Monthly Archives: August, 2024
ಸುದ್ದಿಗಳು
ಉಪ್ಪಾರ ಸಮಾಜಕ್ಕೆ ಮೀಸಲಾತಿ ಕೊಡಿಸಲು ಕಟಿಬದ್ಧ – ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಕಳೆದ ಹಲವಾರು ವರ್ಷಗಳಿಂದ ಭಗೀರಥ ಉಪ್ಪಾರ ಸಮಾಜವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಈ ಸಮಾಜಕ್ಕೆ ಸಿಗಬೇಕಿರುವ ಸರ್ಕಾರದ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೇ ನಾವು ಕೂಡಾ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕವಾದ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರದಂದು...
ಸುದ್ದಿಗಳು
ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಸಂಗಮೇಶ ಖನ್ನಿನಾಯ್ಕರ ಆಯ್ಕೆ
ಬೆಳಗಾವಿ ದಿ - ದಿ 3-8-2024 ರ ಶನಿವಾರದಂದು ಶಿಕ್ಷಕರ ಸಹಕಾರ ಸೊಸಾಯಿಟಿ ಧಾರವಾಡದಲ್ಲಿ ಜರುಗಿದ "ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು" ಇದರ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅವಿರೋಧವಾಗಿ ಪರಿಷತ್ತಿಗೆ ನೂತನ ರಾಜ್ಯಾಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಕ್ಷಕರು, ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಸಂಗಮೇಶ್ವರ ಖನ್ನಿನಾಯ್ಕರ (ಬೆಳಗಾವಿ...
ಸುದ್ದಿಗಳು
ಲಂಗು ಲಗಾಮಿಲ್ಲದ ಜೀವನ ನಡೆಸಿದರೆ ಅನರ್ಥಕ್ಕೆ ತುತ್ತಾಗುತ್ತದೆ.
ಲಂಗು ಲಗಾಮಿಲ್ಲದ ಜೀವನವನ್ನು ನಡೆಸಿದರೆ ಅನರ್ಥಕ್ಕೆ ತುತ್ತಾಗುತ್ತದೆ ಎಂಬುದನ್ನು ಮಾರ್ಮಿಕವಾಗಿ ಪ್ರೊ.ಹೊನ್ನಶೆಟ್ಟಿಹಳ್ಳಿ ಅವರ ಸುರತಸ್ವೈರ ಕಾದಂಬರಿ ತಿಳಿಸುತ್ತದೆ ಎಂದು ಪ್ರಾಧ್ಯಾಪರ ರಂಗೇಗೌಡ ಡಿ.ಬಿ. ತಿಳಿಸಿದರು.ಹಾಸನದ ಮನೆ ಮನೆ ಕವಿಗೋಷ್ಠಿ ವತಿಯಿಂದ ಸಾಹಿತಿ ಕಲಾವಿದ ಗ್ಯಾರಂಟಿ ರಾಮಣ್ಣ ಅವರ ಪ್ರಾಯೋಜನೆಯಲ್ಲಿ ನಡೆದ ೩೨೦ನೇ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿ ನಾಲ್ಕು ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ...
ಲೇಖನ
ಮಳೆ ನಿಂತರೂ ನೆನಪಿನ ಮಳೆ ಹನಿಗಳು ನಿಲ್ಲುವುದಿಲ್ಲ !
ನಾವೆಲ್ಲ ಆಗಿನ್ನೂ ಪುಟ್ಟ ಪೇಟಿಕೋಟು ಹಾಕಿಕೊಂಡು ಊರೆಲ್ಲ ಸುತ್ತುತ್ತಿದ್ದ ಸಮಯ. ಪುಟ್ಟ ಪುಟಾಣಿಗಳ ದಂಡು ತೊದಲ್ನುಡಿಗಳನ್ನಾಡುತ್ತ, ದೊಡ್ಡ ಆಲದ ಮರದ ಕೆಳಗೆ ದೊಡ್ಡವರಂತೆ ಅಡುಗೆ ಮಾಡುವ ಆಟದಲ್ಲಿ ತಲ್ಲೀನರಾಗಿರುತ್ತಿದ್ದೆವು. ಬಯಲು ಸೀಮೆ ನಮ್ಮದು ಹೀಗಾಗಿ ನೆತ್ತಿ ಸುಡುವ ಸೂರ್ಯನ ಪರಿಚಯ ಜಾಸ್ತಿ.ಮಳೆ ರಾಯನ ಆರ್ಭಟ ಕಾಣಿಸಿದರೆ ನಮಗೆಲ್ಲ ಹಬ್ಬವೋ ಹಬ್ಬ. ಆಟದಲ್ಲಿ ತಲ್ಲೀನರಾಗಿರುತ್ತಿದ್ದ ನಾವು...
ಲೇಖನ
ಶ್ರಾವಣ ಮಾಸದ ಚಿಂತನೆ ; ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ
ಮರುಳಾಗಿ ತಿರುಗಿದ.
ಈ ಆರು ಭಕ್ತಿಪಥಕ್ಕೆ ಸಲ್ಲವು ಕೇಳಿರಣ್ಣಾ
ಕೂಡಲ ಚೆನ್ನಸಂಗನ ಶರಣರು, ಆರ ಮೀರಿ ಬೇರೆನಿಂದನು.೧೨ನೇ ಶತಮಾನದಲ್ಲಿ ಶೈವರು, ಪಾಶುಪತರು, ಕಾಳಾಮುಖರು, ಮಹಾವ್ರತಿಗಳು, ಸನ್ಯಾಸಿ-ಜೋಗಿಗಳು ಧಾರ್ಮಿಕ ವಲಯದಲ್ಲಿ ಒಂದು ರೀತಿಯ ಗೊಂದಲವನ್ನುಂಟು ಮಾಡಿದ್ದರು. ಇವರನ್ನು ಚನ್ನಬಸವಣ್ಣನವರು ಟೀಕಿಸುತ್ತಾರೆ. ಇವರು ಯಾರೂ ಭಕ್ತಿಪಥಕ್ಕೆ ಸಲ್ಲರು ಎನ್ನುತ್ತಾರೆ. ಶೈವಧರ್ಮವು ಅತ್ಯಂತ ಪ್ರಾಚೀನ ಧರ್ಮ. ವೈದಿಕ ಧರ್ಮಕ್ಕಿಂತ ಮೊದಲು...
ಸುದ್ದಿಗಳು
ಮಹಾಮಾನವತಾವಾದಿ ನಾಲ್ವಡಿ ಕೃಷ್ಣರಾಜ ಒಡೆಯರ್
ಶ್ರಾವಣ ಮಾಸದ ಗೂಗಲ್ ಮೀಟ್ ನಲ್ಲಿ ಮಹಾರಾಜರ ಸ್ಮರಣೆಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ವಚನ ಅಧ್ಯಯನ ವೇದಿಕೆ ಪುಣೆ ಇದರ ಅಡಿಯಲ್ಲಿ ಡಾ. ಶಶಿಕಾಂತ ಪಟ್ಟಣ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರಾವಣ ಮಾಸದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಕ್ಷ ಆಡಳಿತದ ಕುರಿತು ಚಿಂತನೆ ನಡೆಯಿತು.ಗೂಗಲ್ ಮೀಟ್...
ಕವನ
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಬರಿಯುಸುಕು ಬರಿಬಿಸಿಲು ನೀರಿಲ್ಲ ನೆರಳಿಲ್ಲ
ಹುರುಳಿಲ್ಲ ಸಂಸಾರ ಮರಳುಗಾಡು
ಮೃಗಜಲವ ಬೆನ್ನತ್ತಿ ಹೋಗದಿರು, ನೀ ಹುಡುಕು
ಶಾಂತಿಯೋಯಾಸಿಸ್ಸು - ಎಮ್ಮೆತಮ್ಮಶಬ್ಧಾರ್ಥ
ಮೃಗಜಲ - ಬಿಸಿಲುಗುದುರೆ,ಮರಳುಗಾಡಿನಲ್ಲಿ ನೀರಿದೆ ಎಂದು ಬಿಸಿಲಿನಲ್ಲಿ ಕಾಣಿಸುತ್ತದೆ. ಆದರೆ ಅದು ಭ್ರಮೆ.
ಓಯಾಸಿಸ್(Oasis) - ಮರುಳುಗಾಡಿನಲ್ಲಿ ನೀರಿರುವ ಹಸುರಿನ ತಾಣ ಅಥವಾ ತೋಟ.ತಾತ್ಪರ್ಯ
ಸಂಸಾರವೆಂಬುವುದು ಮರಳು,ಬಿಸಿಲು ತುಂಬಿದ ಮತ್ತು
ನೀರು ನೆರಳುಗಳಿಲ್ಲದ ಮರುಭೂಮಿ. ಅಲ್ಲಿ ದೂರದಲ್ಲಿ
ಬಿಸಿಲುಗುದುರೆ ತೋರಿ ನೀರಿದೆ ಎಂದು ಭ್ರಮೆ...
ಸುದ್ದಿಗಳು
ವಾರದ ಸತ್ಸಂಗ ಮತ್ತು ಉಚಿತ ಅಕ್ಯುಪ್ರೆಶರ್ ಮತ್ತು ಮ್ಯಾಗ್ನೆಟಿಕ್ ಚಿಕಿತ್ಸಾ ಶಿಬಿರದ ಉದ್ಘಾಟನೆ
ರವಿವಾರ ದಿ. 4 ರಂದು ಬೆಳಗಾವಿಯ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ತುಮಕೂರಿನ ಕರ್ನಾಟಕ ಆಯಸ್ಕಾಂತ ಆರೋಗ್ಯ ಸೇವಾ ಸಂಸ್ಥೆ ಇವರ ಸಹಯೋಗದಲ್ಲಿ 20 ದಿನಗಳ ಉಚಿತ ಅಕ್ಯುಪ್ರೆಶರ್ ಮ್ಯಾಗ್ನೆಟಿಕ್ ಚಿಕಿತ್ಸಾ ಶಿಬಿರ ಉದ್ಘಾಟಿಸಲಾಯಿತು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶಿಬಿರ ಉದ್ಘಾಟಿಸಿ ಮಾತನಾಡಿದ ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಈಗಿನ ಆಧುನಿಕ...
ಸುದ್ದಿಗಳು
ಲಯನ್ಸ್ ಕ್ಲಬ್‌ದಿಂದ ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಶಿಬಿರ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಪಟಗುಂದಿಯಲ್ಲಿರುವ ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದರು.೧೫೦ಕ್ಕೂ ಅಧಿಕ ಸಂಖ್ಯೆಯ ಸಂತ್ರಸ್ತರ ಆರೋಗ್ಯ ತಪಾಸಣೆಯನ್ನು ಮಾಡಿ ಅವರಿಗೆ ಉಚಿತ ಮಾತ್ರೆ, ಔಷಧಿಗಳನ್ನು ಮತ್ತು ಬಿಸ್ಕಟ್ ವಿತರಿಸಲಾಯಿತು.ವೈದ್ಯರಾದ ಡಾ. ರಾಜೇಂದ್ರ ಗಿರಡ್ಡಿ, ಡಾ. ಎಸ್.ಎಸ್. ಪಾಟೀಲ, ಡಾ. ಮಹೇಶ ಮುಳವಾಡ, ಡಾ. ವಿಶಾಲ...
ಸಂಪಾದಕೀಯ
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೊಂದು ಬಹಿರಂಗ ಪತ್ರ
ಹಣಕಾಸು ಸಚಿವರು, ಅಹಿಂದ ಎಂಬ ಬಡ ವರ್ಗದ ಅಧಿಕೃತ ವಕ್ತಾರರೆಂದು ತಮ್ಮನ್ನೇ ತಾವು ಕರೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಿಮಗೆ ನಮಸ್ಕಾರಗಳು. ತಾವೇನೋ ಅಧಿಕಾರದ ಗದ್ದುಗೆ ಹಿಡಿಯಲೆಂದು ಬಡವರ ಉದ್ಧಾರದ ಘೋಷಣೆಗಳನ್ನು ಮಾಡಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ, ಉಚಿತ ಕರೆಂಟ್, ಉಚಿತವಾದ ಬಸ್, ಹತ್ತು ಕೆಜಿ ಅಂತ ಹೇಳಿ ಐದು...
Latest News
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...



