spot_img
spot_img

ಮೂಡಲಗಿಯಲ್ಲಿ ಅದ್ಧೂರಿಯಾಗಿ ಜರುಗಿದ ವಿಶ್ವಕರ್ಮ ಜಯಂತಿ

Must Read

- Advertisement -

ಮೂಡಲಗಿ: ಇಡೀ ಬ್ರಹ್ಮಾಂಡವನ್ನು ಸುಂದರವಾಗಿ ಅಲಂಕರಿಸಿದ ವಿಶ್ವಕರ್ಮನನ್ನು ಈ ಬ್ರಹ್ಮಾಂಡದ ಶ್ರೇಷ್ಠ ಇಂಜಿನಿಯರ್ ಎಂದು ಪರಿಗಣಿಸಲಾಗಿದ್ದು, ಮಹಾಭಾರತದಲ್ಲಿ ಅರಮನೆಗಳು ಸಹ ಇವರ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿವೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಶನಿವಾರದಂದು ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ಪಟ್ಟಣದ ಲಕ್ಷ್ಮೀ ನಗರದ ಶ್ರೀ ಕಾಳಿಕಾ ದೇವಸ್ಥಾನ ದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಬ್ರಹ್ಮರ ಮೂಲಕ, ಪಂಚ ಕಾರ್ಯಗಳು ಸೃಷ್ಟಿಯಲ್ಲಿ ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಂಡವರು ವಿಶ್ವಕರ್ಮರು ಹಾಗಾಗಿ ವಿಶ್ವಕರ್ಮನಿಗೆ ಇಡೀ ವಿಶ್ವವೇ ಋಣಿಯಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ನಮ್ಮ ಕ್ಷೇತ್ರದಲ್ಲಿ ಯಾವುದೇ ಜಯಂತಿ, ಜಾತ್ರೆ, ದೇವಸ್ಥಾಗಳ ಅಭಿವೃದ್ದಿಗೆ ಸೇವಾ ರೂಪದಲ್ಲಿ ಹಾಗೂ ಮುಜಿರಾಯಿ ಇಲಾಖೆಯಿಂದಾಗಲ್ಲಿ ಸಾಕಷ್ಟು ಸಹಕಾರ ನೀಡುವುದರ ಜೊತೆಗೆ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯವಾಗಿದೆ. ಯಾವುದೇ ದೇವಸ್ಥಾನ ನಿರ್ಮಾಣಗೊಳ್ಳಬೇಕಾದರೇ ಮೊದಲು ಮೂರ್ತಿ ಪ್ರತಿಷ್ಠಾಪನೆಗೊಂಡಾಗ ಮಾತ್ರ ಅದು ದೇವಸ್ಥಾನವಾಗಿ ಬಂದ ಭಕ್ತರ ದೇಗುಲವಾಗುತ್ತದೆ. ಮೂರ್ತಿ ನಿರ್ಮಾಣ ಮಾಡುವ ವಿಶ್ವಕರ್ಮರನ್ನು ಅಭಿನಂದಿಸಬೇಕು ಎಂದರು.

- Advertisement -

ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದಲ್ಲಿ ಸಾಧನೆ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಸತ್ಕರಿಸಿ ಗೌರವಿಸಲಾಯಿತು. ವಿಶ್ವಕರ್ಮರ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿಶ್ವಕರ್ಮರ ಭಾವಚಿತ್ರದೊಂದಿಗೆ ಮೆರವಣಿಗೆ ಜರುಗಿತು.

ಕಾರ್ಯಕ್ರಮದಲ್ಲಿ ಕಾಳಿಕಾ ದೇವಸ್ಥಾನ ಅರ್ಚಕ ದೇವೆಂದ್ರಾಚಾರ್ಯ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಕಾಳಿಕಾ ದೇವಸ್ಥಾನದ ಕಮಿಟಿ ಅಧ್ಯಕ್ಷ ಶ್ರೀಕಾಂತ ಪತ್ತಾರ, ಉಪಾಧ್ಯಕ್ಷ ಶಿವರಾಜ ಪತ್ತಾರ, ನಿವೃತ್ತ ಅಭಿಯಂತರ ವಿರುಪಾಕ್ಷಪ್ಪಾ ಪತ್ತಾರ, ಖಾನಟ್ಟಿ ಗ್ರಾಪಂ ಅಧ್ಯಕ್ಷೆ ವಂದನಾ ಸೋನಾರ, ಈಶ್ವರ ಪತ್ತಾರ, ಸುಧಾಕರ ಪತ್ತಾರ, ಈರಪ್ಪ ಪತ್ತಾರ, ಮೌನೇಶ ಪತ್ತಾರ, ಮಡಿವಾಳಪ್ಪ ಬಡಿಗೇರ, ವಿಲಾಸ ಪತ್ತಾರ, ಅನ್ವರ ನದಾಫ್, ಬಸು ಝಂಡೇಕುರಬರ ಹಾಗೂ ಅನೇಕ ಸಮಾಜ ಬಾಂಧವರು, ಕಮೀಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚಂದ್ರಶೇಖರ ಪತ್ತಾರ ನಿರೂಪಿಸಿದರು, ಅವಿನಾಶ್ ಪತ್ತಾರ್ ಸ್ವಾಗತಿಸಿದರು, ವೆಂಕಟೇಶ ಬಡಿಗೇರ ವಂದಿಸಿದರು.

- Advertisement -
- Advertisement -

Latest News

ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಅಭಿಯಾನ

ಸಿಂದಗಿ- ಪ್ರಸ್ತುತ ದಿನಮಾನಗಳಲ್ಲಿ ನಗರ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನಿಯ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಮಾಡುವ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group