spot_img
spot_img

ಅಗಲಿದ ಯೋಧನಿಗೆ ನಮನ ಸಲ್ಲಿಸಿದ ಗುರ್ಲಾಪೂರ ಗ್ರಾಮಸ್ಥರು

Must Read

- Advertisement -

ಗುರ್ಲಾಪೂರ– ಭಾರತೀಯ ಸೇನೆಯ ಲ್ಯಾನ್ಸನಲ್ಲಿ ಸೇವೆ ಸಲ್ಲಿಸುತ್ತಿದ್ದ  ಗುರ್ಲಾಪೂರ ಗ್ರಾಮದ ಸೈನಿಕ ಪ್ರಕಾಶ ಉದ್ದಪ್ಪ ಇವಕ್ಕಿ(34)  ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನಹೊಂದಿದ್ದು ಯೋಧನ ಅಂತ್ಯಕ್ರಿಯೆ ಗುರುವಾರ ಸಂಜೆ  ಗ್ರಾಮದ ರುದ್ರ ಭೂಮಿಯಲ್ಲಿ ಅಪಾರ ಜನಸ್ತೋಮದ ಮಧ್ಯೆ ಜರುಗಿತು.

ಸೈನಿಕ ಪ್ರಕಾಶ ಉದ್ದಪ್ಪ ಇವಕ್ಕಿ(34) ದೆಹಲಿಯ ರಜೇರಿ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾಗಿದರು.  ಪ್ರಕಾಶ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತರಲಾಯಿತು.

- Advertisement -

ಬಳಿಕ ಅಲ್ಲಿಂದ ವಿಶೇಷ ಸೇನಾ ವಾಹನದ ಮೂಲಕ ಮೂಡಲಗಿ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಹತ್ತಿರ ಸಂಗೋಳಿ ರಾಯಣ್ಣ ವೃತ್ತದಲ್ಲಿ ಯೋಧನ ಪಾರ್ಥಿವ ಶರೀರವನ್ನು ಮೂಡಲಗಿ ತಾಲೂಕಾ ದಂಡಾಧಿಕಾರಿಗಳು,  ಪೋಲಿಸ್ ಇಲಾಖೆ, ಪುರಸಭೆ ಅಧ್ಯಕ್ಷರು,  ಹಾಲಿ ಮತ್ತು  ಮಾಜಿ ಸೈನಿಕರು, ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಕರುನಾಡು ಸೈನಿಕ ತರಬೇತಿ ಕೇಂದ್ರ ಶಿಬಿರಾರ್ಥಿಗಳು ಶಾಲಾಮಕ್ಕಳು ವಂದೆ ಮಾತರಂ, ಭಾರತಮಾತಾ ಕಿ ಜೈ, ಪ್ರಕಾಶ ಅಮರ ರಹೆ ಎಂದು ಹೇಳುತ್ತಾ  ಬರಮಾಡಿಕೊಂಡು ಅಲಂಕರಿಸಿದ ವಾಹನದಲ್ಲಿ  ವಿಶೇಷ ಮೆರವಣಿಗೆ ಮೂಲಕ ಪಟ್ಟಣದ ಮುಖ್ಯ ರಸ್ತೆ ಮೂಲಕ ಗುರ್ಲಾಪೂರ ಗ್ರಾಮಕ್ಕೆ ತೆರಳಿ ಗ್ರಾಮದ ಕಂಬಳಿ ಪ್ಲಾಟದವರೆಗೆ ಮೆರವಣಿಗೆ ನಡೆಸಿ ನಂತರ ಗ್ರಾಮದ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತಹಶೀಲ್ದಾರ ಡಿ.ಜಿ.ಮಹಾತ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಗೋಕಾಕ ಡಿವಾಯ್.ಎಸ್.ಪಿ, ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ಸರ್ವೋತ್ತಮ ಜಾರಕಿಹೊಳಿ, ಆಪ್ತ ಕಾರ್ಯದರ್ಶಿ ನಿಂಗಪ್ಪ ಕುರಬೇಟ, ಬಿ.ಇ.ಒ ಅಜೀತ ಮನ್ನಿಕೇರಿ, ತಾ.ಪಂ ಎಒ ಎಫ್.ಜಿ.ಚಿನ್ನನವರ,ಡಿ ವಾಯ್ ಎಸ್ಪಿ.ಮನೋಜಕುಮಾರ ನಾಯ್ಕ. ಗ್ರಾಮ ಲೆಕ್ಕಾಧಿಕಾರಿ ಎ ಎಸ್.ಬಾಗವಾನ ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಗಣ್ಯರಾದ ಭೀಮಪ್ಪ ಗಡಾದ, ಬಿ.ಬಿ.ಹಂದಿಗುಂದ, ಎನ್.ಟಿ.ಪಿರೋಜಿ, ಲಕ್ಕಣ್ಣ ಸವಸುದ್ದಿ, ಮೂಡಲಗಿ ಪುರಸಭೆ ಸದಸ್ಯರು,  ತಾಲೂಕಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮದ ಮಾಜಿ ಸೈನಿಕರು, ಗ್ರಾಮದ ಹಿರಿಯರಾದ ಬಿ ಸಿ ಮುಗಳಖೋಡ.ಆರ್ ಬಿ ನೇಮಗೌಡರ, ಆರ್ ಸಿ ಸತ್ತಿಗೇರಿ.ಕೆ ಆರ್ ದೇವರಮನಿ ಶಿವಬಸು ಮರಾಠೆ ವಿಠ್ಠಲ ಜಾಧವ  ರಾಮಪ್ಪ ಮರಾಠೆ. ಪ್ರಕಾಶ ಮುಗಳಖೋಡ.ಎಮ್ ಎಮ್ ಮುಕ್ಕುಂದ ಈರಪ್ಪ ಮುಗಳಖೋಡ ಶ್ರೀಶೈಲ ಮುಗಳಖೋಡ.ಮಹಾದೇವ ರಂಗಾಪೂರ ದುಂಡಪ್ಪ ಮುಗಳಖೋಡ ಎಸ್ ಜಿ ಹಂಚಿನಾಳ ಟಿ ಡಿ ಗಾಣಿಗೇರ ಭೀಮಪ್ಪ ಮರಾಠೆ  ಪುರಸಭೆ ಸದಸ್ಯ ಆನಂದ ಟಪಾಲ ಮತ್ತು ಖಾನಟ್ಟಿ ಗ್ರಾಮ ಪಂಚಾಯಿತ ಸದಸ್ಯರು, ಈರಯ್ಯಾ ಹಿರೇಮಠ, ಶಿವಾನಂದ ಹಿರೇಮಠ, ಸರಕಾರಿ ಪ್ರೌಡ ಶಾಲಾ  ಪ್ರಾಥಮಿಕ ಶಾಲೆ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಮತ್ತು ಶಿಕ್ಷಕವ್ರಂದ ಮುದ್ದು ಮಕ್ಕಳು ಆಶಾಕಾರ್ಯಕರ್ತೆಯರು,ಅಂಗನವಾಡಿ ಕಾರ್ಯರ್ತೆಯರು, ಗ್ರಾಮದ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ಹಾಗೂ ಯೋಧನ ಅಭಿಮಾನಿಗಳು ತಾಯಂದಿಯರು,,ಗ್ರಾಮಸ್ಥರು ಹಾಗು ಸುತ್ತಮುತ್ತಲಿನ ಹಳ್ಳಿಯಿಂದ ಆಗಮಿಸಿದ ಎಲ್ಲರೂ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.  

ಹುತಾತ್ಮ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಮತ್ತು ಗ್ರಾಮದ ಜನತೆಯ ಆಕ್ರಂದನ ಮುಗಿಲು ಮುಟ್ಟಿತು. ನೆರೆದಿದ್ದ ಸಾವಿರಾರು ಗ್ರಾಮಸ್ಥರು ಹಾಗೂ ಬೇರೆ ಬೇರೆ ಹಳ್ಳಿಗಳಿಂದ ಬಂದ ಜನರು ಶೋಕದ ಕೋಡಿ ಹರಿಸಿದರು ಮತ್ತು ತಾಯಿ ಪತ್ನಿ, ಸಂಬಂಧಿಕರ ಆಕ್ರಂದನ ನೆರೆದವರ ಕಣ್ಣೀರು ತರಿಸಿತು. ಗ್ರಾಮದಲ್ಲಿ  ಸಹಕಾರಿ ಸಂಘಗಳು ಬ್ಯಾಂಕಗಳು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಯೋಧನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group