Homeಆರೋಗ್ಯಪಪ್ಪಾಯಿ ಬೀಜದ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳು

ಪಪ್ಪಾಯಿ ಬೀಜದ ಸೇವನೆಯಿಂದ ಆರೋಗ್ಯಕರ ಪ್ರಯೋಜನಗಳು

ನಮಗೆ ಆರೋಗ್ಯ ನೀಡುವ ಹಣ್ಣುಗಳು ಪೈಕಿ ಪಪ್ಪಾಯಿ ಹಣ್ಣು ಪ್ರಮುಖವಾದದ್ದು. ಪಪ್ಪಾಯಿ ಹಣ್ಣಿನಿಂದ ಅನೇಕ ಪ್ರಯೋಜನಗಳಿವೆ.

ಇದು ಸೋಂಕು ಕಳೆಯಲು ಉಪಯುಕ್ತ, ಪಪ್ಪಾಯಿ ಹಣ್ಣಿನ ತಿರುಳಿನಿಂದ ಫೇಸ್ ವಾಷ್ ಮಾಡಬಹುದು. ಬೇಡದ ಗರ್ಭ ನಿವಾರಣೆಗೆ ಹಸಿ ಪಪ್ಪಾಯಿ ಸೇವಿಸಬಹುದು ಎನ್ನುತ್ತಾರೆ. ತುಂಬಾ ರುಚಿಕರವಾಗಿರುವ ಈ ಹಣ್ಣನ್ನು ಮಕ್ಕಳಾದಿಯಾಗಿ ಎಲ್ಲರೂ ಇಷ್ಟಪಡುತ್ತಾರೆ.

ಪಪ್ಪಾಯ ಎಲೆಯೂ ಕೂಡ ಡೆಂಗ್ಯೂ ಜ್ವರದಲ್ಲಿ ಪರಿಣಾಮಕಾರಿ. ಇದರ ರಸವನ್ನು ಒಂದು ಚಮಚ ಸೇವಿಸುತ್ತ ಬಂದರೆ ಪ್ಲೇಟ್ ಲೆಟ್ ಹೆಚ್ಚಾಗುತ್ತದೆ ಎನ್ನಲಾಗಿದೆ.

ಇವುಗಳ ಜೊತೆಗೆ ಪಪ್ಪಾಯಿ ತಿಂದ ನಂತರ ನಾವು ಬಿಸಾಕುವ ಇನ್ನೊಂದು ಪದಾರ್ಥವೆಂದರೆ ಇದರ ಬೀಜ. ಪಪ್ಪಾಯ ಹಣ್ಣಿನ ಬೀಜದಿಂದಲೂ ಅನೇಕ ಉಪಯೋಗಗಳಿವೆ.

ಪಪ್ಪಾಯ ಬೀಜದ ಪ್ರಯೋಗದಿಂದ ಬೇಡದ ಗರ್ಭ ನಿವಾರಣೆ ಮಾಡಬಹುದು. ಇದರಲ್ಲಿ ಅನೇಕ ಪೌಷ್ಟಿಕಾಂಶಗಳಿವೆ ಅಲ್ಲದೆ ಹೊಟ್ಟೆಯಲ್ಲಿನ ಹುಳು ನಾಶಕ್ಕೂ ಪಪ್ಪಾಯ ಬೀಜ ಸೇವನೆ ಉಪಯುಕ್ತ. ಇದು ಕ್ಯಾನ್ಸರ್ ನಿವಾರಕ ಕೂಡ.

ಪಪ್ಪಾಯಿ ಬೀಜವನ್ನು ಒಣಗಿಸಿ ಪುಡಿ ಮಾಡಿ ದಿನಾಲು ಒಂದು ಚಮಚ ಸೇವಿಸಿದರೆ ಸಂಭವನೀಯ ಕ್ಯಾನ್ಸರ್ ನಿವಾರಿಸಬಹುದು. ಇದರಲ್ಲಿ ಇರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ನಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುತ್ತವೆ.

ಬೀಜದ ಪುಡಿಯಲ್ಲಿ ಜೇನು ಸೇರಿಸಿ ಚರ್ಮಕ್ಕೆ ಹಚ್ಚಿದರೆ ಚರ್ಮದ ಸೋಂಕು ನಿವಾರಣೆಯಾಗುತ್ತದೆ. ಇದು ಪೊಟ್ಯಾಷಿಯಂ ಮತ್ತು ಲಿಪಿಡ್ ಗಳನ್ನು ಹೊಂದಿರುವುದರಿಂದ ಹೊಟ್ಟೆಯ ಹುಳುಗಳನ್ನು ನಿವಾರಿಸುತ್ತದೆ.ದೇಹದ ತೂಕ ಕಡಿಮೆ ಮಾಡುತ್ತದೆ. ಅಲ್ಲದೆ ಇದರ ನಿರಂತರ ಸೇವನೆಯಿಂದ ಪುರುಷರ ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ ಎನ್ನಲಾಗಿದೆ.

RELATED ARTICLES

Most Popular

error: Content is protected !!
Join WhatsApp Group