spot_img
spot_img

ದೇಶೀಯ ಕ್ರೀಡೆ ಉಳಿಸುವ ಕೆಲಸ ನಮ್ಮಿಂದ ಆಗಬೇಕು – ಡಾ. ಬಿ ಜಿ ಮಠ

Must Read

spot_img
- Advertisement -

ಸಿಂದಗಿ: ದೇಶೀಯ ಕುಸ್ತಿ ಆಟದ ಹಿಂದೆ ಒಂದು ರಾಷ್ಟ್ರೀಯ ಸಂಸ್ಕೃತಿ ಯಿದೆ. ಗ್ರಾಮೀಣ ಮಟ್ಟದಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಕುಸ್ತಿಗಳನ್ನು ನಡೆಸುವ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿಕೊಂಡು ಬರಲಾಗಿದೆ ಆ ಕ್ರೀಡೆಗಳು ಪ್ರಸ್ತುತ ಇದು ನಶಿಸಿ ಹೋಗುತ್ತಿದೆ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದು ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪಟ್ಟಣದ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಕಾಲೇಜಿನಲ್ಲಿ ಶನಿವಾರ ನಡೆದ ಬೆಳಗಾಂವದ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಡಿ.12,13 ರಂದು ಪಟ್ಟಣದ ಶ್ರೀ ಸಾತವಿರೇಶ್ವರ ಸಭಾಭವನದಲ್ಲಿ ಜರುಗಲಿರುವ ಅಂತರ ಮಹಾವಿದ್ಯಾಲಯಗಳ ವಲಯ ಮಟ್ಟದ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ ಮಹಾರಾಜರು ಪ್ರತಿಯೊಂದು ದೇಶಿಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರಣೆ ನೀಡುತ್ತಿದ್ದರು ಅವುಗಳನ್ನು ನಾವೆಲ್ಲರು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿ ಗೋಲಾ ಮಾತನಾಡಿ, ಕುಸ್ತಿ ಪಟುಗಳ ತಯಾರಿಕೆಯಲ್ಲಿ ಕುಸ್ತಿ ಪೈಲವಾನ್ ಆರ್.ಬಿ.ಬೂದಿಹಾಳ ಕೊಡುಗೆ ಅಪಾರವಾಗಿದ್ದು ಅವರ ಕಾರ್ಯವನ್ನು ಮುಂದುವರೆಸಲು ರಾಣಿ ಚೆನ್ನಮ್ಮ ವಿವಿಯಿಂದ ಅನುಮತಿ ಪಡೆದುಕೊಂಡು ಕುಸ್ತಿ ಪಂದ್ಯಾವಳಿ ಅತ್ಯಂತ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿದೆ. ವಿಜಯಪುರ, ಬಾಗಲಕೋಟ, ಚಿಕ್ಕೋಡಿ ಮತ್ತು ಬೆಳಗಾಂವ ಎಂಬ 4 ವಲಯಗಳಿಂದ ಸುಮಾರು 150 ಕ್ಕೂ ಅಧಿಕ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳಿಗೆ ಸುಮಾರು 55 ಕೆಜಿಯಿಂದ 120 ಕೆಜಿ ವರೆಗೂ ತೂಕ ನಿಗದಿ ಪಡಿಸಲಾಗಿದೆ. ಡಿ.12,13 ರಂದು ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಕ್ರೀಡಾಕೂಟ ಜರುಗಲಿದೆ. ಫ್ರೀ ಸ್ಟೈಲ್, ಗ್ರೀಕೋ ಹಾಗೂ ರೋಮನ್ ಶೈಲಿಯಲ್ಲಿ ಪಂದ್ಯ ನಡೆಯಲಿದೆ. 8 ಜನ ನುರಿತ ಕ್ರೀಡಾ ನಿರ್ಣಾಯಕರು ಕಾರ್ಯ ನಿರ್ವಹಿಸಲಿದ್ದಾರೆ. ಈ ಸಂಧರ್ಭದಲ್ಲಿ ಯುನಿರ್ವಸಿಟಿ ಬ್ಲೂ ಆಯ್ಕೆ ನಡೆಯಲಿದೆ. ಎಲ್ಲ ಕ್ರೀಡಾ ಪಟುಗಳಿಗೆ ಸಂಸ್ಥೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

- Advertisement -

ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕೊಣ್ಣೂರಿನ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು ಸಾನ್ನಿಧ್ಯದಲ್ಲಿ  ಜಮಖಂಡಿ ಶಾಸಕ ಆನಂದ ನ್ಯಾಮಗೋಡ ಕಾರ್ಯಕ್ರಮವನ್ನು ಉದ್ಘಾಟಲಿಸಿದ್ದಾರೆ.  ನಿರ್ದೇಶಕರಾದ ಅಶೋಕ ವಾರದ, ಗಂಗಾಧರ ಜೋಗೂರ, ಶಿವಾನಂದ ರೇಬಿನಾಳ ಹಾಗೂ ಎರಡನೆ ದಿನ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಟಿಎಸ್‍ಪಿಎಸ್ ಮಂಡಳಿಯ ಚೇರಮನ್ ಅಶೋಕ ಮನಗೂಳಿ, ಸಂಘವಿ ನೆಹರು ಪೋರವಾಲ, ಕುಸ್ತಿ ಪೈಲವಾನ್ ಆರ್.ಬಿ.ಬೂದಿಹಾಳ, ಡಾ.ಬಿ.ಜಿ.ಮಠ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಿ.ಎಮ್.ಪಾಟೀಲ ಮಾತನಾಡಿದರು, ಪತ್ರಿಕಾ ಗೋಷ್ಠಿಯಲ್ಲಿ ಡಾ.ಶರಣಬಸವ ಜೋಗೂರ, ಶಿವಮಾಹಾಂತ ಪೂಜಾರಿ, ಎಮ್.ಜೆ.ಸಂಕಪಾಲ, ಎಸ್.ಎಸ್.ಮುತ್ತಿನಪೆಂಡಿಮಠ, ಬಿ.ಜಿ.ಅವಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group