ಅನ್ನದಾನವು ಶ್ರೇಷ್ಠ ದಾನವಾಗಿದೆ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 92ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಅತಿಥಿ ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಅವರು ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು.
ಲಯನ್ಸ್ ಕ್ಲಬ್‍ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದು ಇತರ ಸಂಸ್ಥೆಗಳಿಗೆ ಮಾದರೆಯೆನಿಸಿದೆ ಎಂದರು.
ಲಯನ್ಸ್ ಕ್ಲಬ್ ಸದಸ್ಯ ಡಾ. ಅನೀಲ ಪಾಟೀಲ ಅವರು ತಮ್ಮ ತಂದೆ ನಿಂಗನಗೌಡ ಹಾಗೂ ತಾಯಿ ಮಾತೋಶ್ರೀ ಸುಶೀಲಾತಾಯಿ ಅವರ ಸ್ಮರಣೆಗಾಗಿ ದಾಸೋಹ ಸೇವೆ ಮಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ ಪ್ರಾಸ್ತಾವಿಕ ಮಾತನಾಡಿ ಪ್ರತಿ ತಿಂಗಳು ಎರಡು ಬಾರಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅನ್ನದಾಸೋಹವನ್ನು ಏರ್ಪಡಿಸಲಾಗುತ್ತಿದೆ ಎಂದರು.
ದಾಸೋಹಿ ಡಾ. ಅನೀಲ ಪಾಟೀಲ, ಬಾಲಶೇಖರ ಬಂದಿ ಮಾತನಾಡಿದರು.
400ಕ್ಕೂ ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆಗೆ ಆರೋಗ್ಯ ತಪಾಸಣೆಗೆ ಬಂದಿದ್ದ ಸಾರ್ವಜನಿಕರು ಮತ್ತು ಅವರ ಸಂಬಂಧಿಕರು ಅನ್ನದಾಸೋಹದಲ್ಲಿ ಭಾಗಹಿಸಿದ್ದರು.
ಸಂಜಯ ಮೋಕಾಶಿ, ಈರಣ್ಣ ಕೊಣ್ಣೂರ, ವೆಂಕಟೇಶ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಶಿವಲಿಂಗ ಪಾಟೀಲ ಇದ್ದರು.