ಬೀದರ: ಹೋಳಿ ಹಬ್ಬದ ನಿಮಿತ್ತ ಮದ್ಯ ನಿಷೇಧ ಮಾಡಿದ್ದರೂ ಹಬ್ಬದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ರೂ.೪.೬೮ ಲಕ್ಷ ಮೌಲ್ಯದ ಮದ್ಯವನ್ನು ಬೀದರ್ ಪೋಲಿಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ೪.೬೮ ಲಕ್ಷ ರೂ. ಮೌಲ್ಯದ ಮದ್ಯವನ್ನು ರೌಡಿ ನಿಗ್ರಹ ದಳದ ತಂಡ ಜಪ್ತಿ ಮಾಡಿದೆ.
ಜಿಲ್ಲಾ ವರಿಷ್ಠ ಪೊಲೀಸ...
ಸಿಂದಗಿ: ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆ ಮಾ. 9 ರಿಂದ 29 ರ ವರೆಗೆ ನಡೆಯಲಿದ್ದು ಸತತ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿ ಮಕ್ಕಳ ಗುಣಮಟ್ಟವನ್ನು ಹೆಚ್ಚಿಸಿದ್ದೀರಿ ಅದು ಅನಾವರಣಗೊಳ್ಳುವ ಹಂತಕ್ಕೆ ತಲುಪಿಸಿದ್ದೀರಿ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರಿಪೂರ್ಣವಾಗಿ ಪರೀಕ್ಷೆಗಳನ್ನು ಬರೆಯಬೇಕು ನಕಲು ಮುಕ್ತ ಪರೀಕ್ಷೆಗಳು ನಡೆಯಬೇಕು ಎಂದು...
ಸವದತ್ತಿ: ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಓದು ಬಹುಮುಖ್ಯವಾಗಿದೆ. ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳಿಗೆ ಮತ್ತು ಹೆತ್ತವರಿಗೆ ಕೀರ್ತಿ ತರುವಂತಹ ಕಾರ್ಯಮಾಡಿರೆಂದು ಪ್ರಧಾನ ಗುರುಗಳಾದ ಎಸ್.ಬಿ.ಜಂಬಗಿ ಹೇಳಿದರು.
ಮದ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಶಿಕ್ಷಕ ಜಿ.ಎ.ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ರಂಗಪೂರ...
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ರವಿವಾರದಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.
ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಅಧಿಕಾರಿಗಳು ಮತ್ತು ಮಂಜುಳಾ ಹಿರೇಮಠ ಅವರು ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಮಹಾದೇವ ಮದಬಾಂವಿ, ರಾಮಣ್ಣ ಹಿರೇಮಠ, ಹಡಗಿನಾಳ, ಶಂಕರ ಬೆಳಕೂಡ ದುಂಡಯ್ಯಾ , ಅಪ್ಪಾಸಾಬ ಮಳವಾಡ, ಮಂಜುಳಾ ಹಿರೇಮಠ, ಬಸವರಾಜ ಕರಗಾಂವಿಮಠ,...
ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಕನ್ನಡ ಸಂಘದ ವತಿಯಿಂದ ಮಾರ್ಚ 6 ರಂದು ಸೋಮವಾರ ಮಧ್ಯಾಹ್ನ 3.30 ಗಂಟೆಗೆ ಉಪನ್ಯಾಸ ಹಾಗೂ ಡಾ.ಎಫ್.ಡಿ.ಗಡ್ಡಿಗೌಡರ ಅವರ ದಾಸರ ದಾರಿಯಲ್ಲಿ ಕೃತಿ ಲೋಕಾರ್ಪಣೆ ಜರುಗಲಿದೆ.
ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮೋಹನ...
ಮೂಡಲಗಿ: ಗ್ರಾಮೀಣ ಭಾಗದ ಬಡವರಿಗೆ, ರೈತರಿಗೆ ಕೂಲಿಕರ್ಮಿಗಳಿಗೆ, ಮಹಿಳೆಯರು ಮಕ್ಕಳಿಗೆ ದುಡ್ಡು ಕೊಟ್ಟು ಆರೋಗ್ಯವನ್ನು ತಪಾಸಿಸಿಕೊಂಡು ಚಿಕಿತ್ಸೆ ಪಡೆಯುವುದು ತುಂಬಾ ಕಷ್ಟದ ಕೆಲಸ. ಬಡವರ ರೈತರ ಮಹಿಳೆಯರ ಮಕ್ಕಳ ಅನುಕೂಲಕ್ಕಾಗಿ ಕೆಎಲ್‍ಇ ಯವರು ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಕೌಜಲಗಿಯಲ್ಲಿ ಹಮ್ಮಿಕೊಂಡಿದ್ದು, ಈ ಭಾಗದ ಜನರಿಗೆ ಉಚಿತ ಆರೋಗ್ಯ ಚಿಕಿತ್ಸೆ ದೊರೆಯಲು ಅನುಕೂಲವಾಗುತ್ತದೆ ಎಂದು...
ಬದ್ಧ ವೈರಿಗಳಂತಿದ್ದ ನಾಯಕರು ಒಂದಾದರು
ಬೀದರ: ಬಯಲು ಸೀಮೆಯ ಸುಡು ಬಿಸಿಲಿನ ಧಗೆಯಲ್ಲಿ ಬೆವರಿನಲ್ಲಿ ಬೆಂದು ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು. ಹಲವು ವರ್ಷಗಳಿಂದ ದುಷ್ಮನ್ ಗಳಂತೆ ಜಗಳವಾಡ್ತಿದ್ದ ಖೂಬಾ-ಚವ್ಹಾಣ ದೋಸ್ತಿ, ಘಟಾನುಘಟಿ ನಾಯಕರ ರೋಡ ಶೋ. ಇದು ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿಯ ಶಕ್ತಿ ಪ್ರದರ್ಶನದ ಕಂಪ್ಲೀಟ್ ಸ್ಟೋರಿ.
ಎತ್ತ...
ಮೂಡಲಗಿ - ಹಬ್ಬಗಳು ಯಾರಿಗೂ ತೊಂದರೆ ಕೊಡುವಂತೆ ಇರಬಾರದು. ಹಾಗೆ ಹೋಳಿ ಹಬ್ಬವನ್ನು ಎಲ್ಲರೊಂದಿಗೆ ಶಾಂತಿ ಮತ್ತು ಸೌಹರ್ದತೆಯಿಂದ, ಸಂತೋಷದಿಂದ ಆಚರಿಸಿ ಎಂದು ಮೂಡಲಗಿ ಪಿಎಸ್ಐ ಸೋಮೇಶ ಗೆಜ್ಜಿ ಹೇಳಿದರು.
ಹೋಳಿ ಹಬ್ಬದ ನಿಮಿತ್ತ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಯಾರ ಕಡೆಯಿಂದಲೂ ಒತ್ತಾಯದಿಂದ ಹಣ ವಸೂಲಿ ಮಾಡಬಾರದು, ಪರೀಕ್ಷೆಗೆ...
"ಅಂಬಿಕಾತನಯದತ್ತ" ಎಂದೂ ಕರೆಯಲ್ಪಡುವ ದ ರಾ ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ. ಅವರ ಕೃತಿಗಳು ಸಾಮಾಜಿಕ ನ್ಯಾಯ, ಆಧ್ಯಾತ್ಮಿಕತೆ ಮತ್ತು ಮಾನವತಾವಾದದ ವಿಶಿಷ್ಟ ಮಿಶ್ರಣಕ್ಕಾಗಿ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿವೆ. ಕನ್ನಡ ಸಾಹಿತ್ಯಕ್ಕೆ ಬೇಂದ್ರೆಯವರ ಕೊಡುಗೆಗಳು ಭಾಷೆಯ ಸಾಹಿತ್ಯಿಕ ಭೂದೃಶ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ, ಅವರನ್ನು ಕನ್ನಡ...
ಬೆಳಗಾವಿ: ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ, ಜ್ಞಾನಾರ್ಜನೆ ಮಾಡಿಕೊಂಡು, ಉತ್ತಮ ಪ್ರಜೆಗಳಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿಯ ಉಪನಿರ್ದೇಶಕರಾದ ರಾಮಯ್ಯ ಅವರು ಹೇಳಿದರು.
ಅವರು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಮತ್ತು ಬೀ. ಕೆ ಕಾಲೇಜಿನ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಕೈಗೊಂಡ ಯೋಜನಾ ಕಾರ್ಯದ ಬಗ್ಗೆ ಪ್ರಮಾಣ...
ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...