ಕವನಗಳು: ಶಿಕ್ಷಕರ ದಿನಾಚರಣೆಯ ಶುಭಾಶಯಗಳು

Must Read

ಗುರುವೆ ಶಕ್ತಿ

ಗುರುವೆನ್ನ ಭಕ್ತಿ
ಗುರುವೆನ್ನ ಶಕ್ತಿ
ಗುರುವೇ ಪರಮೋದ್ಧಾರ

ಗುರುತರ ಜವಾಬ್ದಾರಿಯಲಿ
ಕರುಣೆಯ ಕಾರ್ಪಣ್ಯ ಸಿಂಧು
ಸಹಕಾರಕೆ ಮಾದರಿಯು

ಮಕ್ಕಳ ಪ್ರೀತಿಯಲಿ ಪೊರೆದು
ಗುರಿಯೆಡೆಗೆ ಪಯಣಕೆ
ದಾರಿ ತೋರಿಸುವ ದೀಪ

ತಪ್ಪಾದರೆ ಶಿಕ್ಷಿಸುವ
ನೋವಿನಲಿ ಸ್ಪಂದಿಸುವ
ಸಾಧನೆಗೆ ಬೆನ್ನು ತಟ್ಟುವ

ಬಾಳ ನೌಕೆಯ ದಿಕ್ಸೂಚಿ
ತಿಳಿವಳಿಕೆಯ ಹರಿಸಿ
ಅರಿವಿನ ಧಾರೆಯಲಿ

ಜೀವಿಸಲು ಕಲಿಸಿ
ಪರಿವರ್ತನೆಯ ತೋರಿ
ಮನದ ಕಲ್ಮಶವ ಕಳೆದು

ಕೌಶಲ್ಯ ವೃದ್ಧಿಗೆ
ಸಹನೆಯ ಗುಣದಿ
ವಿಚಾರವಂತಿಕೆಗೆ ಕಾರಣೀಭೂತ

ಸಮಾಜದ ಕೇಂದ್ರ ಬಿಂದು
ನಿರ್ವಹಣೆಗೆ ಹೊಂದಿಸಿ
ಲೆಕ್ಕ ಪಕ್ಕದಿ ಗಮನಿಸಿ

ಸೂಕ್ತ ವ್ಯವಸ್ಥೆ
ಶಕ್ತ ಸಮಾಜ ಕಲ್ಪಿಸಿ
ಸೂಕ್ತ ಪರಿಸರದ ಚಾಲಕ.

ರೇಷ್ಮಾ ಕಂದಕೂರ


ಎಲ್ಲ ಶಿಕ್ಷಕರಿಗು ಕಾವ್ಯನಮನ

ಹಾಯ್ಕು

ಆದರ್ಶ ತೋರಿ.
ಅನಾಚಾರ ಬಿಡಿಸಿ
ಬಾಳ ತೋರಿದ!

ರುಬಾಯಿ

ವಿದ್ಯೆಇಲ್ಲದ ಕಾಡ್ಬಂಡೆಕಲ್ಲು ನಾ.
ಕಲ್ಸಿದನು ಗುರು ಜಾಣಆದೆನಾ.
ಬಾಳಿನ ಗುರಿ ತೋರಿದನು ಗುರು
ಬಾಳುತ್ತಿರುವೆ ಅವ್ರಂತೆಇಂದುನಾ

ಟಂಕಾ

ಪ್ರಕೃತಿ ಗುರು.
ತಾಯಿ ಜೀವದ ಗುರು.
ಅಕ್ಷರ ಗುರು.
ತಿದ್ದಿ ತೀಡಿ ಕಲಿಸಿ
ಸನ್ಮಾರ್ಗ ಹಿಡಿಸಿದ
ಶಿಕ್ಷಕಗೆ ಜೈ !

ಚುಟುಕು

ಗದರಿಸಿ ಬೆತ್ತದ ರುಚಿ ನೀಡಿ.
ವಿದ್ಯೆ-ಬುದ್ದಿ ಕಲಿಸಲು ಒದ್ದಾಡಿ
ತಲೆ-ತಲೆ ಬಡ್ಕೊಂಡ್ರು ಕಲಿಯದ
ನನ್ನ ಅವರಂತೆ ಶಿಕ್ಷಕನಮಾಡಿದ!

ಜನಪದ

ಜನ ಜಂಗುಳಿ ಜಗವೆಲ್ಲ ತುಂಬಿ ಆದ್ರವನೊಬ್ಬ ವಿಶೇಷ |ಜನಕೆ
ಜಗದ ಸನ್ಮಾರ್ಗದರ್ಶಿ ಶಿಕ್ಷಕನುll

ಬಾಲ್ಯದಿ ಹುಡುಗಾಟ ತುಂಟಾಟ
ಮಂಗನ ಬುದ್ದಿl ಚಂಚಲ ಬಿಡಿಸಿ
ಚೆಂದದ ಬಾಳು ಕಲಿಸಿದ ಶಿಕ್ಷಕll

ದಿಕ್ಕು ಕಾಣದ ಜೀವನದ ದಾರಿ
ದಿಕ್ಕು ಹಿಡಿಸಿದ ಗುರುlಧರ್ಮದ
ದಾರಿಲಿ ನಡೆಸಿದ ದೈವಿಕನವನುll

ಶರಣೆಂಬೆ ಗುರುವಿಗೆ ಶರಣೆಂಬೆ
ಶಿಕ್ಷಕರಿಗೆ lಶರಣು ಶರಣೆಂಬೆನು
ದೇವರ ಅವತಾರಿ ಗುರುವಿಂಗೆll

ಬದುಕಲ್ಲಿ ಬಂದೊದಗೊ ಕಷ್ಟವ
ಧೈರ್ಯದಿ ಎದುರಿಸೊlಪಾಠವ
ಕಲಿಸಿ ಬದುಕು ಹಿಡಿಸಿದ ಗುರುll

ಇದೋ..ಇಂದವರೆಲ್ಲರಿಗೂ ನನ್ನ
ಕೃತಜ್ಞತೆಯನಮನl
ನಿನ್ನಪ್ರೇರಣೆ ಹೀಗೆ ನಡೆದಿರಲಿ ನಿರಂತರವು ll

ನಟರಾಜ ದೊಡ್ಡಮನಿ
ಶಿಕ್ಷಕರು,ಕ್ಯಾಸಿನಕೆರೆ.
ಹೊನ್ನಾಳಿ(ತಾ)ದಾವಣಗೆರೆ(ಜಿ)

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group