spot_img
spot_img

ಕವನ: ಕನ್ನಡಕಾಗಿ ಹೋರಾಡು…

Must Read

- Advertisement -

ಕನ್ನಡಕಾಗಿ ಹೋರಾಡು

ಕನ್ನಡ ಭಾಷೆಯ ಮಾತಾಡು,
ಕನ್ನಡದಲೇ ಉಸಿರಾಡು,
ಕನ್ನಡ ತಾಯಿಗೆ ಪ್ರಾಣ ನೀಡು..

ಪಂಪ,ರನ್ನ,ರಾಘವಾಂಕ,ಹರಿಹರ,
ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು,
ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ,
ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು……

- Advertisement -

ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ,
ಶರಾವತಿ ನಾಡ ಕಾಮಧೇನುಗಳು,
ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ,
ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು…..

ಹಂಪೆ,ಬಾದಾಮಿ-ಐಹೊಳೆ,
ಮೇಲುಕೋಟೆ,
ಬೇಲೂರು-ಹಳೇಬೀಡು,
ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು,
ರಾಜ್,ವಿಷ್ಣು,ಅಂಬಿ,ಅನಂತ್ ನಾಗ್,ಅಶ್ವತ್ಥ್
ಕನ್ನಡನಾಡಿನ ನಟನಾ ರತ್ನಗಳು….

ಕನ್ನಡನಾಡಲಿ ಎಲ್ಲವೂ ತುಂಬಿವೆ,
ಚಿಂತೆಯೇತಕೆ ಓ ಕನ್ನಡಿಗ,
ಕನ್ನಡಕಾಗಿ ಹೋರಾಡು,ಕನ್ನಡತನವ ಕಾಪಾಡು…

- Advertisement -

ಕನ್ನಡವೇ ನಿನ್ನಮ್ಮ,ನಿನ್ನ ಪೊರೆವ ದೇವರು,
ಕನ್ನಡಕಾಗಿ ಕೈಎತ್ತು,ಕನ್ನಡ ಬಾವುಟ ಮೇಲೆತ್ತು,
ಕನ್ನಡ ..ಕನ್ನಡ..ಸವಿಗನ್ನಡ ,ಸಿಹಿ ಕನ್ನಡ ನಿನ್ನ ಉಸಿರಾಗಲಿ,
ಕರುನಾಡಲಿ ನಿನ್ನ ಜನ್ಮ ಸಾರ್ಥಕವಾಗಲಿ…

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group