- Advertisement -
ಲೋಕವಂದಿತ ಮೊದಲ ಪೂಜಿಪ
ಗೌರಿನಂದನ ಗಣಪನೀತ / ಪ
ದುರ್ವಿಷಯ ಭಗ್ನಗೈಸುವ ವಿಘ್ನೇಶ್ವರನಾದೆ
ಗಣಗಳ ನಾಯಕ ಸ್ತುತ್ಯದಿ ವಿಶ್ವಂಭರನಾದೆ
- Advertisement -
ಭೂತಾಕಾಶಕೆ ನೀ ಅಭಿಮಾನಿ ದೇವತೆಯಾದೆ
ಉದ್ಧಟರನು ದಿಟ್ಟದಿ ಮರ್ದಿಸಿ ಚಾರುದೇಷ್ಣನಾದೆ
ಪಾಶಾಂಕುಶಧರ ಮೊರದಗಲ ಕಿವಿ
ರಕ್ತವರ್ಣದಿ ಶೋಭಿತನೆ
ಸರ್ಪವ ಕಟಿಸೂತ್ರ ಮಾಡಿ ಮೂಷಿಕ ವಾಹನ ಗಮನನೆ
ಧರ್ಮರಾಜ ಪೂಜಿಸಿದ ಏಕದಂತ ವಕ್ರತುಂಡನೆ
ಪ್ರಿಯಕೃಷ್ಣನ ನಂಬಿ ಬರುವ ಭಕ್ತರ ಸಂಕಟಚತುರ್ಥಿಗನೆ
- Advertisement -
ಪ್ರಿಯಾ ಪ್ರಾಣೇಶ ಹರಿದಾಸ
ವಿಜಯಪುರ