spot_img
spot_img

ರಾಜ್ಯ ರಾಜಕೀಯದ ಯಯಾತಿ ಜಗದೀಶ ಶೆಟ್ಟರ

Must Read

- Advertisement -

ಶುಕ್ರಾಚಾರ್ಯರ ಶಾಪದಿಂದ ಅಕಾಲಿಕ ವೃದ್ಧಾಪ್ಯ ಪಡೆದ ಯಯಾತಿ ಶಾಪವಿಮೊಚನೆಗಾಗಿ ಪರಿಹಾವನ್ನು ಕೇಳಿದಾಗ ಶುಕ್ರಾಚಾರ್ಯರು ನಿನಗೆ ಯಾರಾದರೂ ತಮ್ಮ ಯೌವನವನ್ನು ಧಾರೆಯರೆಯುವುದಾದರೆ ನೀನು ವೃದ್ಧಾಪ್ಯದಿಂದ ಪಾರಾಗುವೆ ಎಂದು ತಿಳಿಸಿದಾಗ, ಯಯಾತಿ ಎಲ್ಲರನ್ನೂ ಅಂಗಲಾಚಲಾಗಿ ಯಾರೂ ಕೂಡ ಯೌವನ ಧಾರೆ ಎರೆಯಲು ಸಿದ್ಧರಾಗುವುದಿಲ್ಲ. ಕಡೆಗೆ ಆತನ ಮಗ ಪುರು ತನ್ನ ಯೌವ್ವನವನ್ನು ತಂದೆ ಯಯಾತಿಗೆ ಧಾರೆಯೆರೆಯುತ್ತಾನೆ.

ಜಗದೀಶ ಶಟ್ಟರ ಅವರ ವಿಷಯದಲ್ಲಿ ನನಗೆ ಪದೆ ಪದೆ ಇದೆ ಕಥೆ ನೆನಪಾಗುತ್ತದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ಶಾಪಕ್ಕೆ ತುತ್ತಾಗಿ ವಿಧಾನಸಭೆ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿ ಸೋತು ನಂತರ ಪರಿಷತ್ ಸದಸ್ಯರಾಗಿ ನಂತರ ಮತ್ತೆ ವಾಪಸ್ ಭಾಜಪಕ್ಕೆ ಬಂದು ಪರಿಹಾರಕ್ಕೆ ಕಾದಾಗ ಯಯಾತಿ ಇತರರಲ್ಲಿ ಬೇಡಿದಂತೆ ಶೆಟ್ಟರ ಹಾವೇರಿ ಧಾರವಾಡ ಇತ್ಯಾದಿ ಕ್ಷೇತ್ರ ಕೇಳಿದಾಗ ಎಲ್ಲರೂ ನಿರಾಕರಿಸಲಾಯಿತು. ಆದರೆ ಆಧುನಿಕ ಪುರು ಸಂಕಲ್ಪ ಶೆಟ್ಟರ ತಮ್ಮ ಮಡದಿ ಶ್ರದ್ಧಾ ಅವರ ರಾಜಕೀಯ ಭವಿಷ್ಯವನ್ನು ತಂದೆ ಜಗದೀಶ ಶೆಟ್ಟರ ಅವರಿಗೆ ಧಾರೆ ಎರೆಯುತ್ತಾರೆ.

- Advertisement -

ಯಯಾತಿಯಂತೆ ಜಗದೀಶ ಶೆಟ್ಟರ ಅವರ ಬಯಕೆಯೂ ಕೂಡ ಇನ್ನೂ ಇನ್ನೂ ಹೆಚ್ಚು ಹೆಚ್ಚು ಅಧಿಕಾರ ನಡೆಸಬೇಕೆಂಬುದೆ ಆಗಿದೆ.

ನರೇಂದ್ರ ಮೋದಿ ಅವರ ಸರ್ಕಾರ 2023 ರ ಸಪ್ಟಂಬರ ನಲ್ಲಿ ಸಂವಿಧಾನದ 81 (3) ಮತ್ತು 82 ನೇ ವಿಧಿಗಳಿಗೆ ತಿದ್ದುಪಡಿ ತಂದು 33% ಮಹಿಳಾ ಮಿಸಲಾತಿಗೆ ಅಂಗೀಕಾರ ನೀಡಿದ್ದಾರೆ ಅದು 2024 ರ ನಂತರ ಜಾರಿಗೆ ಬರಲಿದೆ. ಈ ಕಾರಣಕ್ಕೆ ಮುಂದೆ ಸಂಪುಟದಲ್ಲಿ ಮಹಿಳೆಯರ ಸ್ಥಾನಮಾನ (ಸಚಿವ ಸ್ಥಾನ) ಗಳು ಹೆಚ್ಚಾಗ ಬೇಕಾದುದು ಅನಿವಾರ್ಯ.

ಶೃದ್ಧಾ ಅಂಗಡಿ ಅವರಿಗೆ ಎಂಪಿ ಟಿಕೆಟ್ ನೀಡಿದ್ದರೆ ಮಹಿಳಾ ಮಿಸಲಾತಿ ಅನುಷ್ಠಾನ ಆಗುವುದರೊಳಗೆ ಅವರಿಗೆ ರಾಜಕೀಯ ಹಿರಿತನ ಸಿಗುತ್ತಿತ್ತು. ಈಗಾಗಲೆ ರಾಜ್ಯ ಕೋಟಾದಲ್ಲಿರುವ ನಿರ್ಮಲಾ ಸೀತಾರಾಮನ್ ಹಾಗೂ ಶೋಭಾ ಕರಂದ್ಲಾಜೆ ಅವರು ವಯೋಸಹಜ ಕಾರಣಗಳಿಂದ ರಾಜಕೀಯ ನಿವೃತ್ತರಾಗುತಿದ್ದರು. ಆ ಮೂಲಕ ಅವರು ಸೀನಿಯಾರಿಟಿ ಮತ್ತು ಯುವ ಪ್ರಾತಿನಿಧ್ಯ ಅಡಿ ಮಂತ್ರಿ ಆಗುತ್ತಿದ್ದರು.

- Advertisement -

ತಮ್ಮ ತಂದೆಯವರಾದ ದಿವಂಗತ ಸುರೇಶ ಅಂಗಡಿಯವರ ರಾಜಕೀಯ ಜೀವನ ಕಂಡಿದ್ದ ಶೃದ್ಧಾ ಅವರು ಮಾವ ಶೆಟ್ಟರ ರಾಜಕೀಯ ಗರಡಿಯಲ್ಲಿ ಸಂಸದರಾಗಿ ಪಳಗುವ ಅವಕಾಶವೂ ಇತ್ತು. ಶೃದ್ಧಾ ಅವರು ಕೂಡ ಶೆಟ್ಟರ ಮನೆಯ ನಂದಾದೀಪವೆ ಆಗಿದ್ದಾರೆ. ಈ ಕಾರಣದಿಂದ ಶೆಟ್ಟರ್ ಅವರು ನನಗೆ ಬೇಕು ನನ್ನ ಹೊರತು ಬೇರೆಯಾರಿಗೂ ಬೇಡ ಎಂದು ಹಠ ಹಿಡಿಯದೆ ಶೃದ್ಧಾ ಅವರಿಗೆ ಟಿಕೆಟ ಕೊಡಿಸ ಬೇಕಿತ್ತು. 

ಈ ವರೆಗೆ ಜಗದೀಶ ಶೆಟ್ಟರ ಅವರು ರಾಜಕೀಯದಲ್ಲಿ ಪಡೆದ ಸ್ಥಾನಮಾನಗಳ ಯಾದಿ.

  • 1990. ಬಿಜೆಪಿ ಹುಬ್ಬಳ್ಳಿ ಗ್ರಾಮೀಣ ಘಟಕದ ಅಧ್ಯಕ್ಷರು.
  • 1994. ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷರು.
  • 1994 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ. (ವಿಧಾನಸಭೆ)
  • 1996. ಕರ್ನಾಟಕ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು.
  • 1999. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • 1999 ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು.
  • 2004 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • 2005. ಭಾರತೀಯ ಜನತಾ ಪಕ್ಷದ (ಕರ್ನಾಟಕ) ರಾಜ್ಯಾಧ್ಯಕ್ಷರು.
  • ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ 18 ಫೆಬ್ರವರಿ 2006 ಮತ್ತು 8 ಅಕ್ಟೋಬರ್ 2007 ರ ನಡುವೆ ಒಂದು ವರ್ಷ ಕರ್ನಾಟಕ ಕಂದಾಯ ಸಚಿವರು.
  • 2008ರಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • 2008. ಕರ್ನಾಟಕ ವಿಧಾನಸಭೆಯ ಸ್ಪೀಕರ್
  • 2009 ಮತ್ತು 2011 ರ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಕರ್ನಾಟಕ) ಸಚಿವರು.
  • 2012. ಕರ್ನಾಟಕದ ಮುಖ್ಯಮಂತ್ರಿ (12 ಜುಲೈ 2012-13 ಮೇ 2013)
  • 2013 ರಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • ಕರ್ನಾಟಕ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರು. (2013-2023)
  • 2013 ಮತ್ತು 2018 ರ ನಡುವೆ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು.
  • 2018. ಶಾಸಕರಾಗಿ ಆಯ್ಕೆ
  • ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ 20 ಆಗಸ್ಟ್ 2019 ಮತ್ತು 28 ಜುಲೈ 2021 ರ ನಡುವೆ ಕರ್ನಾಟಕ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು
  • 16 ಏಪ್ರಿಲ್ 2023 ರಂದು ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ.
  • 17 ಏಪ್ರಿಲ್ 2023 ರಂದು ಕಾಂಗ್ರೆಸ್ ಸೇರಿ ನಂತರ ವಿಧಾನ ಪರಿಷತ್ತಿನ ಸದಸ್ಯರಾಗಿ ಸದ್ಯ ರಾಜೀನಾಮೆ ನೀಡಿ ಮತ್ತು ಬಿಜೆಪಿ ಸೇರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಸ್ಪರ್ಧೆ.

ಅಂದಹಾಗೆ ದೇಶದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯಂತ ಉನ್ನತ ಹುದ್ದೆ ಹೊಂದಿದವರು ಮತ್ತೆ ಕೇಂದ್ರ ಮಂತ್ರಿ ಅಥವಾ ರಾಜ್ಯಪಾಲ ಹುದ್ದೆಗಳಿಗೆ ತೆರಳಬೇಕೆ ವಿನಹ ಮತ್ತೆ ಹಠ ಹಿಡಿದು ಕೆಳಹಂತದ ಮಂತ್ರಿ ಮನವಿ ಪಡೆದ ದಾಖಲೆಯೂ ಕೂಡ ಅವರ ಹೆಸರಿನಲ್ಲಿದೆ.

ನಮ್ಮಲ್ಲೊಂದು ಗಾದೆ ಮಾತಿದೆ “ಅತ್ತಿದ ಒಯ್ದ ಅಳಿಯಾಗ ದಾನ ಮಾಡಿದರು” ಅಂತ ಅದನ್ನ ಶೆಟ್ಟರ ವಿಷಯದಲ್ಲಿ “ಸೊಸೆಯದು ಒಯ್ದು ಮಾವನಿಗೆ ದಾನ ಮಾಡಿದರು” ಅಂತ ಬದಲಿಸಬಹುದು.


 ಮಲ್ಲಿಕಾರ್ಜುನ ಚೌಕಶಿ, ವಕೀಲರು 

( ಕಿರಿಯ ರಾಜಕೀಯ ವಿಶ್ಲೇಷಕರು)

- Advertisement -
- Advertisement -

Latest News

ನೆತ್ತಿಗೇರಿದ ಸಿಟ್ಟು ಇಳಿಸೋದು ಹೀಗೆ

ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group