- Advertisement -
ಜಗದ ಬೆಳಕಿನ ಹಣತೆ
______________________
ಸೋಲುವನು ಬಸವಣ್ಣ
ಕಾವಿ ಮಠ ಆಶ್ರಮಗಳಲ್ಲಿ
ಜಂಗಮರ ಜಂಗುಳಿಯಲಿ
ಬಣಜಿಗರ ಬಣದಲ್ಲಿ
ಗೌಡರ ಗದ್ದಲದಲ್ಲಿ
ರಡ್ಡಿಗಳ ಅಬ್ಬರದಲ್ಲಿ
ನೊಣಬರ ಮೇಳದಲ್ಲಿ
ಸಾದರ ಸಂಭ್ರಮದಲ್ಲಿ
ಗಾಣಿಗರ ಕೂಟದಲ್ಲಿ
ಮೀಸಲಾತಿ ಕೂಗಿನಲಿ
ಹುಡುಕುತ್ತಿದ್ದಾನೆ
ಬಸವಣ್ಣ ತನ್ನನ್ನು
ಕುರುಬ ಕುಂಬಾರ
ಅಗಸ ಹಡಪದ
ಮಾದಾರ ಮೇದಾರ
ಶ್ರಮಿಕ ಶೋಷಿತ
ದುಡಿವ ವರ್ಗಗಳಲ್ಲಿ
ಗೆದ್ದರು ಲಿಂಗಾಯತರು
ಸೋಲಿಸಿ ಬಸವನನ್ನು
ಪಕ್ಷಗಳಿಗೆ ಜೈಕಾರ ಹಾಕಿ
ಕುಡಿದು ಕುಣಿಯುತ
ಮೆರವಣಿಗೆಯಲಿ
ಬಸವಣ್ಣ
ಜಗದ ಬೆಳಕಿನ ಹಣತೆ
ಅದರ ಅಡಿಯಲ್ಲಿ ನಾವು
ಸತ್ಯವರಿಯದ ಕತ್ತಲೆ
____________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ