spot_img
spot_img

ಪುಸ್ತಕ ಪರಿಚಯ

Must Read

- Advertisement -

ಪುಸ್ತಕದ ಹೆಸರು : ನಾವು ಮತ್ತು ಪ್ರಜ್ಞೆ
ಲೇಖಕರು: ಆಗುಂಬೆ ಎಸ್. ನಟರಾಜ
ಪ್ರಕಾಶಕರು: ಹಂಸ ಪ್ರಕಾಶನ ಬೆಂಗಳೂರು 40
ಮುದ್ರಕರು : ಸ್ನೇಹಾ ಪ್ರಿಂಟರ್ಸ 40
ರಕ್ಷಾ ಪುಟ ವಿನ್ಯಾಸ : ನಾರಾಯಣ್ ಛಾಯಾಕ್ಷರ ಜೋಡಣೆ ವರ್ಷಿಣೆ ಗ್ರಾಫಿಕ್ಸ್.
ಪುಟಗಳು : 242+10 = 252
ಬೆಲೆ : 200.00 ರೂಪಾಯಿ

ಆಗುಂಬೆ ಎಸ್. ನಟರಾಜ್‍ರ ಚಿಂತನಪರ “ನಾವು ಮತ್ತು ಪ್ರಜ್ಞೆ ” ಒಂದು ಉತ್ತಮ ಕೃತಿಯಾಗಿದೆ. ಇದರಲ್ಲಿ ಹತ್ತು ಭಾಗಗಳಿದ್ದು, ಇತಿಹಾಸ ಪ್ರಜ್ಞೆ, ಭಾಷೆ ಪ್ರಜ್ಞೆ, ಪುಸ್ತಕ ಪ್ರೀತಿ, ಸ್ವಚ್ಛತಾ, ರಾಜಕೀಯ, ಅರ್ಥಶಾಸ್ತ್ರ, ಧಾರ್ಮಿಕ ಸೌಂದರ್ಯ, ರಾಷ್ಟ್ರೀಯ, ಸಾಮಾಜಿಕ, ನೈತಿಕ ಪ್ರಜ್ಞೆಗಳಾಗಿ ಉತ್ತಮವಾಗಿ ನಿರೂಪಿಸಿದ್ದಾರೆ.

ಮೊದಲು ಪ್ರಜ್ಞೆ ಎಂದರೇನು? ಇದಕ್ಕೆ ಜ್ಞಾನಿಗಳು ಪಂಡಿತರು, ತತ್ವಜ್ಞಾನಿಗಳು ಉತ್ತರಿಸಿದ್ದಾರೆ. ಪ್ರಜ್ಞೆ ಎಂದರೆ ಅರಿಯುವ ಶಕ್ತಿ. ಹಿಂದೆ ಆದುದನ್ನು ನೆನೆಯುವುದು “ಸ್ಮೃತಿ” ಈಗ ನಡೆಯುವುದನ್ನು ಪರಿಶೀಲಿಸುವುದು,ಸಂವೇದನೆಯಿಲ್ಲದೆ ಯಾವುದರ ಅರಿವೂ ನಮಗಾಗದು ಅರಿವಿನ ಸಂವೇದನಾ ರೂಪವನ್ನು ಪ್ರಜ್ಞೆ ಎನ್ನಬಹುದಲ್ಲವೆ?

- Advertisement -

ಪ್ರಜ್ಞೆ ಏನೆಂದರೆ, ಯಾವ ಅನುಭವದಲ್ಲಿ ಅನುಭವ ವಸ್ತು ಹಾಗೂ ಅನುಭವಿಸುವ ಚೇತನ ಒಂದು ರೀತಿಯ ಪ್ರೀತಿ ಪ್ರಾಣಮಯ ಸಂಬಂಧವನ್ನು ಪಡೆಯುತ್ತದೆಯೋ ಆ ಮನಃಸ್ಥಿತಿಯನ್ನು “ಪ್ರಜ್ಞೆ” ಎಂದು ಕರೆಯುವದು.

ಕೆಲವು ಇತಿಹಾಸಕಾರರನ್ನು ಹೊರತುಪಡಿಸಿ, ಇತರ ಯಾವುದೇ ಸಾಹಿತ್ಯ ಕ್ಷೇತ್ರದಲ್ಲಿ ಇತಿಹಾಸದ ಬಗ್ಗೆ ನಿರಾಸಕ್ತಿ ಕಾಣಬಂದಿದ್ದು ನನ್ನ ಅನುಭವವಾಗಿದೆ ಎಂದು ನಟರಾಜರು ಅನೇಕರ ಉದಾಹರಣೆ ನೀಡಿದ್ದಾರೆ.

- Advertisement -

ಇವರಿಗೆ ಸೋಜಿಗ ತಂದಿರುವ ಸಂಗತಿ ಎಂದರೆ ಸಾಮಾನ್ಯ ಓದುಗರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಇವರ ಪುಸ್ತಕಗಳನ್ನು ಓದಿ ರೋಮಾಂಚನಗೊಂಡು ಪುಳಕಿತರಾಗಿ ಶ್ಲಾಘಿಸಿದ್ದಾರೆ ಎಂದಿದ್ದಾರೆ ಇದು ಹೆಮ್ಮೆಯ ವಿಷಯವಾಗಿದೆ.

ಸ್ವಚ್ಛತಾ ಪ್ರಜ್ಞೆ; ಪಾಶ್ಚಾತ್ಯ ದೇಶಗಳ ಪ್ರವಾಸ ಮಾಡುವಾಗ ನಮಗೆ ಅನುಭವವಾಗುವುದು ಅಲ್ಲಿನ ಶುಭ್ರತೆ, ಸ್ವಚ್ಛತೆ,ಜೊಕ್ಕಟ ಪರಿಶುದ್ಧ ವಾತಾವರಣ ಯಾವುದೇ ರಸ್ತೆ, ಓಣಿ, ಮನೆಯಾಂಗಣಗಳಲ್ಲಿ ಕಸದ ಒಂದು ತುಣುಕು ಕಾಣದೇ ಮೈಮಸ್ಸುಗಳಿಗೆಹರ್ಷ ತುಂಬಿ ಬರುವುದು ಸ್ವಾಭಾವಿಕವಾಗಿದೆ.
ಅಲ್ಲಿಯ ಜನರು ಸ್ವಚ್ಛತೆ ಇದ್ದರೆ ಆರೋಗ್ಯವೆಂಬ ಸತ್ಯವನ್ನು ಅರಿತುಕೊಂಡು ಅದನ್ನು ಬಲವಾಗಿ ತಮ್ಮ ಜೀವಮಾನದುದ್ದಕ್ಕೂ ಪಾಲಿಸಿಕೊಂಡು ಬರುವ ಅವರು ದೇವರ ಮೇಲಿನ ಭಕ್ತಿಗಿಂತ ಸ್ವಚ್ಛ ಶುಭ್ರವಾಗಿರುವುದೇ ಹೆಚ್ಚು ಸಮಂಜಸ ಎಂದು ಅರಿತ ಜ್ಞಾನಿಗಳಾಗಿದ್ದಾರೆ.

ಬಾಲ್ಯಾವಸ್ಥೆಯಿಂದಲೇ ಶುಭ್ರತೆ, ಸ್ವಚ್ಛತೆಗಳಿಗೆ ಕಟ್ಟುನಿಟ್ಟಾದ ನೀತಿ ಪಾಠ, ನಿಯಮಗಳನ್ನು ಹಾಕಿ ಅದನ್ನು ಅವರು ಅಭ್ಯಾಸ ಮಾಡಿಸುವುದರ ಮೂಲಕ ಜೀವನವಿಡೀ ಅವರು ಅದನ್ನು ಕಾಪಾಡಿಕೊಂಡು ಅನುಸರಿಸಿ ವಯಸ್ಕರಾಗಿ ಲಗ್ನವಾಗಿ ಮಕ್ಕಳಾದ ನಂತರ ಬಳುವಳಿಯಾಗಿ ಅದನ್ನು ನೀಡುವುದು ಅವರು ಜಾರಿಗೆ ತಂದಿರುವ ಸಂಸ್ಕಾರ, ಅನೇಕ ಅನುಭವ ಕಥೆಗಳನ್ನು ಇದರಲ್ಲಿ ಬಳಸಿದ್ದಾರೆ.

ಅರ್ಥ ಶಾಸ್ತ್ರಜ್ಞರ ಸೂತ್ರ
ಉತ್ಪಾದನೆ ಕಡಿಮೆಯಾಗಿ
ಬೇಡಿಕೆ ಹೆಚ್ಚಾದರೆ ಕೊರತೆ
ಸುಖದ ಕೊರತೆಗೂ
ಅನ್ವಯಿಸುತ್ತದೆ ಇದೇ ಸೂತ್ರ
ಸುಖದ ಬೆಳೆ ಬೆಳೆಯುವುವರೇ ಇಲ್ಲ

     -ಜಿನದತ್ತ ದೇಸಾಯಿ

ಪ್ರತಿಯೊಂದು ಪ್ರಜ್ಞೆಯಲ್ಲೂ ಜಿನದತ್ತ ದೇಸಾಯಿಯವರ ಚುಟುಕು ಮೊದಲು ಹಾಕಿ ಮುಂದುವರೆಸಿದ್ದು ಇದೆ.

ಚಿನ್ನದ ಮೇಲಿನ ಮೋಹ ನಮ್ಮ ದೇಶದ ಜನರಲ್ಲಿರುವಷ್ಟು ಇತರ ದೇಶಿಯರಲ್ಲಿ ಕಾಣಬರುವುದಿಲ್ಲ. ಎರಡನೆಯ ಮಹಾಯುದ್ಧ ನಂತರದ ಜರ್ಮನಿಯಲ್ಲಿ ಕೂಲಿ ಕಾರ್ಮಿಕರ ಅಭಾವ ಕಂಡಾಗ ತುರ್ಕಿಯರು ಅಧಿಕ ಸಂಖ್ಯೆಯಲ್ಲಿ ವಲಸೆ ಹೋದರು. ಈಗ ಸ್ಥಳೀಯರ ಜನಸಂಖ್ಯೆ ಏರಿ ಅವರಿಗೆ ನೌಕರಿ ದೊರೆಯದೆ ಹೋದಾಗ ಪರದೇಶಿ ತುರ್ಕಿಯರ ಉಚ್ಛಾಟನೆಗೆ ಕರೆ ನೀಡಲಾಗಿದೆ. ಇದು ಪ್ರತಿಯೊಂದು ದೇಶದ ಕತೆಯಾಗಿದೆ.

ಎಲ್ಲಿ ಯಾವ ದೇಶದಲ್ಲಿ ಜನಸಂಖ್ಯೆಯ ಅಭಾವವಿದೆಯೋ ತನ್ನ ಅನುಕೂಲತಗಾಗಿ ಪರರಾಷ್ಟ್ರೀಯರನ್ನು ಕರೆದು ನೌಕರಿ ನೀಡುವ ಪರಿಪಾಠ ಇರಿಸಿಕೊಂಡಿರುವುದನ್ನು ಹೆಚ್ಚಾಗಿ ಮಧ್ಯ ಪ್ರಾಚ್ಯರ ಕೊಲ್ಲಿ ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ. ಇತ್ತೀಚೆಗೆ ಸ್ಥಳೀಯರ ಸಂಖ್ಯೆ ಹೆಚ್ಚಾಗಿ ಅವರಿಗೆ ನೌಕರಿ ಕಲ್ಪಿಸಿಕೊಡುವ ನೆಪದಲ್ಲಿ ವಿದೇಶಿಯರನ್ನು ಹೊರದಬ್ಬುವ ಕಾರ್ಯ ಜರುಗುತ್ತಿದೆ.
ನಮ್ಮ ದೇಶದಲ್ಲಿ ಕೇರಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಜನಸಂಖ್ಯೆ ಹೆಚ್ಚಾಗಿ ಹೋಗುವುದು ಕಂಡು ಬರುತ್ತಿದೆ. ಇದಕ್ಕೆ ಜನಸಂಖ್ಯೆ ನಿಯಂತ್ರಣವೇ ಮದ್ದು.

ಧಾರ್ಮಿಕ ಪ್ರಜ್ಞೆ ಕುರಿತು ಚೆನ್ನಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ. ಮೂವರು ತತ್ವ ಜ್ಞಾನಿಗಳಾದ ಶಂಕರಾಚಾರ್ಯ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರು ಹಿಂದು ಧರ್ಮದ ತತ್ವ ವಿಚಾರಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಅವನ್ನೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತವೆಂಬ ಮೂರು ತತ್ವ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಇದರಲ್ಲಿ ಹಿಂದೂ ತತ್ವ ವಿಚಾರಗಳನ್ನು ವಿಶ್ಲೇಷಿಸುವಾಗ ದೇವರೊಬ್ಬನೆ, ಜೀವಾತ್ಮ ಬೇರೆ ಪ್ರತ್ಯೇಕನೆಂದು ಮಧ್ವಾಚಾರ್ಯರು ಪ್ರತಿಪಾದಿಸಿದರೆ, ಶಂಕರಾಚಾರ್ಯರು ದೇವರು ಎಲ್ಲೆಲ್ಲೂ ಇದ್ದಾನೆ. ಪ್ರತಿಯೊಬ್ಬರಲ್ಲಿ ಇದ್ದಾನೆ ಮತ್ತು ಆತ ಪ್ರತ್ಯೇಕವಾಗಿಲ್ಲ. ನಮ್ಮಲ್ಲಿ ಇದ್ದಾನೆ ಅಥವಾ ‘ಅದ್ವೈತ’ ಎಂಬ ತತ್ವ ಸಾರಿದರು.

ವಿಶಿಷ್ಟಾದ್ವೈತ ಪ್ರತಿಪಾದಕ ರಾಮಾನುಜಚಾರ್ಯರು ದೇವ ಎಲ್ಲೆಲ್ಲೂ ಇದ್ದಾನೆಂಬುದನ್ನು ಒಪ್ಪಿದರೂ ಮೋಕ್ಷದ ವಿಚಾರದಲ್ಲಿ ದೇವನಲ್ಲಿ ಲೀನವಾಗಿರುವ ವಿಷಯದಲ್ಲಿ ಒಂದು ‘ವಿಶಿಷ್ಟತೆ’ ತೋರಿ, ಮಾನವ ದೇವರ ಸನ್ನಿಧಿಯನ್ನು ಸೇರಬಹುದೇ ಹೊರತು ಅವನಲ್ಲಿ ಲೀನವಾಗಿ ತಾನೇ ದೇವನಾಗುವುದಿಲ್ಲ ಎಂದರು.

ಈ ಮೂರು ತತ್ವಗಳನ್ನು ಪಾಲಿಸಿ ದೇವರ ಸಾನ್ನಿಧ್ಯ ಅಥವಾ ಮೋಕ್ಷ ಸಾಧನೆಗೆ ಭಗವದ್ಗೀತೆ ಸಾರಿದ ರೀತಿಯಲ್ಲಿ ನಾಲ್ಕು ಮಾರ್ಗಗಳಾದ ‘ಜ್ಞಾನ ಮಾರ್ಗ’, ‘ಭಕ್ತಿಮಾರ್ಗ’, ಕರ್ಮಮಾರ್ಗ’ ಮತ್ತು ‘ರಾಜಮಾರ್ಗ’ಗಳಲ್ಲಿ ಯಾವುದಾದರೊಂದನ್ನು ಹಿಡಿದರೆ ಮೋಕ್ಷ ಸಾಧನೆ ಶತಃಸಿದ್ದ ಎಂಬ ತತ್ವ ವಿಚಾರವನ್ನು ಹಿಂದೂ ಧರ್ಮ ಬೋಧಿಸುತ್ತದೆ. ಇದರಲ್ಲಿ ಸಮಯ ಪ್ರಜ್ಞೆ ಒಂದು ಸೇರಿಸಬೇಕಾಗಿತ್ತು. ಇದು ಅವಶ್ಯಕವಾದದ್ದು ಇರಲಿ.

ಎಲ್ಲರಿಗೆ ತಿಳಿವಳಿಕೆ, ಎಚ್ಚರ ಮೂಡಿಸುವ ಈ ಪುಸ್ತಕ ಎಲ್ಲರಿಗೂ ಉಪಯುಕ್ತವಿದೆ. ಇನ್ನೊಂದು ಮುದ್ರಣ ಕಾಣಲಿ. ಮಾನವ ಮಾತ್ರ ತನ್ನ ಹುಟ್ಟು ಗುಣಗಳಾದ ಮದ, ಮಾತ್ಸರ್ಯ, ಮೋಹ, ಕಾಮ, ಕ್ರೋಧ ಲೋಭ ಎಂಬ ಅರಿಷಡ್ವರ್ಗಗಳನ್ನು ಹತ್ತಿಕ್ಕುವುದರಲ್ಲಿ ಯಶಸ್ಸು ಪಡೆದಿಲ್ಲ. ವೇದಕಾಲದ ಖಷಿಗಳು ಹೇಳಿದಂತೆ ಒಕ್ಕಟ್ಟನಿಂದಿರಿ,ಚೆಂದಾಗಿ ಮಾತಾಡಿ ನಿಮ್ಮ ಮನಸ್ಸುಗಳು ಒಂದೇ ರೀತಿಯಲ್ಲಿ ಗ್ರಹಿಸಲಿ ನಿಮ್ಮ ಸಾಮೂಹಿಕ ಯೋಚನೆಗಳು ಒಂದೇ ಆಗಿರಲಿ. ನಿಮ್ಮ ನಿರ್ಧಾರ ಒಂದೇ ಆಗಿರಲಿ. ನಿಮ್ಮ ಹೃದಯಗಳು ಒಂದೇ ಆಗಿರಲಿ,ನಿಮ್ಮ ಉದ್ದೇಶವೂ ಒಂದೇ ಆಗಿರಲಿ ನಿಮ್ಮ ಒಗ್ಗಟ್ಟು ಪರಿಪೂರ್ಣವಾಗಿರಲಿ.

ಯಾವುದೇ ಫಲಾಪೇಕ್ಷೆಯಿಲ್ಲದೆ, “ನಾವು ಮತ್ತು ಪ್ರಜ್ಞೆ ” ಉತ್ತಮ ಕೃತಿ ತಮ್ಮಷ್ಟಕ್ಕೆ ತಾವು ಪುಸ್ತಕಗಳನ್ನು ಬರೆಯುವುದು ಪ್ರಕಟಿಸುವುದರಲ್ಲಿ ತೊಡಗಿಸಿಕೊಂಡಿರುವ ಆಗುಂಬೆ ನಟರಾಜ ಅವರು ನಿರಂತರ ಕ್ರೀಯಾಶೀಲರು, ಇವರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇವರ ಚರವಾಣಿ 9481423004.

ಎಂ. ವೈ. ಮೆಣಸಿನಕಾಯಿ
ಬೆಳಗಾವಿ.
ಮೊ: 9449209570

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group