ನಾ ಕಂಡ ಕಾರ್ಮಿಕ
ಅಲೆಮಾರಿ ಬದುಕು ಆನಂದ ಕಡಿಮೆ
ಮಳೆ ಇಲ್ಲ ಊರಿನಲಿ ಬರಗಾಲವು ಬಿದ್ದು
ಬಾಯ ತೆರೆದು ಬಿರುಕು ಬಿಟ್ಟಿವೆ ನೋಡಿ
ಹೊಲ ಗದ್ದೆಗಳು ಗಂಜಿಗೂ ಗತಿ ಇಲ್ಲ
ಹುಟ್ಟಿದ ಊರನು ಬಿಟ್ಟು ಪಟ್ಟಣಕ್ಕೆ
ಅರಿಸಿ ಬಂದಿರುವೆವು ಹೊಟ್ಟೆ ಪಾಡಿಗಾಗಿ
ಬದುಕಿಕೊಂದು ಆಸರೆ ಸಿಕ್ಕಿತೆನ್ನುವದರಲಿ
ವಕ್ಕರಿಸಿತು ನೋಡಿ ಸ್ವಾಮಿ ಕರೋನ
ಎಲ್ಲೆಲ್ಲೂ ನಡೆಸುತ್ತಿದೆ ಅದರ ಕಾರುಬಾರು
ಮತ್ತೆ ಉಳಿಯಿತು ನಮಗೆ ಕಾಲಿ ಜೇಬು
ಕಿಸೆನಲ್ಲಿ ಕಾಸಿಲ್ಲ ಊರಿಗ್ಹೋಗುವ ಮನಸಿಲ್ಲ
ನೆಲೆಯಿಲ್ಲದಂತೆ ಆಗಿದೆ ನಮ್ಮ ಬದುಕು
ಇದು ನಾ ಕಂಡ ಒಬ್ಬ ಕಾರ್ಮಿಕನ ಕಥೆ
ಈ ಕರೋನ ಮತ್ತೆ ಬಂದು ಕಾಡುತ್ತಿದೆ
ನಮ್ಮ ಕಾರ್ಮಿಕರ ಹೊಟ್ಟೆ ಬರಿದಾಗಿದೆ
ಕಾಯಕ ಬಿಟ್ಟು ಅವರಿಗೆ ಬೇರೆ ತಿಳಿಯದು
ಹಗಲಿರುಳು ಕೆಲಸವನು ಮಾಡುವರು
ಕಾಯಕ ನಿಷ್ಠೆಯನು ಮೆರೆಯುವರು
ಕಾಯಲಿ ಆ ಭಗವಂತ ಅವರನು
ಕರೋನ ಬೇಗೊಗಲಿ ಅವರ ಕಷ್ಟ ನೀಗಲಿ
ಬಸವರಾಜ ವೈ ಕೆ
ವಿಜಯಪುರ
8431627740
ಕಾರ್ಮಿಕ
ಕಾಯಕ ನಿರತ ಕಾರ್ಮಿಕನು
ದುಡಿಮೆಯೇ ದೇವರು ಎಂದಿಹನು
ತನ್ನವರಿಗಾಗಿ ಬೆವರು ಸುರಿಸಿ
ತ್ಯಾಗಮಯಿ ತಾ ಎನಿಸಿಹನು.
ಬಡವ ಬಲ್ಲಿದ ರೆಂಬೆ ಭೇದವಿಲ್ಲ
ಕಾರ್ಮಿಕರೆಲ್ಲಾ ಒಂದೇ
ಮೇಲು ಕೀಳು ಕಾಯಕದೊಳಿಲ್ಲ
ಶ್ರದ್ಧೆಯೇ ದೇವರು ಎಂದೇ
ದುಡಿತಕ್ಕೆ ಕೋಟಿ ಬಂದರು
ಅನ್ನವೇ ಬೇಕು ತಿನ್ನಲು
ಹೊಳಪಿದ್ದರು ಕೊಳಕಿದ್ದರು
ನಿಷ್ಠೆಯು ಬೇಕು ದುಡಿಯಲು.
ವಿಶ್ವ ಮಾನವ ತಿಳಿದುಕೊ
ನೀನೊಂದು ದುಡಿಯುವ ವರ್ಗ
ದುಡಿಯುವ ಕೈಗೆ ಸೌಲಭ್ಯಗಳ
ಕೊಟ್ಟು ಕರುಣಿಸಿದೆ ನಿಸರ್ಗ.
ಇಷ್ಟದಿ ಕಾಯಕ ನೀ ಮಾಡು
ಕಷ್ಟವೆ ಬರದು ಎಂದೆಂದು
ಇರುವ ಹುದ್ದೆಗೆ ಗೌರವ ನೀಡು
ಸಂತೃಪ್ತಿಯ ಜೀವನ ನಿನ್ನದು.
ಮಾಲೀಕ ನೀನೇ ಸೇವಕ ನೀನೇ
ಜಗದೊಂದೇ ದುಡಿಯುವ ವರ್ಗ
ದ್ವೇಷ ,ಅಸೂಯೆ, ಅಂತಸ್ತು ತೊರೆದು
ಒಂದಾಗಿದ್ದರೆ ಬಾಳಿದು ಸ್ವರ್ಗ.
ಮಹೇಂದ್ರ ಕುರ್ಡಿ