spot_img
spot_img

ಇಂದಿನ ಶಿಕ್ಷಣ ಪದ್ಧತಿಗೆ ನಾವೆಲ್ಲ ಹೊಂದಿಕೊಳ್ಳಬೇಕು – ಪ್ರಾ.ಹೆಗ್ಗಣದೊಡ್ಡಿ

Must Read

spot_img
- Advertisement -

ಸಿಂದಗಿ- ಈ ಸಮಾಜವನ್ನು ಮೇಲ್ ಸ್ತರಕ್ಕೆ ಕೊಂಡ್ಯೊಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಹೇಳಿದರು.

ಅವರು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿರುವ 2020-21 ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನೆ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಶಿಕ್ಷಣ ಪದ್ದತಿ ವ್ಯಾಪಕವಾಗಿ ಬದಲಾವಣೆಯಾಗುತ್ತಿದೆ. ಬದಲಾಗುತ್ತಿರುವ ವ್ಯವಸ್ಥೆಗೆ ನಾವೆಲ್ಲ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಶಿಕ್ಷಕರು ಕೇವಲ ಪಠ್ಯದ ವಿಷಯವನ್ನು ಬೋಧನೆಗೆ ಬಳಸದೆ ಜಾಗತಿಕ ಮಟ್ಟದ ವಿಷಯವನ್ನು ಮುಂದಿಟ್ಟುಕೊಂಡು ಕಲಿಕಾ ಪ್ರಕ್ರಿಯೆಯನ್ನು ನೆರವೇರಿಸಬೇಕು ಎಂದರು.

- Advertisement -

ಈ ಸಂದರ್ಭದಲ್ಲಿ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸತೀಶಕುಮಾರ.ಜಿ ಅವರು ಮಾತನಾಡಿ, ಶಿಕ್ಷಣ ಮಹಾವಿದ್ಯಾಲಯವು ಶಿಕ್ಷಕರನ್ನು ಉತ್ಪಾದಿಸುವ ಕೇಂದ್ರ. ಯೋಗ್ಯ ಶಿಕ್ಷಣದ ಜೊತೆಗೆ ಇಂದು ಶಿಕ್ಷಕರಿಗೆ ಉತ್ತಮ ಸಂಸ್ಕಾರದ ಅವಶ್ಯವಿದೆ ಅದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವಲ್ಲಿ ಮುಂದಾಗಬೇಕು. ಇಂದು ಶಿಕ್ಷಕರು ಅತ್ಯಂತ ಎಚ್ಚರ ವಹಿಸಿ ಕಾರ್ಯ ನಿರ್ವಹಿಸಬೇಕಿದೆ. ಸಮಾಜದ ಅನೇಕ ಸವಾಲುಗಳನ್ನು ಎದುರಿಸಿ ಅವುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಎಸ್.ಆರ್.ಬಿರಾದಾರ ಮಾತನಾಡಿದರು. ವೇದಿಕೆ ಮೇಲೆ ಕಾರ್ಯಾಧ್ಯಕ್ಷ ಪ್ರೊ.ಎಸ್.ಬಿ.ಅಂಕಲಗಿ, ಪ್ರೋ ಎಸ್.ಸಿ.ಸುಣಗಾರ, ಭಾಗೇಶ ಪಾಟೀಲ, ಸಿದ್ದು ಹರನಾಳ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ಎ.ಜಾಗೀರದಾರ, ಎಸ್.ಎಮ್.ಹಿರೇಮಠ, ಎಸ್.ಬಿ.ಓಂಕಾರ, ಪ್ರದೀಪ ಕತ್ತಿ, ಮಂಜುನಾಥ ಪರಮಾನಂದ, ಎಸ್.ಎಮ್.ಕಲ್ಲನಗೌಡರ, ಎಚ್.ಸಿ.ಕೆಂಬಾವಿ, ಗೀತಾ ಅರಳಿಮರ, ಎಸ್.ಜಿ.ಭಾಸಗಿ ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group