ಕೋಲ್ಕತ್ತಾ – ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ಪಾತಾಳದಲ್ಲಿ ಅಡಗಿದ್ದರೂ ಅವರನ್ನು ಹುಡುಕಿತಂದು ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಇದೇ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಲಿರುವ ಹಿನ್ನೆಲೆಯಲ್ಲಿ ದಕ್ಷಿಣ ೨೪ಪರಗಣ ಜಿಲ್ಲೆಯಲ್ಲಿ ಅವರು ಬೃಹತ್ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಚುನಾವಣಾ ಪ್ರಣಾಳಿಕೆಯ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ ಅವರು, ಮೀನುಗಾರರಿಗೆ ಆರು ಸಾವಿರ ರೂ.ಗಳ ಗೌರವಧನ, ನುಸುಳುಕೋರರ ನಿಯಂತ್ರಣ, ಜೇನು ಕೃಷಿಗೆ ಉತ್ತೇಜನ ನೀಡಲಾಗುವುದು, ರಾಜ್ಯದಲ್ಲಿ ಭಯರಹಿತ ಆಡಳಿತ ನೀಡಲಾಗವುದು ಎಂದರು.
ಈವರೆಗೆ ಪಶ್ಚಿಮ ಬಂಗಾಳದಲ್ಲಿ ೧೩೦ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಈ ಹತ್ಯೆಗಳ ಹಿಂದೆ ಇರುವ ತೃಣಮೂಲದ ಕಾಂಗ್ರೆಸ್ ನ ಗೂಂಡಾಗಳನ್ನು ಹುಡುಕಿತಂದು ಜೈಲಿಗಟ್ಟುತ್ತೇವೆ ಎಂದರು.
ಕೇಂದ್ರ ಸರ್ಕಾರದ ದಿಂದ ಕೋಟಿ ಗಟ್ಟಲೆ ಅನುದಾನ ರಾಜ್ಯಕ್ಕೆ ಬಂದಿದ್ದರೂ ಎಲ್ಲವನ್ನು ತೃಣಮೂಲ ಗೂಂಡಾಗಳು ನುಂಗಿಹಾಕಿದ್ದಾರೆ ಎಂದು ಅವರು ಆರೋಪ ಮಾಡಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸರಸ್ವತಿ ಪೂಜೆ ನಿಲ್ಲಿಸಿದ್ದಾರೆ, ಇಲ್ಲಿ ದುರ್ಗಾ ಪೂಜೆ ಮಾಡಬೇಕಾದರೆ ಕೋರ್ಟ್ ಆದೇಶ ತರಬೇಕು ಇಂಥ ನಿಯಮಗಳಿಂದ ಮಮತಾ ಅವರ ಗೂಂಡಾಗಳು ರಾಜ್ಯ ಆಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇದನ್ನೆಲ್ಲ ನಿಲ್ಲಿಸಲಾಗುವುದು. ಪೂಜೆಗಳು ಚೆನ್ನಾಗಿ ನಡೆಯಲಿವೆ ಎಂದು ಅವರು ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸೋನಾರ್ ಬಾಂಗ್ಲಾ ಸ್ಥಾಪನೆ ಮಾಡಲಾಗುವುದು ಎಂದು ಅಮಿತ್ ಷಾ ತಮ್ಮ ಭಾಷಣದಲ್ಲಿ ಹೇಳಿದರು