spot_img
spot_img

ಶಿಕ್ಷಕರ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ – ಹಾಸಿಂಪೀರ

Must Read

spot_img

ಸಿಂದಗಿ: ಶಿಕ್ಷಕ ಸಮಾಜದ ರಕ್ಷಕ ಸನ್ಮಾರ್ಗ ತೋರಿಸುವ ಶಿಕ್ಷಕ ಅವರ ಉಪಕಾರ ಅಪಾರವಾಗಿದ್ದು ಸಮಾಜಕ್ಕೆ ಬುದ್ದಿ ಕಲಿಸುವ ಶಿಕ್ಷಕರನ್ನು ಗೌರವಿಸುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು  ಕ.ಸಾ.ಪ.ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಪಟ್ಟಣದ ಮಂದಾರ ಪ್ರತಿಷ್ಠಾನ, ಎಸ್ ಸಿ ಎಸ್ ಟಿ ನೌಕರರ,ಅನುದಾನಿತ ಮತ್ತು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಶಿಕ್ಷಕರ ದಿನೋತ್ಸವ ಹಾಗೂ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಫೋಟೊ ಪೂಜೆ ನೆರವೇರಿಸಿ ಮಾತನಾಡಿ, ಪಾಲಕರು ಮಕ್ಕಳನ್ನು ಆಧ್ಯಾತ್ಮಿಕವಾಗಿ ದೂರವಿಡುತ್ತಿದ್ದೇವೆ ಅದಕ್ಕೆ ಹಿರಿಯರಿಗೆ ಹಾಗೂ ಗಣ್ಯರಿಗೆ ಸಿಗುವ ಗೌರವ ಕಡಿಮೆಯಾಗಲು ನಾವೇ ಕಾರಣರಾಗುತ್ತಿದ್ದೇವೆ. ಶಿಕ್ಷಕರು ಪ್ರಾವಿತ್ರ್ಯ ಮತ್ತು ಮೌಲ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಕಾರಣ ಈ ದೇಶದ ಸಂಸ್ಕೃತಿಯನ್ನು ಉಳಿಸುವುದು ಶಿಕ್ಷಕನ ಕೈಯಲ್ಲಿದೆ ಅದನ್ನು ಕಾಪಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಸಮಾರಂಭದ ಸಾನ್ನಿಧ್ಯವನ್ನು ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾಜೀ, ಶಾಂತಾ ಅಕ್ಕನವರು ವಹಿಸಿದ್ದರು.

ಬಾಗಲಕೋಟ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ನಾಗರತ್ನ ಅಕ್ಕನವರು ಅತಿಥಿ ಉಪನ್ಯಾಸ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ, ಬೆಂಗಳೂರಿನ ರೂಪಸಾ ಸಂಘಟನೆ ರಾಜ್ಯಾಧ್ಯಕ್ಷ ಲೊಕೇಶ ತಾಳಿಕಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ 35 ಜನ ಶಿಕ್ಷಕರಿಗೆ  “ಸಿರಿಗನ್ನಡ” ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್.ಹರನಾಳ, ಅಕ್ಷರ ದಾಸೋಹ ಯೋಜನೆಯ ಸಹ ನಿರ್ದೇಶಕ ಶಿವಚಂದ್ರ ಎಸ್.ಕತ್ನಳ್ಳಿ, ಕ್ಷೇತ್ರ  ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಸದಸ್ಯ ಎಸ್.ಎಮ್.ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ  ಗೌರವಾಧ್ಯಕ್ಷ ಯು.ಐ.ಶೇಖ, ಪ್ರೌಢಶಾಲಾ ಶಿಕ್ಷಕರ ಸಂಘದ  ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ. ಅನುದಾನಿತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಹಿರೇಕುರುಬರ, ನೌಕರರ ಸಂಘದ ತಾಲೂಕು ಅಧ್ಯಕ್ಷ  ಅಶೋಕ ತೆಲ್ಲೂರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಆನಂದ ಭೂಸನೂರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ  ಎಮ್.ಎಮ್.ಕೆಂಭಾವಿ, ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಎಮ್.ಮಾಹೂರ, ಅನುದಾನಿತ ಶಿಕ್ಷಕರ ಸಂಘದ  ಅಧ್ಯಕ್ಷ  ಬುಳ್ಳಪ್ಪ.ಡಿ, ಉರ್ದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ಅಲ್ತಾಫ ಸಾಲೋಟಗಿ, ಶಹಾಪುರದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಉಪಸ್ಥಿತರಿದ್ದರು

ಪ್ರೀತಿ ರಜಪೂತ ಭರತ ನಾಟ್ಯ ಮಾಡಿದರು. ಶಿಕ್ಷಕಿ ಗಿರಿಜಾ ಅಳ್ಳಿಗಿ ಹಾಗೂ ಪ್ರಲ್ಹಾದ ಜಿ.ಕೆ ನಾಡಗೀತೆ ಹಾಡಿದರು. ಮಂದಾರ ಪ್ರತಿಷ್ಠಾನದ  ಸಂಚಾಲಕ ಸಿದ್ದಲಿಂಗ ಚೌಧರಿ ಆಶಯ ನುಡಿ ಹೇಳಿದರು. ಎಬಿಸಿಡಿ ಡ್ಯಾನ್ಸ ಕ್ಲಾಸ್‍ನ ವಿದ್ಯಾರ್ಥಿಗಳು ನೃತ್ಯದ ಮೂಲಕ ಶಿಕ್ಷಕರಿಗೆ ಗೌರವಿಸಿದರು. ಗುರುನಾಥ ಅರಳಗುಂಡಗಿ ಸ್ವಾಗತಿಸಿದರು. ಅಶೋಕ ಬಿರಾದಾರ, ಶ್ರೀದೇವಿ ನಾಯ್ಕ ನಿರೂಪಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!