Monthly Archives: October, 2021
ಸುದ್ದಿಗಳು
ಬುದ್ಧ ಬಸವ ಅಂಬೇಡ್ಕರ ಶಾಂತಿ ಸೌಹಾರ್ದ ಪ್ರಶಸ್ತಿಗೆ ಜಯಶ್ರೀ ಆಯ್ಕೆ
ಹಿರೇಬಾಗೇವಾಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ ಅಬ್ಬಿಗೇರಿ ಇವರು ಶ್ರೀ ಬುದ್ಧ ಬಸವ ಅಂಬೇಡ್ಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷಾನ(ರಿ) ನೀಡುವ ಬುದ್ಧ ಬಸವ ಅಂಬೇಡ್ಕರ ಶಾಂತಿ ಸೌಹಾರ್ದ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇವರ ಸಾಹಿತ್ಯ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಕ್ಟೋಬರ್ 17...
ಕವನ
ಕವನ: ಮಹಾಗೌರಿ
ಮಹಾಗೌರಿ
ನಾರಿಮಣಿಯರ ನೂರು ದುಗುಡವ
ದೂರಮಾಡಲು ಧರೆಗೆ ಬಂದಿಹ
ಗೌರಿ ದೇವಿಗೆ ನಮಿಸಿರೆಲ್ಲರು ಶರಣು ಗೌರಮ್ಮಾ
ಮೂರು ಕಣ್ಣಿವೆ ನಾಲ್ಕು ಕರಗಳು
ಸೀರೆಹಸಿರಿನ ಧರಿಸಿ ಸುಂದರಿ
ತೋರು ನಿನ್ನಯ ಮಹಿಮೆ ನಮ್ಮಲಿ ಮಹಾಗೌರಮ್ಮಾ//1
ವೃಷಭ ವಾಹನರೂಢೆ ಪಾರ್ವತಿ
ಖುಷಿಯ ಬದುಕಿನ ದಾರಿ ತೋರಿಸು
ತೃಷೆಯ ನೀಗಿಸಿ ಕಾಯ್ವ ಗಂಗೆಯ ತಂಗಿ ಗೌರಮ್ಮಾ
ಹಸಿವೆ ತಣಿಸುವೆಯನ್ನಪೂರ್ಣೆಯೆ
ಫಸಲು ಬೆಳೆಯುವ ವರವ ನೀಡುತ
ತುಸುವೆ ಕರುಣೆಯ ಕಂಗಳಿಂದಲಿ ಹರಸು ನಮ್ಮಮ್ಮಾ//2
ಕರದಿ ಡಮರುಗ ಪಿಡಿದ ದೇವತೆ
ವರದ...
ಸುದ್ದಿಗಳು
ಬಂದಾಳದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಸಿಂದಗಿ: ಭಾರತೀಯ ನ್ಯಾಯಾಲಯ ವ್ಯವಸ್ಥೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಮತ್ತು ಬಡವರಿಗೆ, ಅಸಹಾಯಕರಿಗೆ, ಮಹಿಳೆ, ಮಕ್ಕಳು ಸೇರಿದಂತೆ ಎಲ್ಲವರ್ಗಗಳ ಜನರಿಗೆ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಸೌಲಭ್ಯಗಳು ದೊರೆತು ಸಾರ್ಥಕತೆ ಪಡೆಯಲು ಎಲ್ಲರೂ ಕೈಜೊಡಿಸಿ ಸಮನ್ವಯತೆಯಿಂದ ಕಾರ್ಯಮಾಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ದೊಡಮನಿ ಹೇಳಿದರು.ತಾಲೂಕಿನ ಬಂದಾಳ ಗ್ರಾಮದಲ್ಲಿ ಮಂಗಳವಾರ ರಂದು ತಾಲೂಕಾ...
ಸುದ್ದಿಗಳು
ಪೂರ್ವಭಾವಿ ಸಭೆ: ಕರಾಳ ದಿನಾಚರಣೆಗೆ ಅವಕಾಶ ಇಲ್ಲ
ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಪ್ರಕಾರ ಅನುಮತಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೆಳಗಾವಿ - (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ. ಅದೇ ರೀತಿ ಸರಕಾರದ ಮಾರ್ಗಸೂಚಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಅ.12)...
ಸುದ್ದಿಗಳು
ಸಿಂದಗಿ ಕ್ಷೇತ್ರದಲ್ಲಿ ಅಶೋಕ ಮನಗೂಳಿ ಪ್ರಚಾರ
ಸಿಂದಗಿ: ಕ್ಷೇತ್ರದ ಬೋರಗಿ, ಗುಬ್ಬೇವಾಡ, ಕಣ್ಣಗುಡಿಹಾಳ, ಹಡಗಿನಾಳ, ಪುರದಾಳ, ಡವಳಾರ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಯವರ ಪರವಾಗಿ ಮತ ಯಾಚನೆ ಮಾಡಲಾಯಿತು.ನಂತರ ಬೋರಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮನಗೂಳಿ, ಇವತ್ತು ಕಾಂಗ್ರೆಸ್ ಸರ್ಕಾರ ಇದ್ದರೆ ಬಡವರು ನಿರ್ಗತಿಕರು ಉಪವಾಸ ಬೀಳುವ ಪರಿಸ್ಥಿತಿ ಬರುತ್ತಿರಲಿಲ್ಲ. ದಿ.ಎಂ ಸಿ ಮನಗೂಳಿಯವರು...
ಸುದ್ದಿಗಳು
ದಿ.ಮನಗೂಳಿಯವರಿಗೆ ಜೆಡಿಎಸ್ ಎಂದೂ ದ್ರೋಹ ಬಗೆದಿಲ್ಲ – ಎಚ್ ಡಿ ದೇವೇಗೌಡ
ಸಿಂದಗಿ: ದಿ.ಎಂ.ಸಿ.ಮನಗೂಳಿ ಅವರು ನನ್ನ ಒಡನಾಡಿ ಅವರು ಪಕ್ಷಕ್ಕೆ ಸೇರಿದಾಗಿನಿಂದ ಅವರ ಉಸಿರು ಇರುವವರೆಗೂ ಮಂತ್ರಿ ಮಾಡಿದ್ದೇನೆ ಅವರಿಗೆ ದ್ರೋಹ ಬಗೆಯಲು ಹೇಗೆ ಸಾಧ್ಯ. ಅವರ ಪುತ್ರರು ಜೆಡಿಎಸ್ ಪಕ್ಷದವರ ಮೇಲೆ ಆಪಾದನೆ ಮಾಡುತ್ತಿರುವುದು ಸರಿಯೇ ಅವರಿಗೆ ಜನರೇ ಉತ್ತರ ನೀಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನಗೂಳಿ ಮನೆತನಕ್ಕೆ ಚಾಟಿ ಬೀಸಿದರು.ಪಟ್ಟಣದ ದಿ.ಐ.ಬಿ....
ಸುದ್ದಿಗಳು
ಬನಶಂಕರಿ ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಅಗರ
ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣ
ಬೆಂಗಳೂರು: ಬನಶಂಕರಿ 3 ನೇ ಹಂತದ ರಿಂಗ್ ರೋಡ್ - ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಅಗರವಾಗಿ ಪಾದಚಾರಿಗಳ ಮಾರ್ಗಕ್ಕೆ ಗ್ರಹಣ ಹಿಡಿದಿದೆ ಎಂದರೆ ಪ್ರಾಯಶಃ ತಪ್ಪಾಗಲಾರದು.ನಗರದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆಗೆ ಸಾಗುವ ಪಾದಚಾರಿ ದಾರಿಯುದ್ದಕ್ಕೂ ಪಾದಚಾರಿ ರಸ್ತೆ ಮೇಲೆ ಜಲ್ಲಿ , ಮರಳು ರಾಶಿ,...
ಸುದ್ದಿಗಳು
ಗೂಳಿಹಟ್ಟಿ ಶೇಖರ ವಿರುದ್ಧ ಕ್ರೈಸ್ತರ ಪ್ರತಿಭಟನೆ
ಬೀದರ - ವಿಧಾನ ಸಭೆಯಲ್ಲಿ ಇತ್ತೀಚೆಗೆ ಮತಾಂತರ ವಿರುದ್ಧು ದನಿಯೆತ್ತಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ರಾಜ್ಯ ಕ್ರೈಸ್ತ ರಕ್ಷಣಾ ವೇದಿಕೆಯವರು ಪ್ರತಿಭಟನೆ ಕೈಗೊಂಡಿದ್ದರು.ಕ್ರೈಸ್ತರು ಎಲ್ಲಾ ಧರ್ಮದವರೊಡನೆ ಸೌಹಾರ್ದದಿಂದ ಇದ್ದಾರೆ ಆದರೆ ಅವರ ಹೆಸರು ಕೆಡಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಶಾಂತಿ ಹಾಳಾಗುತ್ತಿದೆ. ನಾವು ಒತ್ತಾಯದಿಂದ ಮತಾಂತರ ಮಾಡುತ್ತಿಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ...
ಸುದ್ದಿಗಳು
ಬೀದರ್ ನಲ್ಲಿ ಚಿರತೆ ದಾಳಿ ಆಕಳ ಸಾವು
ಬೀದರ - ಬೀದರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಚಿರತೆ ದಾಳಿ ಮಾಡಿ ಒಂದು ಆಕಳು ಸಾವಿಗೀಡಾದ ಘಟನೆ ನಡೆದಿದೆ.ಹುಮನಾಬಾದ ತಾಲೂಕಿನ ಚಿಟಗುಪ್ಪಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಣಕುಣಿ ಗ್ರಾಮದಲ್ಲಿ ಹುಸೇನ್ ಸಾಬ್ ತಂದೆ ಶೇಕ ಅಹ್ಮದ್ ಸಾಬ ರವರ ಹೊಲದಲ್ಲಿ ಮಧ್ಯಾಹ್ನ 2:30 ಗಂಟೆಗೆ ಆಕಳ ಮೇಲೆ ದಾಳಿ ಮಾಡಿದೆ.ಆಕಳು ಸ್ಥಳದಲ್ಲಿ ಸಾವನ್ನಪ್ಪಿದ್ದು...
ಸುದ್ದಿಗಳು
ಅನಿಲ ಗಸ್ತಿ ಡಿಎಸ್‍ಎಸ್ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ನೇಮಕ
ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ಪಟ್ಟಣದ ಸಂಘಟನೆಯ ಕ್ರಿಯಾಶೀಲರಾದ ಅನಿಲ ಎನ್.ಗಸ್ತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಡಿಎಸ್‍ಎಸ್ ಮೂಡಲಗಿ ತಾಲೂಕಾ ಸಂಘಟನಾ ಸಂಚಾಲಕ ಶಾಬಪ್ಪ ಕ.ಸಣ್ಣಕ್ಕಿ ಹೇಳಿದರು.ಅವರು ಪಟ್ಟಣದ ಡಾ:ಅಂಬೇಡ್ಕರ ನಗರದಲ್ಲಿನ ಅಂಬೇಡ್ಕರ ಮಂದಿರದಲ್ಲಿ ಕ.ರಾ.ಡಿ.ಎಸ್.ಎಸ್ ಮೂಡಲಗಿ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರನ್ನಾಗಿ ನೇಮಕ ಮಾಡಿ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



