spot_img
spot_img

ಶರಣ ಶ್ರೀ ಹಡಪದ ಅಪ್ಪಣ್ಣನವರ ಸ್ಮರಣೋತ್ಸವ.

Must Read

- Advertisement -

ಜಯಂತಿ: ಕಡ್ಲಿಗಡಬು ಹುಣ್ಣಿಮೆ/ಗುರು ಪೂರ್ಣಿಮೆ ಯಂದು

ಪತ್ನಿ: ಶರಣೆ ಲಿಂಗಮ್ಮ
ಕಾಯಕ: ತಾಂಬೂಲ ಕರಂಡ / ಹಡಪದ
ಲಭ್ಯ ವಚನಗಳ ಸಂಖ್ಯೆ: ೨೪೯
ಅಂಕಿತ: ಬಸವಪ್ರಿಯ ಕೂಡಲಚೆನ್ನಬಸವಣ್ಣ

ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಅಪ್ಪಣ್ಣನವರ ಗುರು ಶ್ರೀ ಚೆನ್ನಬಸವೇಶ್ವರರು.. ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರ ಜೊತೆ ಕೂಡಲಸಂಗಮದವರೆಗೂ ಹೋಗುತ್ತಾರೆ. ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಯೇ ಬಸವಣ್ಣನವರು ಲಿಂಗೈಕ್ಯರಾದ ಸಂಗತಿ ತಿಳಿಯುತ್ತದೆ. ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣ ಅವರುಗಳು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ..
ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವು ಇದೆ. ಅವುಗಳಲ್ಲಿ ಬೆಡಗಿನವು ಅಧಿಕ. ಷಟ್-ಸ್ಥಲ ತತ್ವ ನಿರೂಪಣೆಗೆ ಆದ್ಯತೆ. ಕೆಲವು ಕಥನಶೈಲಿಯನ್ನು ಅಳವಡಿಸಿಕೊಂಡಿವೆ. ಬೆಡಗಿನ ವಚನಗಳು ಹೆಚ್ಚು ಷಟ್-ಸ್ಥಲ ವಿಷಯ ಪ್ರಧಾನವಾಗಿದೆ. ವಚನಗಳು ಗ್ರಹಿಸಲು ಸುಲಭವಾಗಿವೆ.

- Advertisement -

ಇವರದೊಂದು ವಚನ:
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು..
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ..?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ, ಇತ್ತ ಬನ್ನಿ ಎಂಬರು..
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ, ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ, ಬಸವಪ್ರಿಯ ಕೂಡಲಚೆನ್ನಬಸಣ್ಣಾ

ಶರಣ ಶ್ರೀ ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ ಶರಣೆ ಲಿಂಗಮ್ಮನವರ ಸ್ಮರಣೋತ್ಸವ

ಕಾಯಕ: ತಾಂಬೂಲ ಕರಂಡ / ಹಡಪದ ಕೆಲಸ ಮಾಡುವ ಪತಿಗೆ ಸಹಾಯ
ಲಭ್ಯ ವಚನಗಳ ಸಂಖ್ಯೆ: ೧೧೪
ಅಂಕಿತ: ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ

- Advertisement -

ಬಸವಣ್ಣನವರ ಆಪ್ತರಲ್ಲಿ ಮುಖ್ಯವೆನಿಸಿದ ಹಡಪದ ಅಪ್ಪಣ್ಣನವರ ಪತ್ನಿ. ಗುರು-ಚೆನ್ನಮಲ್ಲೇಶ. ಉನ್ನತ ಅನುಭಾವಿಯಾದ ಲಿಂಗಮ್ಮನವರ ೧೧೪ ವಚನಗಳು, ೧ ಸ್ವರವಚನ, ೧ ಮಂತ್ರಗೋಪ್ಯ ದೊರೆತಿವೆ.
ಮನದ ಚಂಚಲತೆ, ಅದನ್ನು ನಿಗ್ರಹಿಸುವ ವಿಧಾನ, ಗುರು-ಲಿಂಗ-ಜಂಗಮ ಭಕ್ತಿ, ಶರಣರ ನಡೆನುಡಿ, ಆಚಾರ ವಿಚಾರ ನಿಷ್ಠೆ, ಡಾಂಭಿಕಭಕ್ತರ ಟೀಕೆ, ಯೋಗವಿಚಾರ ಈಕೆಯ ವಚನಗಳಲ್ಲಿ ತೋರುವ ಪ್ರಮುಖ ವಿಷಯಗಳಾಗಿವೆ. ಭಾಷೆಯ ತಾತ್ವಿಕ ವಿಷಯ ನಿರೂಪಣೆಯಲ್ಲಿ ಬೆಡಗಿನಿಂದ ಕೂಡಿದ್ದರೆ, ಟೀಕೆ ವಿಡಂಬನೆಗಳಲ್ಲಿ ನೇರ, ದೇಶೀ ಸೊಗಡಿನಿಂದ ಸಂಭ್ರಮಿಸುತ್ತದೆ.

ಕೃತಿಯ ವೈಶಿಷ್ಟ್ಯ : ಇವರ ಗುರು ಚನ್ನಮಲ್ಲೇಶನ ಸ್ತುತಿ ವಿಶೇಷವಾಗಿದೆ. ಇವರು ಮಂತ್ರ ಗೋಪ್ಯ ಹಾಗೂ ಸ್ವರವಚನ ಬರೆದಿರುವರು. ಇವರ ವಚನಗಳನ್ನು “ಲಿಂಗಮ್ಮನ ಬೋಧೆಯ ವಚನಗಳು” ಎಂದು ಕರೆಯಲಾಗಿದೆ. ತತ್ವಭೋಧೆಯೇ ವಚನಗಳ ಮುಖ್ಯ ಉದ್ದೇಶ..

ಇವರದೊಂದು ವಚನ:
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು. ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು. ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು; ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು; ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು. ನಿಜವ ನೆಮ್ಮಿ ನೋಡುವನ್ನಕ್ಕ, ಎನ್ನ ಅತ್ತೆ ಮಾವರು ಅರತುಹೋದರು; ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು, ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ, ಎನ್ನ ಮನಕ್ಕೆ ಸಿಕ್ಕಿತ್ತು; ಅಂಗಲಿಂಗವೆಂಬ ಉಭಯವಳಿಯಿತ್ತು; ಸಂಗಸುಖ ಹಿಂಗಿತ್ತು. ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ..

( ವಾಟ್ಸಪ್ ಕೃಪೆ )

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group