ,ಮಹಿಳಾ ಮಣಿಗಳನ್ನು ಆಹ್ವಾನಿಸಿ ಬಾಗಿನ ಅರ್ಪಿಸುತ್ತಾರೆ. ಹತ್ತು ದಿನಗಳ ಕಾಲ ನಡೆಯುವ ಈ ವೃತ ತುಂಬ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಇದಲ್ಲದೇ ಐತಿಹಾಸಿಕ ತಾರಕೇಶ್ವರ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವ ವೈಖರಿ ತುಂಬ ಸುಂದರ.

ಮಾತೃ ಹೃದಯಿ:

ಮನೆಗೆ ಬಂದ ಅತಿಥಿಗಳನ್ನು ತಮ್ಮ ದೇವರಂತೆ ನೋಡಿಕೊಳ್ಳುತ್ತಾರೆ. ಇವರ ಮನೆಯಲ್ಲಿ ಅತಿಥಿ ಸತ್ಕಾರ ಪಡೆಯುವುದೇ ವಿಶೇಷ. ಸದಾಕಾಲವೂ ಸಹಾಯ ಹಸ್ತ ನೀಡಲು ಮುಂದಾಗುತ್ತಾರೆ.

- Advertisement -

ಸಾಹಿತ್ಯ ಮತ್ತು ಸಂಘಟನೆ:

ಸಾಹಿತ್ಯದ ವಿಷಯಕ್ಕೆ ಬಂದರೆ ಯಾವಾಗಲೂ ಹಲವಾರು ಸಾಹಿತ್ಯ ಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸದಾಕಾಲವೂ ಮಹಿಳೆಯರ ಪರವಾಗಿ ಅವರ ಅಭ್ಯುದಯಕ್ಕೆ ಸ್ಪಂದಿಸುತ್ತಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಟ ಮಾಡುತ್ತಾರೆ. ಪ್ರತಿ ತಿಂಗಳು ಏನಾದರೂ ನೆಪ ಮಾಡಿಕೊಂಡು ಸಾಹಿತ್ಯದ ಚಟುವಟಿಕೆಗಳನ್ನು ಮಾಡಲು ಹಂಬಲಿಸುತ್ತಾರೆ. ಹಲವಾರು ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದಾರೆ.

ಚೀನಾದಲ್ಲಿ ಕನ್ನಡ ರಾಜ್ಯೋತ್ಸವ:

ವಿದೇಶದಲ್ಲಿ ಅದರಲ್ಲೂ ಚೀನಾದಲ್ಲಿ ತಮ್ಮ ಮಕ್ಕಳೊಂದಿಗೆ ರಾಜ್ಯೋತ್ಸವ ಆಚರಿಸುತ್ತಾರೆ.ಚೀನಾದಲ್ಲಿ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ.ಹಾಗಂತ ಇಲ್ಲಿ ಆಚರಿಸುವುದಿಲ್ಲವೆಂದಲ್ಲ.ಇಲ್ಲಿಯೂ ಸದಾ ಕನ್ನಡಕ್ಕೆ ಮಿಡಿವ ಹೃದಯ ಇವರದು.

ಬೇಂದ್ರೆಯವರ ಮೆಚ್ಚುಗೆ:

ಬಾಲ್ಯದಲ್ಲಿ ಇವರು ನಾಡಿನ ವರಕವಿ ಬೇಂದ್ರೆಯವರ ಮುಂದೆ ಕಾವ್ಯ ವಾಚನ ಮಾಡಿ ಅವರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಬಸವ ಟಿವಿ ವಾಹಿನಿ:

ಬಸವ ಟಿವಿ ವಾಹಿನಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಾಹಿತ್ಯ ಕೃಷಿ:

ಕವನ ಸಂಕಲನಗಳು:

  1. ಶ್ರೇಯಂಕರಿ
  2. ಅಂತರಾಳದ ಅಲೆ

ಸಂಪಾದಿತ ಕೃತಿ:

  1. ಪಾಪು ಒಂದು ನೆನಪು(ಕವನ ಸಂಕಲನ)

ಕವಿಗೋಷ್ಟಿ:

ಹಲವಾರು ರಾಜ್ಯ, ರಾಷ್ಟ್ರ ಮಟ್ಟದ,ದಸರಾ,ಹಂಪಿ ಉತ್ಸವದ ಕವಿಗೋಷ್ಟಿಗಳಲ್ಲಿ ಕವಿತೆಗಳನ್ನು ವಾಚನ ಮಾಡಿದ್ದಾರೆ.

ಪ್ರಶಸ್ತಿ:

ಅನೇಕ ಕನ್ನಡಪರ ಸಂಘಟನೆಗಳು ಇವರನ್ನು ಗೌರವಿಸಿವೆ.

ಸೇವೆ:

  1. ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ.
  2. ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷೆ.

ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group