ಕನ್ನಡ ಕವನ
ಕೈ ಹಿಡಿದ್ ಕರಕೊಂಡ್ ಹೋಗತೈತಿ
ಕನ್ನಡದ ಕವನ |ಎಲ್ಲಿಗಿ ಅಂತೀರಿ |
ವರ್ಣಮಾಲೆ ವ್ಯಾಕರಣ ಪದಸಂಪತ್ತಿನಿಂದ ವೈಭೋವೊಪೇತದೆಡೆಗೆ |
ವೇದಾಂತ ಉಪನಿಷತ್ತಿನ ಹೊಸತನದ ಅರುಣೋದಯದೆಡೆಗೆ
ಕಾಯಕದಿಂದ ಕೈಲಾಸದೆಡೆಗೆ
ಕನವರಿಕೆಯಿಂದ ಕಮಾಯಿವರೆಗೆ |
ಸೃಜನದಿಂದ ಸ್ವೋಪಜ್ಞತೆಯೆಡೆಗೆ
ವಿವೇಕದಿಂದ ವೈಚಾರಿಕತೆಯೆಡೆಗೆ ||
ಕೈಹಿಡಿದ್ ಕರಕೊಂಡ ಹೋಗತೈತಿ
ಕನ್ನಡ ಕವನ ಎಲ್ಲಿಗಿ ಅಂತೀರಿ|
ಕವಿರಾಜಮಾರ್ಗದ ಕಾವೇರಿಯಿಂದ
ಗೋದಾವರಿಯ ವಿಸ್ತಾರದೆಡೆಗೆ
ಶರಣ ಚಳವಳಿಯ ವಚನ ಸಾಹಿತ್ಯದಿಂದ ಮೌಢ್ಯ,ಮೂಢನಂಬಿಕೆಯ ಬದಲಾವಣೆಯದೆಡೆಗೆ ||
ಕೈಹಿಡಿದ್ ಕರಕೊಂಡ್ ಹೋಗತೈತಿ ಕನ್ನಡ ಕವನ | ಸಾಮಾಜಿಕ
ಕಳಕಳಿಯ ದಾಸಸಾಹಿತ್ಯದಿಂದ
ದ್ವೈತಮತ ಪ್ರತಿಪಾದನೆಯ
ಧರ್ಮತಿರುಳಿನ ಕೀರ್ತನಕಾರರೆಡೆಗೆ | ಕುಮಾರವ್ಯಾಸರಿಂದ ಕವಿ ಸರ್ವಜ್ಞರ ಸುಲಭ ತ್ರಿಪದಿಗಳೆಡೆಗೆ ||
ಕೈಹಿಡಿದ್ ಕರಕೊಂಡ್ ಹೋಗತೈತಿ ಕನ್ನಡದ ಕವನ ಎಲ್ಲಿಗಿ ಅಂತೀರಿ|
ಪಂಪನಿಂದ ಪುಲಕೇಶಿವರೆಗೆ
ಪೂರ್ವ ಹಳಗನ್ನಡ ಕಾಲದಿಂದ ನವೋದಯದ ಆಧುನಿಕ ನವ್ಯ,ಬಂಡಾಯ,ದಲಿತ ಸಾಹಿತ್ಯದ
ಪ್ರಯತ್ನದೆಡೆಗೆ|
ಜ್ಞಾನದಿಂದ ಜ್ಞಾನಪೀಠ ಪುರಸ್ಕಾರದೆಡೆಗೆ ||
ಭರಮಾ ರಾಜಗೋಳಿ
ಪ್ರಾಥಮಿಕ ಶಾಲಾ ಶಿಕ್ಷಕರು