spot_img
spot_img

ಕಾರಂಜಾ ಜಲಾಶಯ ಭರ್ತಿ : ನದಿ ಪಾತ್ರಕ್ಕೆ ಎಚ್ಚರಿಕೆ

Must Read

- Advertisement -

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಸತತ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ (ಕೆ) ಗ್ರಾಮ ಕಾರಂಜಾ ಜಲಾಶಯ ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿದೆ

ಕಾರಣ ಮುಂಜಾಗ್ರತ ಕ್ರಮವಾಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ.

ಸತತ ಮಳೆಯಿಂದಾಗಿ ಯಾವಾಗ ಬೇಕಾದರೂ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಶುಕ್ರವಾರ ಬೆಳಗ್ಗೆ 11.30ರಿಂದ 600 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು.

- Advertisement -

ಸದ್ಯ ಜಲಾಶಯದಲ್ಲಿ 729 ಕ್ಯೂಸೆಕ್ಸ್ ಒಳ ಹರಿವು ಇದ್ದು, 600 ಕ್ಯೂಸೆಕ್ಸ್ ಹೊರಗಡೆ ನೀರು ಬಿಡಲಾಗುತ್ತಿದೆ. 7.691 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯದಲ್ಲಿ ಈಗ 6.512 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಪೈಕಿ 6.137 ಟಿಎಂಸಿ ಲೈವ್ ಸ್ಟೋರೇಜ್ ಇದ್ದು ಜಲಾಶಯ ಸಂಪೂರ್ಣ ಭರ್ತಿಯಾಗಲು ಕೇವಲ 0.375 ಟಿಎಂಸಿ ಮಾತ್ರ ಬಾಕಿ ಉಳಿದಿದೆ. ಶೀಘ್ರ. ಮುಂಜಾಗೃತಾ ಕ್ರಮವಾಗಿ ಜಲಾಶಯದ ಎರಡು ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಈ ನೀರು ಕಾರಂಜಾ ಜಲಾಶಯದಿಂದ ತೂಗಾಂವ್,

ನೆಲವಾಡ, ಮಾಸಿಮಾಡ, ಡಾವರಗಾಂವ್, ಕುರಬಖೇಳಗಿ, ಸಿರ್ಸಿ, ಹರನಾಳ, ದಾಡಗಿ ಆನಂದವಾಡಿ, ಭಾತಂಬ್ರಾ, ಎಕಲಾಸಪುರ, ಬೋಳೆಗಾಂವ್ ಮಾರ್ಗವಾಗಿ ಮಾಂಜ್ರಾ ನದಿಯಲ್ಲಿ ಸೇರುತ್ತದೆ. ಭಾರಿ ಮಳೆಯಿಂದಾಗಿ ಎಲ್ಲೆಡೆ ನೀರು ಸಂಗ್ರಹವಿದ್ದು, ನೀರಿನ ರಭಸ ಹೆಚ್ಚಾಗಿರುವ ಕಾರಣ ನದಿ ಪಾತ್ರದ ಜನ, ಜಾನುವಾರು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group