Monthly Archives: October, 2021

ಬೆಳಗಾವಿಯಲ್ಲಿ ಎನ್‍ಎಂಪಿ ಘಟಕ ಸ್ಥಾಪನೆಗೆ ಪ್ರಯತ್ನ : ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

4.50 ಕೋಟಿ ರೂ. ವೆಚ್ಚದ ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ ಬೆಳಗಾವ: ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ರೋಡಕ್ಟ್ (ಎನ್‍ಎಂಪಿ) ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶುಕ್ರವಾರದಂದು ಬೆಳಗಾವಿ ಹಾಲು ಒಕ್ಕೂಟದ ಆವರಣದಲ್ಲಿ ನಡೆದ ಹಾಲು ಉತ್ಪಾದಕರ...

ಪುನೀತ್ ರಾಜಕುಮಾರ ನಿಧನಕ್ಕೆ ಸಂಸದ ಕಡಾಡಿ ಸಂತಾಪ

ಮೂಡಲಗಿ: ಓರ್ವ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಉತ್ತಮ ನಟನನ್ನು ನಾಡು ಕಳೆದುಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು. ಶುಕ್ರವಾರ ಅ.29 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪುನೀತ ರಾಜಕುಮಾರ ಬಾಲಪ್ರತಿಭೆಯಾಗಿ ಗುರುತಿಸಿಕೊಂಡು ಕನ್ನಡ ನಾಡು, ನುಡಿಗಾಗಿ ತಮ್ಮನ್ನು...

ನಮ್ಮ ಪ್ರೀತಿಯ ‘ಅಪ್ಪು’ ಇನ್ನಿಲ್ಲ; ಚಿತ್ರರಂಗಕ್ಕೆ ಬರಸಿಡಿಲು

ಬೆಂಗಳೂರು - ಕನ್ನಡ ಚಿತ್ರ ರಸಿಕರ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕೇವಲ 46 ವರ್ಷ ವಯಸ್ಸಿನ ಪುಟಿಯುವ ಚೆಂಡಿನಂತಿದ್ದ ಪುನೀತ್ ಜಿಮ್ ಮಾಡುವಾಗಲೇ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದು ನಿಜಕ್ಕೂ ಆಘಾತಕಾರಿ. ಈ ಮೂಲಕ ಸ್ಯಾಂಡಲ್ ವುಡ್ ನ ದೊಡ್ಮನೆಯ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ ವರನಟ ರಾಜಕುಮಾರ...

ಪೊಲೀಸ್ ನೆರವು ಬೇಕಾದಾಗ ೧೧೨ ಕ್ಕೆ ಕರೆ ಮಾಡಿ – ಪ್ರಭು ಚವ್ಹಾಣ

ಬೀದರ - ಜನರಿಗೆ ಪೊಲೀಸ್ ನೆರವು ಬೇಕಾದಾಗ ೧೧೨ ಕ್ಕೆ ಕರೆ ಮಾಡಬೇಕು. ನಾನೂ ಕೂಡ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಉಸ್ತುವಾರಿ  ಸಚಿವ ಪ್ರಭು ಚವ್ಹಾಣ ಹೇಳಿದರು. ಔರಾದ್ ನಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡ ೧೧೨ ಜನಜಾಗೃತಿ ಕಾರ್ಯಕ್ರಮದ ಲ್ಲಿ ಅವರು ಮಾತನಾಡಿದರು. ಜನರು ಹಾಗೂ ಸರ್ಕಾರ ಪೊಲೀಸರ ಮೇಲೆ...

ಕವನ: ದಿಟ್ಟ ಮಾತೆಗೆ ನುಡಿ ನಮನ

ದಿಟ್ಟ ಮಾತೆಗೆ ನುಡಿ ನಮನ ಕಮಲಾಬಾಯಿ ಚಟ್ಟೋಪಾಧ್ಯಾಯ ಎಂದೂ ಮರೆಯದ ಶ್ರೇಷ್ಠ ಧ್ಯೇಯ ಸ್ವಾತಂತ್ರ್ಯದ ಆ ಚಳವಳಿಯಲ್ಲಿ ಭಾಗವಹಿಸಿದವರು ನಿರಂತರ ಸಕ್ರಿಯ ಪತಿ ಜೊತೆ ಉಪ್ಪಿನ ಸತ್ಯಾಗ್ರಹ ಮೂಲೆ ಗುಂಪಾಗದೆ ಮುನ್ನುಗ್ಗುತ ಯುದ್ದ ನಿರಾಶ್ರಿತರ ಪುನರ್ವಸತಿಗೆ ಶ್ರಮಿಸಿದ ದಿಟ್ಟೆ ಹೆಮ್ಮೆಯು ನಮಗೆ ಕರಕುಶಲ ಕರ್ಮಿಗಳ ಸಹಾಯಕೆ ನಿಂತು ಸಂಘ ಸಂಸ್ಥೆಗಳ ಹುಟ್ಟು ಹಾಕಿದರಂದು ಸಂಗೀತ ನಾಟಕ ಅಕಾಡೆಮಿಗಳ ತೆರೆದು ಅಧ್ಯಕ್ಷರಾದ ಹೆಗ್ಗಳಿಕೆ ಪಡೆದಿದ್ದರು ಅಂದು ಕನ್ನಡದ ಮೊದಲ ಚಲನ ಚಿತ್ರ ನಾಯಕಿ ಮೃಚ್ಛಕಟಿಕ ಈ...

ಕರಾಳ ದಿನ ಆಚರಣೆ; ಎರಡೂ ರಾಜ್ಯಗಳಿಗೆ ಅವಮಾನ

ಇನ್ನೇನು ನವೆಂಬರ್ ಒಂದು ಬರಲಿದೆ. ಕರ್ನಾಟಕದಲ್ಲಿ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸಲು ಸಂಭ್ರಮದಿಂದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರೆ ಅತ್ತ ಬೆಳಗಾವಿ ನಮ್ಮದೆಂದು ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ನ.೧ ರಂದು ಕರಾಳ ದಿನ ಆಚರಿಸುತ್ತದೆ. ಹಲವು ವರ್ಷಗಳಿಂದ ಇಂಥ ಒಂದು ಆಭಾಸವನ್ನು ಎಮ್ಈಎಸ್ ಮಾಡುತ್ತ ಬಂದಿದ್ದು ಈ ವರ್ಷ ಅದು ಕನ್ನಡಿಗರನ್ನು ಕೆರಳಿಸಿದೆ. ಅದರಲ್ಲೂ ಇತ್ತೀಚೆಗೆ...

ಹೈಕು

ಹೈಕು ಪತ್ರ ಹರಿತ್ತು ಸೊಗಸಾದ ಸಂಪತ್ತು ಹಚ್ಚ ಹಸಿರು * ಬೇವಿನ ಮರ ಬಿಸಿಲಿನ ಪ್ರತಾಪ ಬಿಡಾರ ತಂಪು * ಕವಿ ಸಮಯ ಪದಗಳ ಲಾಲಿತ್ಶ ಹೃದ್ಶಾನವನ * ಮರ ಹೆಮ್ಮರ ಕೊಡಲಿಯಿಂದ ಪೆಟ್ಟು ನಿರ್ಜೀವ ನೋಟ * ಬೆಳ್ಳಕ್ಕಿ ಸಾಲು ಸಾರೋಟು ಅಂದ ಚಂದ ಹೊಟ್ಟೆ ತುಂಬಲು * ನಮ್ಮದೇ ಬಿಂಬ ಕನ್ನಡಿ ಪ್ರತಿಬಿಂಬ ಸತ್ಶ ದರ್ಶನ * ಆಸೆ ನೂರೆಂಟು ಮಟಮಟ ಮಧ್ಮಾನ್ಹ ಬಿಸುಲ್ಗುದುರೆ * ಜೇನಿನ ಹನಿ ಹೂವಿನ ಮಕರಂದ ಭೃಂಗ ಜೇಂಕಾರ * ಶಿವಶಂಕರ ಹಿಮಾಲಯˌ ಶಿಖರ ಓಂಕಾರ ನಾದ * ಕೈಲಾಸನಾಥ ಜಡೆ ಶಂಕರಲಿಂಗ ಗಂಗೆ ಉದ್ಭವ * ತೋಂ ತೋಂ ತನನ ನಾಕುತಂತಿಯ ಲೀಲೆ ಜ್ಞಾನದೆತ್ತರ ಅಮರ್ಜಾ ಅಮರೇಗೌಡ ಪಾಟೀಲ ಬುತಿ ಬಸವೇಶ್ವರ ನಗರ, ಕುಷ್ಟಗಿ

ವಿದ್ಯಾ ರೆಡ್ಡಿಗೆ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ

ಗೋಕಾವಿಯ ಯುವ ಸಾಹಿತಿ ವಿದ್ಯಾ ರೆಡ್ಡಿ ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ಬೆಳಗಾವಿಯ ಸಪ್ತ ಸ್ವರ ಸಂಗೀತ ಕಲಾ ಬಳಗವು ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಕ್ಟೋಬರ್ 31 ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು, ಬೈಲಹೊಂಗಲ ಆರಾಧ್ಯಮಠದ ವೇದಮೂರ್ತಿ ಡಾ....

ಅಪ್ಪನ ಸ್ಮರಣೆ ಪ್ರತಿಷ್ಠಾನ ಉದ್ಘಾಟನೆ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಬೆಳಗಾವಿ- ನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಸದಾಶಿವ ನಗರದ ರಡ್ಡಿ ಭವನದ ಸಭಾಂಗಣದಲ್ಲಿ ಶನಿವಾರ ದಿ 30ರಂದು ಮುಂಜಾನೆ 10 ಗಂಟೆಗೆ ವಿಶ್ವ ಶೈಕ್ಷಣಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಕಾಯ೯ಮಾಡಿರುವ ಸಾಧಕರಿಗೆ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರಕೂಟ ಸಾಹಿತ್ಯ ಪ್ರತಿಷ್ಠಾನ ಹಾಗೂ ಅರಸು...

ಕಬ್ಬಿನ ಟ್ರ್ಯಾಕ್ಟರ್ ಹಾವಳಿ ತಪ್ಪಿಸಲು ಮನವಿ

ಮೂಡಲಗಿ - ಟ್ರ್ಯಾಕ್ಟರ್ ಗಳಲ್ಲಿ ಕಬ್ಬು ತುಂಬಿಕೊಂಡು ಜೋರಾಗಿ ಟೇಪ್ ಹಚ್ಚಿಕೊಂಡು ಹೋಗುತ್ತಿರುವ ಡ್ರೈವರ್ ಗಳಿಂದಾಗಿ ದಾರಹೋಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಣಾಪಾಯ ಆಗುವ ಸಂಭವವಿದ್ದು ಅದನ್ನು ತಪ್ಪಿಸಲು ಟ್ರ್ಯಾಕ್ಟರ್ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ತಾಲೂಕಿನ ಗುಜನಟ್ಟಿ ಗ್ರಾಮದ ಲಕ್ಷ್ಮಣ ರಾಮಪ್ಪ ಬಂಡ್ರೊಳ್ಳಿ ಹಾಗೂ ಇನ್ನೂ ಕೆಲವು...
- Advertisement -spot_img

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -spot_img
close
error: Content is protected !!
Join WhatsApp Group