spot_img
spot_img

ಕವನಗಳು

Must Read

- Advertisement -

ಜೀವನದ ಪಯಣ

ಸಾಗುತ್ತಿದೆ ಜೀವನದ ಪಯಣ ಬಾಳ ದೋಣಿ ಪಥದಲ್ಲಿ ಹುಟ್ಟು ಹಾಕಿ ಸಾಗಿಸುವ ಪಯಣಿಗನು
ಆ ನಾವಿಕನು

ಈ ದಡದಿಂದ ಆ ದಡಕ್ಕೆ ಸಾಗುವುದರೊಳಗೆ ಯೌವನದಿಂದ ಮುಪ್ಪು ಆವರಿಸುತ್ತದೆ ಬಾಳ ದೋಣಿಯ ಪಥದಲ್ಲಿ

- Advertisement -

ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಜೀವಿಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿವೆ ಮೈಮರೆತು ಈ ಬಾಳ ದೋಣಿಯ ಜೀವದ ಪಯಣದಲ್ಲಿ ನಾನು ಒಬ್ಬ ಪಯಣಿಗ

ಪಯಣ ಮುಗಿಯುವುದರೊಳಗೆ ಸಾಧಿಸುವುದು ಸಾಕಷ್ಟು ಇದೆ ಸಾಧನೆ ಮೆಟ್ಟಿಲಲ್ಲಿ ನಿಂತು ಸಂಭ್ರಮಿಸುವುದು ಅವಕಾಶದಾಯಕ ಸ್ಥಿತಿಯಾಗಿದೆ

ಈ ಜೀವದ ಪಯಣ ಮುಗಿಯುವುದರಲ್ಲಿ ನಮ್ಮವರು ನಮ್ಮಿಂದಲೇ ತೊರೆದು ಹೋಗುವರು ನಿರಂತರ… ನಿರಂತರ…

- Advertisement -

ರಾಹುಲ್ ಸುಭಾಷ್ ಸರೋದೆ
ಗಂಗಾವತಿ


ನನಗೇಕೆ ಇಂತ ಶಿಕ್ಷೆ

ನಾನು ನಿಮ್ಮ ಒಡನಾಡಿ ಅಲ್ಲವೇ
ಮೋಹದ ಮದವೇರಿ
ದಾಳಿಕೋರರ ಸಂಚಿಗೆ
ಸಿಲುಕಿಸಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ದೇವತಾಮೂರ್ತಿಗೇ ಎರಗುವಿರೆ
ಕರುಳಬಳ್ಳಿಯಲಿ ಉದಯಿಸಿದ್ದು
ಕೈ ಹಿಡಿದು ನಡೆಸಿ
ದಾರಿ ತೋರಿಸಿದ್ದು
ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಬಾಹುಗಳಲಿ ಬಂಧಿಸಿ
ನಾಲಿಗೆ ಸೀಳಿ
ರೋಧನೆಯ ಹತ್ತಿಕ್ಕಿ
ಸುಖಕೆ ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂಥ ಶಿಕ್ಷೆ
ಬಾಹ್ಯ ನೋಟಕೆ
ಬೆರಗಾಗಿ ಅಂತರಾತ್ಮ ಮರೆಸಿ
ಬೇಹುಗಾರಿಕೆಯಲಿ ಬೀಳಿಸಿ
ಎಲ್ಲ ಮರೆತದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಸಹನಾ ಮೂರ್ತಿ ದುರ್ಗೆಯಾಗಲು
ವಾತ್ಸಲ್ಯಕೆ ಕಿಚ್ಚು ಹಚ್ಚಿ
ಬೆಚ್ಚಿ ಬೀಳಿಸಿ
ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂಥ ಶಿಕ್ಷೆ
ನಿರ್ಭಯಾಳಿಗೇ ಭಯ ಹುಟ್ಟಿಸಿ
ಮನಿಷಾಳ ಮನಸ್ಸಿಗೆ ಘಾಸಿ
ಹೂ ಮನಕೆ ಮುಳ್ಳು ತಾಗಿಸಿ
ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಅಂಗರಚನೆಗೆ ಮಾರು ಹೋಗಿ
ತೃಣದ ಅರಿವಿಲ್ಲದೆ
ಬದುಕು ಸಾವಿನ ನಡುವಿನ ನಂಟು
ವಾತ್ಸವದಿ ಎಲ್ಲ ಮರೆತಿದ್ದು ಸರಿಯೇ

ರೇಷ್ಮಾ ಕಂದಕೂರ


ಅರ್ಥಪುಟ್ಟ

ಪುಟ್ಟ ಪುಟ್ಟ ಹೆಜ್ಜೆ ಹಾಕಿ
ಅರ್ಥಪುಟ್ಟ ಬಂದಳು
ಅರ್ಥವಿರದ ಬಾಳಿಗೊಂದು
ಅರ್ಥವನ್ನು ತಂದಳು

ಮುಗ್ಧ ಮನದಿ ಮುದ್ದು ಮೊಗದಿ
ನಗೆಯ ಬೆಳಕ ತಂದಳು
ಮನದಿ ತುಂಬಿದಂಥ ವ್ಯಥೆಯ
ಕತ್ತಲೆಲ್ಲ ಕೊಂದಳು

ಹಾಲುಗಲ್ಲದಲ್ಲಿ ಕೆನೆಯ
ಬೆಲ್ಲ ಸವಿಯ ತಂದಳು
ತೊದಲು ಮಾತನಾಡಿ ಹರ್ಷ
ಚಿಲುಮೆ ಚಿಮ್ಮಿ ನಿಂದಳು

ದೇವಲೋಕದಮೃತ ಕಲಶ-
ದಲ್ಲಿ ಮಿಂದು ಬಂದಳು
ಒಂದು ತೊಟ್ಟು ಅಮೃತವನ್ನು
ಬುವಿಗೆ ಹೊತ್ತು ತಂದಳು

ಸ್ವರ್ಗಲೋಕವನ್ನೆ ತಂದು
ದುಃಖದುಗುಡ ಕೊಂದಳು
ಭೂಮಿಯನ್ನೆ ನಾಕ ಮಾಡಿ
ದೇವಿಯಾಗಿ ನಿಂದಳು

ಎನ್.ಶರಣಪ್ಪ ಮೆಟ್ರಿ


ನನ್ನ ಕನಾ೯ಟಕ

ಬೀದರ ಬಿಜಾಪೂರ
ನಮ್ಮೂರು
ಬಿಳಿಜೊಳ ರೊಟ್ಟಿ
ಬಲು ಜೋರು.

ರಾಯಚೂರು ಬಳ್ಳಾರಿ
ನಮ್ಮೂರು.
ಬಿಸಿಲಿನ ಬೆಗೆ
ಬಲುಜೋರು.

ಬೆಳಗಾವಿ ಬೆಂಗಳೂರು
ನಮ್ಮೂರು.
ಬೆಳ್ಳನ ಜನರು
ಬಹಳ ಇರುವರು.

ಧಾರವಾಡ ದಾವಣಗೆರೆ
ನಮ್ಮೂರು
ದೌಲತ್ತು ದಿಮಾಕು
ಇರುವವರು.

ಕಲಬುಗಿ೯ ಕೋಲಾರ
ನಮ್ಮೂರು.
ಕಲೆಯಲಿ ಇವರು
ನಿಪುಣರು.

ಚಿತ್ರದುಗ೯ ಚಿಕ್ಕಮಂಗಳೂರು
ನಮ್ಮೂರು.
ಚಿಕ್ಕ ಮಕ್ಕಳು
ಬಲು ಜೋರು.

ಮಂಡ್ಯ ಮೈಸೂರು
ನಮ್ಮೂರು
ಗೌಡರ ದರಬಾರು
ಬಲು ಜೋರು.

ಹಾಸನ ತುಮಕೂರು
ನಮ್ಮೂರು.
ನಾಟಿ ಕೋಳಿ ಸಾರು
ಬಲು ಜೋರು.

ಯಾದಗಿರಿ ಕೊಪ್ಪಳ
ನಮ್ಮೂರು
ಸಣ್ಣಕ್ಕಿ ಅನ್ನ
ಬಲುಜೋರು.

ಕಾರವಾರ ಮಂಗಳೂರು
ನಮ್ಮೂರು
ಮೀನಿನ ಸಾರು
ಬಲು ಜೋರು.

ಹಾವೇರಿ ಗದಗ
ನಮ್ಮೂರು
ಮೆಣಸಿನ ಖಾರಾ
ಬಲು ಜೋರು.

ಡಾ.ಏಚ್.ಆರ್.ಜಗದಾರ

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group