ಮೂಡಲಗಿ – ೨೦೨೧ ರ ಲೋಕಸಭಾ ಉಪಚುನಾವಣೆಯಲ್ಲಿ ಚುನಾವಣಾ ವೆಚ್ಚಕ್ಕಾಗಿ ನೀಡಲಾಗಿದ್ದ ಹಣ ದುರ್ಬಳಕೆ ಮಾಡಿ ಕರ್ತವ್ಯಲೋಪ ಎಸಗಿದ್ದ ಅಂದಿನ ಬೆಳಗಾವಿ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಇಬ್ಬರು ಶಿರಸ್ತೆದಾರರು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಕೊನೆಗೂ ಪೊಲೀಸ್ ಇಲಾಖೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.
ದಿ. ೨೦.೯.೨೦೨೨ ರಂದು ಬೆಳಗಾವಿ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಈ ಅಧಿಕಾರಿಗಳು ಚುನಾವಣಾ ಹಣ ದುರುಪಯೋಗ ಮಾಡಿಕೊಂಡಿದ್ದನ್ನು ದೃಢಪಡಿಸಿದ್ದರು. ಅಲ್ಲದೆ ಚುನಾವಣಾ ವೆಚ್ಚದ ದಾಖಲೆಗಳನ್ನು ಮತ್ತು ವೆಚ್ಚವಾಗಿ ಉಳಿದ ಹಣವನ್ನು ಕೂಡ ತಹಶೀಲ್ದಾರರು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ೨೦೨೨ ರಲ್ಲಿ ದೂರು ನೀಡಿದ್ದರು. ಈವರೆಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದ ಜಿಲ್ಲಾಧಿಕಾರಿಗಳ ವಿರುದ್ಧ ಅವರ ವಿಳಂಬ ನೀತಿಯನ್ನು ಪ್ರಶ್ನಿಸಿ ದಿ. ೧೫.೦೪.೨೦೨೪ ರಂದು ಮತ್ತೆ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಹಿತ ದೂರು ಸಲ್ಲಿಸಿ, ಕ್ರಮ ಜರುಗಿಸದಿದ್ದರೆ ನ್ಯಾಯಾಲಯದ ಬಾಗಿಲು ತಟ್ಟುವುದಾಗಿ ಹೇಳಿದ್ದರು. ಈಗ ಸರ್ಕಾರದಿಂದ ಬಂದ ನಿರ್ದೇಶನದ ಪ್ರಕಾರ ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಪೊಲೀಸ ಅಧಿಕಾರಿಗಳು ಮೂರು ವರ್ಷಗಳ ನಂತರ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು ಇನ್ನಾದರೂ ಹಗರಣ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಬಹುದೆಂಬ ಭರವಸೆ ಸಿಕ್ಕಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಜರುಗಿಸಲಾಗುವುದೆಂಬುದನ್ನು ಕಾದು ನೋಡಬೇಕು.
Must Read
- Advertisement -
- Advertisement -
More Articles Like This
- Advertisement -