- Advertisement -
ಮೂಡಲಗಿ – ಕಾರ್ಗಿಲ್ ಯುದ್ಧಕ್ಕೆ ೨೫ ವರ್ಷಗಳು ಸಂದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಕಾರ್ಗಿಲ್ ವಿಜಯ ಸ್ಮಾರಕವನ್ನು ರಂಗೋಲಿಯಲ್ಲಿ ಚಿತ್ರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಮೂಡಲಗಿ ನಗರದ ವಿಜಯಲಕ್ಷ್ಮಿ ಬಾಹುಬಲಿ ಜೋಕಿ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿ ರಂಗೋಲಿ ಬಿಡಿಸಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
೧೯೯೯ ರಲ್ಲಿ ಭಾರತದ ಕಾರ್ಗಿಲ್ ಪ್ರದೇಶದ ಮೇಲೆ ವೈರಿ ರಾಷ್ಟ್ರ ಪಾಕಿಸ್ತಾನ ದಾಳಿ ಮಾಡಿತ್ತು. ಭಾರತದ ಕೆಚ್ಚೆದೆಯ ಸೈನಿಕರು ವೀರಾವೇಶದಿಂದ ಹೋರಾಡಿ ಪಾಕಿಸ್ತಾನಿ ಸೈನಿಕರನ್ನು ಸದೆಬಡಿದಿದ್ದರು. ಈ ಯುದ್ಧದಲ್ಲಿ ಭಾರತದ ಹಲವಾರು ಸೈನಿಕರು ಹುತಾತ್ಮರಾಗಿದ್ದರು. ಅವರ ನೆನಪಿಗಾಗಿ ನವದೆಹಲಿಯಲ್ಲಿ ಕಾರ್ಗಿಲ್ ಸ್ಮಾರಕ ನಿರ್ಮಿಸಲಾಗಿದೆ.
ಅದೇ ಸ್ಮಾರಕದ ರಂಗೋಲಿ ಚಿತ್ರ ಬಿಡಿಸಿದ ಈ ಬಾಲಕಿ ವೀರಯೋಧರಿಗೆ ನಮನ ಸಲ್ಲಿಸಿದ್ದಾಳೆ