ಮೂಡಲಗಿ: ಮಹಿಳೆಯರು ಅಡುಗೆ ಮನೆಗೆ ಮಾತ್ರ ಸಿಮೀತವಾಗದೇ ಮನೆಯಲ್ಲೇ ದುಡಿಯಬಹುದು. ಹೊಲಿಗೆ ಅಥವಾ ಕಂಪ್ಯೂಟರ್ ಜ್ಞಾನ ಪಡೆದುಕೊಂಡು ಸ್ವಾವಲಂಬಿಯಾಗಿ ಕೆಲಸ ಮಾಡಬಹುದು ಎಂದು ಗೋಕಾಕ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಸ್ ವಿ ದೇಮಶೆಟ್ಟಿ ಹೇಳಿದರು.
ಇತ್ತೀಚೆಗೆ ಪಟ್ಟಣದ ನಾಗಲಿಂಗ ನಗರದಲ್ಲಿ ಜರುಗಿದ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿಯ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಜ್ಞಾನವಂತರಾದರೆ ಕುಟುಂಬ ಉತ್ತಮವಾಗಿ ನಡೆಯಲಿದೆ. ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘದ ಮೂಲಕ ಮಹಿಳೆಯರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಇಂತಹ ಅವಕಾಶಗಳನ್ನು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು ಕರೆ ನೀಡಿದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಬಡತನದಲ್ಲಿ ಎಲ್ಲ ಮಹಿಳೆಯರು ಕಂಪ್ಯೂಟರ್ ಹಾಗೂ ಹೊಲಿಗೆ ತರಬೇತಿಯನ್ನು ಕಲಿಯಲು ಆರ್ಥಿಕವಾಗಿ ಸಮಸ್ಯೆ ಇರುತ್ತದೆ ಆದರೆ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇವಾ ಸಂಘವು ಬಡ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡಿ ಬಡ ಮಹಿಳೆಯರು ಕೂಡಾ ಸ್ವಾವಲಂಬಿಯಾಗಿ ದುಡಿಯಲು ಸಹಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ ಗೋಡ್ಯಾಗೋಳ ಮತನಾಡಿ, ಮಹಿಳೆಯರಿಗೆ ಜ್ಞಾನದ ಅವಶಕ್ಯತೆ ಬಹಳ ಮುಖ್ಯವಾಗಿದ್ದು, ಕಂಪ್ಯೂಟರ್ ಜೊತೆಗೆ ಹೊಲಿಗೆ ಯಂತ್ರದ ಬಗ್ಗೆ ಕಲಿತರೆ ತಮ್ಮ ಮಕ್ಕಳಿಗೂ ಕಲಿಸಲು ಸಹಾಯಕವಾಗುತ್ತದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್ ಬಹಳ ಅವಶ್ಯವಾಗಿದ್ದು, ಪ್ರತಿಯೊಬ್ಬ ಮಹಿಳೆಯು ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವುದು ಉತ್ತಮ. ಸಾಕಷ್ಟು ಕೆಲಸಗಳನ್ನು ಮನೆಯಲ್ಲಿ ಮಾಡಿ ತಾನು ಕೂಡಾ ಸ್ವಾವಲಂಬಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ಪಟ್ಟಣದ ನ್ಯಾಯವಾದಿ ಲಕ್ಷ್ಮಣ ಅಡಿಹುಡಿಯವರಿಗೆ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ನ್ಯಾಯವಾದಿ ಗಳಾದ ಎಮ್ ಆಯ್ ಬಡಿಗೇರ, ಎಸ್.ಬಿ.ನೇಸರಗಿ, ವಾಯ್ ಎಸ್ ಖಾನಟ್ಟಿ, ಶಿಕ್ಷಕ ಎಸ್ ವಾಯ್ ಸುಣಗದ, ಎ ವಾಯ್ ಕೌಜಲಗಿ, ಸಂಘದ ಸದಸ್ಯರಾದ ಪೂರ್ಣಿಮಾ ಗೊಡ್ಯಾಗೋಳ, ವಿಜಯಲಕ್ಷ್ಮೀ ರೇಳೆಕರ,ಲಕ್ಷ್ಮೀ ಗೊಡ್ಯಾಗೋಳ, ರಮೇಶ ಉಪ್ಪಾರ,ಸುಭಾಸ ಗೋಡ್ಯಾಗೋಳ, ಮಂಜುನಾಥ ರೇಳೆಕರ ಹಾಗೂ ಅನೇಕರು ಉಪಸ್ಥಿತರಿದ್ದರು.