spot_img
spot_img

ಮೇ 14 ರಂದು ಗಾಣಿಗ ಸಮಾಜದ ನೌಕರರ ಸಮ್ಮೇಳನ

Must Read

- Advertisement -

ಸಿಂದಗಿ: ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ)ಹುಬ್ಬಳ್ಳಿ ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕ ಘಟಕ ಸಿಂದಗಿ ಇವರ ಸಹಯೋಗದಲ್ಲಿ ಜಿಲ್ಲಾ ಘಟಕದ ಪದಗ್ರಹಣ ಮತ್ತು ಗಾಣದೀಪ್ತಿ ಗ್ರಂಥ ಬಿಡುಗಡೆ ಹಾಗೂ ಗಾಣಿಗ ನೌಕರರ ರಾಜ್ಯ ಮಟ್ಟದ ಸಮ್ಮೇಳನವನ್ನು ಮೇ. 14 ರಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಕಾರಣ ಗಾಣಿಗ ಸಮುದಾಯದ ನೌಕರರಲ್ಲದೆ ಎಲ್ಲ ನೌಕರ ವರ್ಗ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಗಾಣಿಗ ಸಮಾಜದ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಚೌಧರಿ ಮನವಿ ಮಾಡಿದರು.

ಪಟ್ಟಣದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೆ ಮೇ 14 ರಂದು ಬೆಳಿಗ್ಗೆ 08 ಘಂಟೆಗೆ ಚಿಕ್ಕಸಿಂದಗಿ ಬೈಪಾಸ್ ಹತ್ತಿರದ ನೂತನ ವನಶ್ರೀ ಶಾಖಾಮಠದ ಆವರಣದಲ್ಲಿ ಗಾಣ ಧ್ವಜಾರೋಹಣವನ್ನು ಬಿಜೆಪಿ ಮುಖಂಡರಾದ ಶ್ರೀಶೈಲಗೌಡ ಬಿರಾದಾರ ಹಾಗೂ ಸುರೇಶ ಮಳಲಿ ನೆರವೇರಿಸುವರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದ ಹನುಮಾನ ಮಂದಿರದಿಂದ ಬೆಳಿಗ್ಗೆ 9 ಘಂಟೆಗೆ ಗಾಣ ದೇವತೆಯ ಮೆರವಣಿಗೆಯನ್ನು ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಹಾಗೂ ಪ್ರಶಾಂತಗೌಡ ಪಾಟೀಲ ಅವರು ಚಾಲನೆ ನೀಡುವರು ಈ ಮೆರವಣಿಗೆಯಲ್ಲಿ ಕುದುರೆ ಕುಣಿತ, ಹಲಗೆ ಮಜಲು, ಡೊಳ್ಳು ಕುಣಿತ, ಲಂಬಾಣಿ ಕುಣಿತ ಸೇರಿದಂತೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಟಿಪ್ಪುಸುಲ್ತಾನ್ ವೃತ್ತದ ಮಾರ್ಗವಾಗಿ ಪುನಃ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ಹಾಗೂ ಬಸವೇಶ್ವರ ವೃತ್ತದ ಮೂಲಕ ಮಾಂಗಲ್ಯ ಭವನ ಕಲ್ಯಾಣ ಮಂಟಪಕ್ಕೆ ತಲುಪಿ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ 100 ಜನ ಸಾಧಕರಿಗೆ ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಷ್ಕಾರ ಮಾಡಲಿದ್ದಾರೆ ಅಲ್ಲದೆ ಗಾಣಿಗ ಸಮುದಾಯದ ಜಾಗೃತಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಕಾರ್ಯಕ್ರಮದ ವನಶ್ರೀ ಸಂಸ್ಥಾನಮಠದ ಜಯಬಸವ ಕುಮಾರಸ್ವಾಮಿಗಳು, ಸೋಮಜಾಳ ಮಲ್ಲಿಕಾರ್ಜುನ ಮಠದ ಅಮೃತಲಿಂಗ ಶಿವಾಚಾರ್ಯರು, ಕೊಲ್ಹಾರ ಜಗದ್ಗುರು ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ದೇವರು, ಗದಗ-ದೇಹಲಿ ಜಗದ್ಗುರು ತೊಂಟದಾರ್ಯಮಠದ ಮಹಾಂತ ಸ್ವಾಮಿಗಳು, ಚಾಳಕಪೂರ ಸಿದ್ಧಾರೂಢಮಠದ ಶಂಕರಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ರಮೇಶ ಭೂಸನೂರ ಅವರು ಫೋಟೋ ಪೂಜೆ ನೆರವೇರಿಸಲಿದ್ದಾರೆ.

ಗಾಣದೀಪ್ತಿ ಸ್ಮರಣ ಸಂಚಿಕೆಯನ್ನು ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಎಂ.ಡಿ.ಪಾಟೀಲ ವಹಿಸಲಿದ್ದು. ಅತಿಥಿಗಳಾಗಿ ಗುರಣ್ಣ ಗೋಡಿ, ತಿಪ್ಪಣ್ಣ ಮಜ್ಜಗಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಆಗಮಿಸಲಿದ್ದಾರೆ ಕಾರಣ ಸಮಾಜದ ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

- Advertisement -

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ಚಂದ್ರಕಾಂತ ಡೊಣಗಿ, ನಿಂಗಣ್ಣ ರೋಳ್ಳಿ, ಶ್ರೀಶೈಲ ಮಸಳಿ, ರಮೇಶ ಗಂಗನಳ್ಳಿ, ಸಂಗನಗೌಡ ಹಚಡದ, ಶಿವಕುಮಾರ ಕಲ್ಲೂರ, ಸಿ.ಎನ್.ಸಿರಕನಳ್ಳಿ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group