ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆವಹಿಸಿ ಸಮಸ್ಯೆ ಪರಿಹಾರ ಮಾಡಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡುವುದಿಲ್ಲ ಎಂದ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ನಗರದ ತಮ್ಮ ನಿವಾಸದಲ್ಲಿ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿ, ಈ ಹಿಂದೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ...
ನೀಲಿಗಗನದಲಿ...
ನೀಲಿಗಗನದಲಿ ನಾಡ ಶಕ್ತಿಯದೋ.....
ನುಡಿಯುತಿದೆ : //ಪ//
ಸಾರ್ವಭೌಮ ತನ್ನ ಗುರಿಯೆಂದು
ಕೇಸರಿ , ಬಿಳಿ, ಹಸಿರು ಮೂರು
ತನ್ನ ಭಾತೃತ್ವದ ಪ್ರತೀಕವೆಂದು......!! //ಪ//
ಮೇಲು- ಕೀಳು , ಬಡವ - ಬಲ್ಲಿದ
ಜಾತಿ - ಪಂಥ , ಪಂಗಡಗಳಿಗೆಲ್ಲಾ ಒಂದೇ ವಿಧಿಯಂದು
ಹಕ್ಕೊಂದೇ ಸಲ್ಲದು
ಕರ್ತವ್ಯ ಪರಮ ಧ್ಯೇಯವೆಂದು !! //ಪ//
ಹಿಂದೂ ಮಹಾಸಾಗರದ ಭೂಶಿರವು
ಕಾಶ್ಮೀರದ ಮುಕುಟವು ಅಖಂಡ ಭೂಪಟವೆಂದು
ದೇಶವಾಸಿಗಳಿಗೆಲ್ಲ ಒಂದೇ ಧರ್ಮ
ಒಂದೇ ಕುಲ ಒಂದೇ...
ಹಿರಿಯ ನಾಗರಿಕರಿಗೂ ಭಾರತೀಯರಿಗೂ ವ್ಯತ್ಯಾಸ ಇದೆಯೆ? ಭಾರತೀಯರಾಗಲು ಭಾರತದೊಳಗಿದ್ದರೆ ಸಾಕೆ? ಪ್ರಜಾಪ್ರಭುತ್ವದ ಇಂದಿನ ಪರಿಸ್ಥಿತಿ ನೋಡಿದರೆ ನಿಜವಾಗಿಯೂ ನಾವು ದೇಶವನ್ನು ಉಳಿಸಿದ್ದೇವೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರದ ಎಲ್ಲಾ ಸೇವೆಗಳನ್ನು ಬಳಸಿಕೊಳ್ಳುವುದು ನಾಗರಿಕರ ಕರ್ಮ ವಾಗಿದೆ. ಆದರೆ, ಸರ್ಕಾರವನ್ನು ಸರಿ ದಾರಿಯಲ್ಲಿ ನಡೆಸುವುದು ಹೇಗೆಂಬ ಧರ್ಮ ಮಾರ್ಗ ತಿಳಿಯದವರು ನಾಗರಿಕರಾಗಿ ಸೇವೆ ಮಾಡಿಸಿಕೊಳ್ಳುವ...
ಇದೇ ಜ. 31 ರಂದು
1896 ರಲ್ಲಿ ಸ್ವಾಮಿ ವಿವೇಕಾನಂದ ಅವರು ಪ್ರಾರಂಭಿಸಿದ ರಾಮಕೃಷ್ಣ ಮಿಷನ್ ನ ಮಾಸ ಪತ್ರಿಕೆ 'ಪ್ರಬುದ್ಧ ಭಾರತ' ದ 125 ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮವನ್ನು ಮಾಯಾವತಿಯ ಅದ್ವೈತ ಆಶ್ರಮ ಆಯೋಜಿಸಿದೆ.
'ಪ್ರಬುದ್ಧ ಭಾರತ’ ಮಾಸ ಪತ್ರಿಕೆ
ಭಾರತದ ಪ್ರಾಚೀನ ಅಧ್ಯಾತ್ಮದ ಸಂದೇಶವನ್ನು ಪ್ರಚಾರ ಮಾಡಲು ‘ಪ್ರಬುದ್ಧ ಭಾರತ’ ಪತ್ರಿಕೆ ಒಂದು ಪ್ರಮುಖ ಮಾಧ್ಯಮವಾಗಿದೆ. ಇದರ ಪ್ರಕಟಣೆಯನ್ನು ಚೆನ್ನೈನಿಂದ (ಹಿಂದಿನ ಮದ್ರಾಸ್) ಪ್ರಾರಂಭಿಸಲಾಯಿತು. ಅಲ್ಲಿ ಎರಡು ವರ್ಷಗಳವರೆಗೆ ಪತ್ರಿಕೆ ಪ್ರಕಟವಾಯಿತು. ನಂತರ ಅದನ್ನು ಅಲ್ಮೋರಾದಿಂದ ಪ್ರಕಟಿಸಲಾಯಿತು. ನಂತರ, ಏಪ್ರಿಲ್ 1899 ರಲ್ಲಿ, ಪತ್ರಿಕೆಯ ಪ್ರಕಟಣಾ ಸ್ಥಳವನ್ನು ಅದ್ವೈತ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅಲ್ಲಿಂದಲೇ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿದೆ.
ಹಲವಾರು ಶ್ರೇಷ್ಠ ವ್ಯಕ್ತಿಗಳು ಭಾರತೀಯ ಸಂಸ್ಕೃತಿ, ಆಧ್ಯಾತ್ಮ, ತತ್ವಶಾಸ್ತ್ರ, ಇತಿಹಾಸ, ಮನೋವಿಜ್ಞಾನ, ಕಲೆ ಮತ್ತು ಇತರ ಸಾಮಾಜಿಕ ವಿಷಯಗಳ ಕುರಿತು ‘ಪ್ರಬುದ್ಧ ಭಾರತ’ ದಲ್ಲಿ ಬರೆದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ಸೋದರಿ ನಿವೇದಿತಾ, ಶ್ರೀ ಅರಬಿಂದೋ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಮುಂತಾದವರು ಪತ್ರಿಕೆಗೆ ಬರೆದಿದ್ದಾರೆ.
ಅದ್ವೈತ ಆಶ್ರಮವು ತನ್ನ ವೆಬ್‌ಸೈಟ್‌ನಲ್ಲಿ ಸಂಪೂರ್ಣ ‘ಪ್ರಬುದ್ಧ ಭಾರತ’ ದ ಹಳೆಯ ಸಂಚಿಕೆಗಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಆಧಾರ : ಪಿಐಬಿ
ಪುಸ್ತಕ ಪರಿಚಯ
ಪುಸ್ತಕದ ಹೆಸರು : ಹೃದಯ ಮಾಧುರ್ಯ
ಲೇಖಕರ ಹೆಸರು : ಬಿ. ಕೆ. ಮಲಾಬಾದಿ
ಪ್ರಕಾಶಕರು : ಶ್ರೀಶೈಲಗಿರಿ ಪ್ರಕಾಶನ ಶಹಪುರ ಬೆಳಗಾವಿ
ಪ್ರಥಮ ಮುದ್ರಣ : ೨೦೨೦
ಪುಟಗಳು : xxiv+58=82
ಶ್ರೀ. ಬಿ. ಕೆ. ಮಲಾಬಾದಿಯವರು ವೃತ್ತಿಯಿಂದ ಹಿರಿಯ ಲೆಕ್ಕಪರಿಶೋಧಕರಾಗಿದ್ದರೂ ಸಹ ಪ್ರವೃತ್ತಿಯಿಂದ ಲೇಖಕರಾಗಿದ್ದಾರೆ . ತಮ್ಮಲ್ಲಿರುವ ನೈಜ ಭಾವನೆಗಳನ್ನು ಲಿಖಿತ ರೂಪದಲ್ಲಿ ತರುವುದು ಇವರ ಅತ್ತುತ್ಯಮ...
ದೇವರು ನಿರಾಕಾರ ಮಾನವ ಸಾಕಾರ. ಆತ್ಮನಿರಾಕಾರ ದೇಹ ಸಾಕಾರ, ಸತ್ಯ ನಿರಾಕಾರ ಅಸತ್ಯ ಸಾಕಾರ, ಧರ್ಮ ನಿರಾಕಾರ ಧರ್ಮರಕ್ಷಕ ಸಾಕಾರ.ತತ್ವ ನಿರಾಕಾರ ತಂತ್ರ ಸಾಕಾರ. ಮಂತ್ರ ನಿರಾಕಾರ ಮಂತ್ರವಾದಿ ಸಾಕಾರ.
ಜ್ಞಾನ ನಿರಾಕಾರ ವಿಜ್ಞಾನ ಸಾಕಾರ. ಸತ್ಯಯುಗದಿಂದಲೂ ಭೂಮಿಯ ಮೇಲಿರುವ ಎಲ್ಲವೂ ಕಲಿಯುಗದಲ್ಲಿಯೂ ಇದೆ. ಆದರೆ ದೈವತ್ವ ಪಡೆದವರು ದೇವರಾದರು. ಅಸುರತ್ವ ಪಡೆದವರು ಮಾನವರಾಗೇ ಉಳಿದರು....
ಆತ್ಮೀಯರು , ಹಿರಿಯರು ಸಾಹಿತಿಗಳೂ ಆಗಿರುವ ಶ್ರೀಮತಿ ಡಾ. ಸರೋಜಿನಿ ಭದ್ರಾಪೂರ ಅವರು ತಮ್ಮ ಇಳಿ ವಯಸ್ಸಿನಲ್ಲೂ ಬಹಳ ಉತ್ಸುಕತೆಯಿಂದ ನನ್ನ ಎರಡು ಕೃತಿಗಳನ್ನು ಓದಿ ಈ ಕೃತಿಗಳ ಅವಲೋಕನವನ್ನು ಮಾಡಿರುವುದು ತುಂಬಾ ಸಂತಸದ ವಿಷಯ.
ಅವರ ಓದುವ ಹವ್ಯಾಸ ಮತ್ತು ಬರವಣಿಗೆಯ ಆಸಕ್ತಿ ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ ಕಾರಣ ಈ ವಯಸ್ಸಿನಲ್ಲಿ ಈಗಿನ ಜನ...
ರಾಷ್ಟ್ರಾಭಿಮಾನ
ಸ್ವಾಭಿಮಾನದ ರಾಷ್ಟ್ರ ನಮ್ಮದು
ಪ್ರಾಣ ಮೀಸಲು ಇಡುವೆವು
ಸ್ವಾಭಿಮಾನದ ಸಮರ ಗೈಯುತ
ವೀರ ಮರಣವ ಪಡೆವೆವು||
ಕಟ್ಟಿಕಂಕಣ ಬದ್ಧರಾಗುತ
ವೈರಿ ಪಡೆಯನು ಹಳಿವೆವು
ಕುಟ್ಟಿ ದೈತ್ಯರ ಶಿರವ ಛೇದಿಸಿ
ತಾಯಿ ಪಾದವ ತೊಳಿವೆವು||
ವೈರಿ ಶೇಷವ ಕಿತ್ತು ಹೊಸೆದು
ರಾಷ್ಟ್ರ ರಕ್ಷಿಸಿ ನಿಲ್ಲುವೆವು
ಸೈನ್ಯ ಪಡೆಯದು ಗುಂಡು ಹಾರಿಸಿ
ದಾಳಿಕೋರರ ಕೊಲ್ಲುವೆವು||
ಹಿಂದೂ ದೇಶವು ಎಂದೂ ಬಗ್ಗದು
ತಂತ್ರ ಕುತಂತ್ರ ಆಟಕೆ
ಮುಂದೆ ಗೋವು ಹಿಂದೆ ನೋವು
ಕೊಡುವ ಹಿತಶತೃ ಕಾಟಕೆ ||
ರಾಷ್ಟ್ರಭಿಮಾನ ನಾವು ತೋರುತ
ಯುದ್ಧ...
ಬೀದರ - ಕೃಷಿ ಕಾಯ್ದೆ ವಿರೋಧಿಸಿ ಹಾಗೂ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಗಡಿ ಜಿಲ್ಲೆ ಬೀದರ್ ನಲ್ಲೂ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.
ಭಾಲ್ಕಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ, ಗಾಂಧಿ ಪ್ರತಿಮೆ ಸೇರಿದಂತೆ ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿ ಆರಂಭಿಸಿ ಬೀದರ ಜಿಲ್ಲಾಧಿಕಾರಿ ಕಚೇರಿಯವರೆಗೆ ಟ್ರಾಕ್ಟರ್ ರ್ಯಾಲಿ ಹಾಗೂ ಪಾದಯಾತ್ರೆಯ ಮೂಲಕ...
ನಿನ್ನ ನೆರಳೆ ನಿನಗೆ ಸಾಕು
ಯಾರನ್ನೂ ನಂಬಿ ಮೋಸ ಹೋಗಬೇಡ,
ನಿನ್ನ ನೆರಳೇ ನಿನಗೆ ಸಾಕು…
ನೀನೇ ನಿನ್ನ ಬಾಳಿನ ದಾರಿ,
ನಿನ್ನ ನಂಬಿಕೆಯಾಗಲಿ ಬೆಳಕು…
ನಗುವ ಹಿಂದೆ ಏನೆಂಬುದು ಅರಿಯಲು ಸಾಧ್ಯವೋ?
ಹೃದಯದೊಳಗೇ...