ಪ್ರತಿಯೊಬ್ಬ ಮನುಷ್ಯನು ಎದುರು ನೋಡುವುದು ಮನಃಶಾಂತಿ ಗೋಸ್ಕರ, ಅದು ಇದ್ದರೇನೇ ಏನನ್ನಾದರೂ ಮಾಡಲು ಸಾಧ್ಯ. ನಾವು ಪ್ರತಿನಿತ್ಯ ಮನಃಶಾಂತಿಗಾಗಿ ಹಲವು ದಾರಿಗಳನ್ನು ಹುಡುಕುತ್ತೇವೆ. ಹಾಗೆಯೇ ಕೆಲವೊಂದು ಸುದ್ಧ ವಾಸನೆಯನ್ನು ನಾವು ಉಸಿರಾಡಿದಾಗ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ಸುವಾಸನೆಯಿಂದ ಸಿಗುವ ಉಲ್ಲಾಸಕ್ಕೆ ಆರಾಮ ತೆರಪಿ ಎನ್ನುತ್ತಾರೆ.
ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ಸುವಾಸನೆ ಸಿಗುತ್ತದೆ. ಅವುಗಳಲ್ಲಿ ಬಿರಿಯಾನಿ ಎಲೆಯು ಕೂಡ ಒಂದು. ಆ ಒಂದು ಎಲೆ ಇಂದಲೇ ಬಿರಿಯಾನಿ ಗಮಗಮ ಎನಿಸುತ್ತದೆ. ಒಂದೆರಡು ಬಿರಿಯಾನಿ ಎಲೆಗಳನ್ನು ತೆಗೆದುಕೊಂಡು ಮನೆಯ ಮೂಲೆಯಲ್ಲಿ ಸುಡಬೇಕು ಹೋಗೆ ಬಂದಮೇಲೆ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಹತ್ತು ನಿಮಿಷ ಮುಚ್ಚಿ, ಸಾಧ್ಯವಾದರೆ ನೀವು ಹೊರಗೆ ಹೋಗಿ ಹತ್ತು ನಿಮಿಷಗಳ ನಂತರ ನೀವು ಬಾಗಿಲು ತೆಗೆದು ಒಳಗೆ ಹೋದರೆ ಒಳ್ಳೆಯ ಸುವಾಸನೆ ಬರುತ್ತದೆ.
ಬಿರಿಯಾನಿ ಎಲೆ ಯಿಂದ ಬರುವ ವಾಸನೆಯನ್ನು ಚೆನ್ನಾಗಿ ಉಸಿರಾಡಿದರೆ ಒತ್ತಡದಿಂದ ಹೊರಬಂದು ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ. ಅಷ್ಟೇ ಅಲ್ಲದೆ ಬಿರಿಯಾನಿ ಎಲೆಯನ್ನು ಸುಡುವುದರಿಂದ ಮನೆಯಲ್ಲಿರುವ ನೊಣ ಸೊಳ್ಳೆ ಆಚೆ ಹೋಗುತ್ತವೆ. ಹಾಗೆಯೇ ಜಿರಳೆಯನ್ನು ಮನೆಯಿಂದ ಓಡಿಸಲು ಇದು ಪರಿಣಾಮಕಾರಿ. ಬಿರಿಯಾನಿ ಎಲೆಯನ್ನು ಪುಡಿಮಾಡಿ ಜಿರಳೆ ಹೆಚ್ಚಾಗಿರುವ ಸ್ಥಳದಲ್ಲಿ ಚೆಲ್ಲಿದರೆ ಸಾಕು.
ಮತ್ತೆ ಜಿರಳೆ ನಿಮ್ಮ ಮನೆಯ ಕಡೆ ಕೂಡ ಮುಖ ಮಾಡಲ್ಲ, ಸಕ್ಕರೆ ಕಾಯಿಲೆ ಇರುವವರು ಬಿರಿಯಾನಿ ಎಲೆಯನ್ನು ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಕುದಿಸಿ ನೀರನ್ನು ಪ್ರತಿದಿನ ಕುಡಿದರೆ ಕಾಯಿಲೆ ಹತೋಟಿಗೆ ಬರುತ್ತದೆ. ಹೀಗೆ ನಮ್ಮ ಮನೆಯಲ್ಲಿರುವ ಬಿರಿಯಾನಿ ಎಲೆಗಳಿಂದ ನಮಗೆ ಹಲವು ರೀತಿಯ ಪ್ರಯೋಜನಗಳಿವೆ. ಹಾಗಾಗಿ ಒಮ್ಮೆಯಾದರೂ ಇದರ ವಿಧಾನವನ್ನು ಬಳಸಿ ಇದರ ಉಪಯೋಗವನ್ನು ಪಡೆದುಕೊಳ್ಳಿ