- Advertisement -
ಮೂಡಲಗಿ – ವಿಶ್ವಜ್ಯೋತಿ ಬಸವವಣ್ಣನವರ ರೇಖಾ ಚಿತ್ರ ತೆಗೆದು ಅದರಲ್ಲಿ ಮತದಾನದ ಕುರಿತ ಸ್ಲೋಗನ್ ಹಾಕು ಮತದಾನ ಜಾಗೃತಿ ಮೂಡಿಸಲಾಗಿದೆ.
ನಗರದ ಎಸ್ ಎಸ್ ಆರ್ ಪ್ರೌಢ ಶಾಲಾ ಶಿಕ್ಷಕ ಸುಭಾಸ ಕುರಣೆಯವರು, ನನ್ನ ಮತ ನನ್ನ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ, ನಿಮ್ಮ ಮತ ಗೌಪ್ಯವಾಗಿರಲಿ, ಮಗಳನ್ನಾಗಲಿ ಮತವನ್ನಾಗಲಿ ಮಾರಿಕೊಳ್ಳಬೇಡಿ ಎಂಬ ಸ್ಲೋಗನ್ ಗಳನ್ನು ಬಳಸಿಕೊಂಡು ಬಸವಣ್ಣನವರ ರೇಖಾ ಚಿತ್ರ ಬರೆದಿದ್ದಾರೆ.
ಮತದಾನ ಜಾಗೃತಿಯ ಈ ವಿಧಾನದ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ