ಮೂಡಲಗಿ: ಪಟ್ಟಣದ ಪುರಸಭೆಯ ವ್ಯಾಪ್ತಿಯ ಗಂಗಾನಗರದ ವಾರ್ಡ 2ರಲ್ಲಿ ಈ ಹಿಂದೆ ನೀಡಿರುವ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನೀಡಿರುವ ನಿವೇಶನದಲ್ಲಿ ಹಕ್ಕು ಪತ್ರ ಪ್ರಕಾರ ಜಾಗೆಯನ್ನು ನೀಡಬೇಕು ಮತ್ತು ಗಂಗಾ ನಗರದ ಮುಖ್ಯ ರಸ್ತೆಯ ಪಕ್ಕದಲ್ಲಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಪ್ರಾರಂಭಿಸ ಬೇಕೆಂದು ಒತ್ತಾಯಿಸಿ ಗಂಗಾ ನಗರದ ನಿವಾಸಿಗಳು ಪಟ್ಟಣದ ಪುರಸಭೆ ಮುಂದೆ ಪ್ರತಿಭಟಿಸಿ ಪುರಸಭೆ ಅಧಿಕಾರಿಗಳಿಗೆ ಸೋಮವಾರದಂದು ಮನವಿ ಸಲ್ಲಿಸಿದರು.
ಗಂಗಾ ನಗರದ ವಾರ್ಡ 2ರಲ್ಲಿ ಇಪ್ಪತ್ತು ವರ್ಷಗಳಿಂದ ಆಗದೆ ಇದ ಚರಂಡಿ ಕಾಮಗಾರಿ ಇತ್ತೀಚೆಗೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಿರ್ಮಾಣವಾಗುತ್ತಿದ್ದು ಕೈಗೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿಯನ್ನು ತಕರಾರು ಮಾಡಿ ಕೆಲವು ಜನರು ಬಂದ್ ಮಾಡಿಸಿದ್ದಾರೆ. ಕರ್ನಾಟಕ ಸರ್ಕಾರವು ಬಡವರಿಗೆ ನೀಡಿರುವ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಕ್ಕುಪತ್ರದ ಪ್ರಕಾರ ವಿಸ್ತೀರ್ಣವನ್ನು ನೀಡಬೇಕು. ಒಂದು ವೇಳೆ ಕಾಮಗಾರಿ ಪ್ರಾರಂಭವಾಗದಿದ್ದರೇ ಹಾಗೂ ವಿಸ್ತೀರ್ಣವನ್ನು ನೀಡದೆ ಇದ್ದರೆ ಗಂಗಾನಗರದ ಸಾರ್ವಜನಿಕರು ಎಲ್ಲರೂ ಸೇರಿ ಪುರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನಾಕಾರದೊಂದಿಗೆ ವಾರ್ಡ ನಂ 2ರ ಸದಸ್ಯ ಶಿವು ಚಂಡಕಿ ಮಾತುಕತೆ ನಡೆಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಗಂಗಾನಗರ ನಿವಾಸಿಗಳಾದ ನಂಜುಂಡಿ ಸರ್ವಿ, ಭೀಮಶಿ ತಳವಾರ, ಲಕ್ಕಪ್ಪ ಹೊಸಮನಿ, ಪಡದಪ್ಪ ಕೋತಿನ, ಭೀಮಶಿ ಅಂತರಗಟ್ಟಿ, ಮಾರುತಿ ದೇಮನ್ನವರ, ಅಮೀನ ಶೇಖ, ಯಶವಂತ ಸರ್ವಿ, ಸುನೀಲ ಹಾದಿಮನಿ, ಲಕ್ಷ್ಮೀ ತೋಟಗಿ, ರೇಣುಕಾ ದೊಡಮನಿ ಮತ್ತಿತರರು ಉಪಸ್ಥಿತರಿದರು.