Monthly Archives: November, 2024
ಸುದ್ದಿಗಳು
ಕಲಿಕೆ ನಿರಂತರ, ಸತತ ಓದು ಯಶಸ್ಸಿನ ಮೂಲ ಮಂತ್ರ – ಸರಜೂ ಕಾಟ್ಕರ
ರಾಷ್ಟೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಬೆಳಗಾವಿ : ಓದುವ ಹವ್ಯಾಸ ಉಳ್ಳವರು ಯಾವಾಗಲೂ ಕಲಿಯುತ್ತಿರುತ್ತಾರೆ,ಪ್ರಸ್ತುತ ಸಾಹಿತ್ಯ ಮತ್ತು ಮುಂಚಿನದಕ್ಕೂ ವ್ಯತ್ಯಾಸ ಇದೆ ಎಂದು ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ್ ಅವರು ಅಭಿಪ್ರಾಯ ಪಟ್ಟರು.ನಗರದ ಕೇಂದ್ರ ಗ್ರಂಥಾಲಯದಲ್ಲಿ ದಿ.14 ರಂದು ನಡೆದ ರಾಷ್ಟೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದುವುದೇ...
ಸುದ್ದಿಗಳು
ಕಾಂಗ್ರೆಸ್ ಶಾಸಕರಾರೂ ಮಾರಾಟಕ್ಕಿಲ್ಲ – ಶಾಸಕ ಸವದಿ
ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ ನಾವೆಲ್ಲರೂ ಸ್ವಾಭಿಮಾನಿಗಳು : ಶಾಸಕ ಲಕ್ಷ್ಮಣ ಸವದಿಕಾಗವಾಡ : ನಾವು ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಸ್ವಾಭಿಮಾನಿಗಳಿದ್ದೇವೆ ಕಾಂಗ್ರೆಸ್ ಪಕ್ಷದ ಶಾಸಕರು ಮಾರಾಟಕ್ಕಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.ಪಟ್ಟಣದಲ್ಲಿ ದಿ. ೧೫ ರಂದು ವಕೀಲರು ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ, ಅವರ...
ಸುದ್ದಿಗಳು
ಚಿತ್ತರಗಿಯಲ್ಲಿ ಸಂಭ್ರಮದಿಂದ ಜರುಗಿದ ಅಡ್ಡ ಪಲ್ಲಕ್ಕಿ ಉತ್ಸವ
ತಿಮ್ಮಾಪುರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯ ಮಹಾಂತೇಶ್ವರ ಶಿವಯೋಗಿಗಳವರ ಜಾತ್ರೆಯ ಅಂಗವಾಗಿ ದಿ. ೧೫ ರಂದು ಶುಕ್ರವಾರ ಗೌರಿ ಹುಣ್ಣಿಮೆಯಂದು ಅಡ್ಡ ಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಡಗರದಿಂದ ಜರುಗಿತುಅಂದು ಮುಂಜಾನೆ 12ಕ್ಕೆ ಶ್ರೀಮಠ ದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀಮಠ...
ಸುದ್ದಿಗಳು
ಧರ್ಮಸ್ಥಳ ಸಂಘದ ತಾಲೂಕಾ ಮಟ್ಟದ ಪದಾಧಿಕಾರಿಗಳ ಸಮಾವೇಶ
ಮೂಡಲಗಿ: ಮೂಡಲಗಿ ನಗರದ ಅತ್ತಾರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ತಾಲೂಕಾ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಸಂಘದ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.ತಾಲೂಕು ಯೋಜನಾಧಿಕಾರಿಗಳಾದ ರಾಜು ನಾಯಕ ರವರು ಸರ್ವರಿಗೂ ಸ್ವಾಗತ ಕೋರಿ, ಕಾರ್ಯಕ್ರಮದ ಪ್ರಾಸ್ತಾವಿಕತೆ ಹಾಗೂ ಮೂಡಲಗಿ ತಾಲೂಕಿನ...
ಸುದ್ದಿಗಳು
ಮಾದಕವಸ್ತು ಮುಕ್ತ ಸಮಾಜ ನಿರ್ಮಾಣವಾಗಬೇಕು – ಪಿಎಸ್ಆಯ್ ಎಚ್.ಕೆ. ನೇರಳೆ
ಮೂಡಲಗಿ - ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು ಎಂದು ಘಟಪ್ರಭಾ ಪೋಲಿಸ್ ಠಾಣೆಯ ಪಿಎಸ್ಆಯ್...
ಲೇಖನ
ಭೀಮಪ್ಪ ಗಡಾದ ಹೇಳಿದ ಕತೆ ; ಅಧಿಕಾರಕ್ಕಾಗಿ ಬೆಳೆಸಿದವರು ಮೂಲೆಗುಂಪಾಗುತ್ತಾರೆ !
ರಾಜಕಾರಣವೆಂಬುದು ಹೊಲಸಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದರಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವವರ ಸಂಖ್ಯೆಯೇ ಜಾಸ್ತಿ ಇರುತ್ತದೆ. ನೈತಿಕತೆ ಎಂಬುದು ರಾಜಕಾರಣದಿಂದ ಮಾರು ದೂರ. ಆತ್ಮಾವಲೋಕನ ಎಂಬುದೂ ಕೂಡ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ. ರಾಜಕಾರಣ ಮಾಡುವವರು ಆತ್ಮಾವಲೋಕನದಂಥ ಅಪಾಯಕಾರಿ ಕೆಲಸಕ್ಕೆ ಕೈ ಹಾಕಬಾರದು. ಬೇರೆಯವರಿಗೆ ಮಾತ್ರ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಉಪದೇಶ ನೀಡಬಹುದು ! ಇತ್ತೀಚೆಗೆ...
ಕವನ
ಕವನ : ಹೃದಯದ ಮಾತು ಕೇಳಿ
ಹೃದಯ ಮಾತು ಕೇಳಿಮಿಡಿವ ಹೃದಯ
ನಿಲ್ಲುವುದು ಗೊತ್ತಿಲ್ಲ
ದುಡಿವ ಜೀವ
ಮಣ್ಣಾಗುವುದು ತಿಳಿದಿಲ್ಲ.ಬಣ್ಣನೆಗೆ ನಿಲುಕದ ಜೀವ
ಬಣ್ಣದ ಮಾತಿಗೆ ಮರುಳಾಯಿತಲ್ಲ
ಒಮ್ಮೆ ಕಣ್ಣ ಬೆಳಕು
ಮಗದೊಮ್ಮೆ ಮಸುಕು.ಅದರ ಸಿಹಿ ಮಾತು
ಉದರ ಕಹಿ ಸಂಪತ್ತು
ತಿರುಗಣಿಯ ಬದುಕು
ಉಬ್ಬು ತಬ್ಬುಗಳಲಿ ಜೀಕು.ಆವೇಗದ ಸನ್ನೆ
ಮರೆತ ನನ್ನನ್ನೇ
ಕಲಿತು ಬಿಡಬೇಕು
ಅನುಭವಿಸುತ ನೂಕು.ಕೆರಳಿ ಕೆಂಡವೇಕೆ
ಬೆರಳೆಣಿಕೆಯ ಜೀವನಕೆ
ನೆರಳು ಬೆಳಕಿನ ಆಟಕೆ
ಕೊರಳು ಹಿಸುಕುವುದೇಕೆ.ತೆರಳುವುದು ನಿಶ್ಚಿತ
ನಂಬಿಕೆಯೇ ಭಗವಂತ
ನೆಮ್ಮದಿಯ ನಿಟ್ಟುಸಿರಾಗಲಿ
ಸಾಧನೆಯ ಪಥವಾಗಲಿ.ಸದ್ದಿಲ್ಲದೇ ಬಾನೆತ್ತರಕ್ಕೆ ಏರು
ಸುದ್ದಿ ಬಿತ್ತರವಾಗಲಿ
ಬಿದ್ದೆ ಎಂದು ಕುಗ್ಗದೇ
ಶೋಧನೆಯ...
ಸುದ್ದಿಗಳು
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
ಬೆಳಗಾವಿ - ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಷಾನ ವಿಭಾಗದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಆಚರಿಸಲಾಯಿತು.ಕಾರ‍್ಯಕ್ರಮದ ಅಂಗವಾಗಿ ದಿನಾಂಕ:೧೪/೧೧/೨೦೨೪ ರಂದು ಉಪ ನಿರ‍್ದೇಶಕರು,ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ. ರಾಮಯ್ಯ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪುಸ್ತಕ ಪ್ರದರ್ಶನ ಉದ್ಘಾಟಿಸುವ ಮೂಲಕ “Read...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಬಟ್ಟೆಯಲಿ ಬೆಟ್ಟವನು ಕಟ್ಟಿಡಲು ಸಾಧ್ಯವೇ ?
ಕಡಲ ತುಂಬಿಡಬಹುದೆ ಗಡಿಗೆಯಲ್ಲಿ ?
ಆಕಾಶವನು ಹಿಡಿದು ಬಂಧಿಸಿಡಲಾದೀತೆ ?
ದೇವನಿಗೆ ದೇಗುಲವೆ ? - ಎಮ್ಮೆತಮ್ಮಶಬ್ಧಾರ್ಥ
ದೇಗುಲ = ದೇವಾಲಯತಾತ್ಪರ್ಯ
ಕಲ್ಲುಗುಂಡುಗಳಿಂದ ಕೂಡಿದ ಬೆಟ್ಟಗುಡ್ಡಗಳನ್ನು ಒಂದು
ಬಟ್ಟೆಯಲ್ಲಿ ಕಟ್ಟಿಡಲಿಕ್ಕೆ ಸಾಧ್ಯವಾಗುವುದಿಲ್ಲ. ಅಷ್ಟು ದೊಡ್ಡದಾದ ಬಟ್ಟೆ ಸಿಕ್ಕುವುದಿಲ್ಲ. ಒಂದು ವೇಳೆ ಸಿಕ್ಕರು
ಬೆಟ್ಟವನ್ನು ಕಿತ್ತಿಟ್ಟು ಸುತ್ತಿಡಲಾಗುವುದಿಲ್ಲ. ಹಾಗೆ ಸದಾ
ಕಾಲ ತುಂಬಿ ತುಳುಕಾಡುವ ಸಮುದ್ರದ ಸಮಗ್ರ ನೀರನ್ನು
ಒಂದು ಮಣ್ಣಿನ...
ಸುದ್ದಿಗಳು
ಮಕ್ಕಳ ಹಕ್ಕು ರಕ್ಷಣೆಗಾಗಿ ಮಕ್ಕಳ ದಿನ ಆಚರಣೆ – ಕು. ಅಶ್ವಿನಿ ಗಡೇದ
ಸಿಂದಗಿ; ಭಾರತದಲ್ಲಿ ಪ್ರತಿವರ್ಷ ನವೆಂಬರ್ ೧೪ ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಮಕ್ಕಳ ದಿನಾಚರಣೆ ಮಾಡುವ ಮೂಲಕ ಅವರ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ ೧೪ ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ ಎಂದು...
Latest News
ಕವನ : ದೀಪಾವಳಿ
ದೀಪಾವಳಿ
ಸಾಲು ಸಾಲು
ದೀಪಗಳು
ಕಣ್ಣುಗಳು ಕೋರೈಸಲು
ಒಳಗಣ್ಣು ತೆರೆದು
ನೋಡಲು
ಜೀವನದ ಮರ್ಮ
ಕರ್ಮ ಧರ್ಮಗಳನು
ಅರಿಯಲು
ಸಾಲು ಸಾಲು
ದೀಪಗಳು
ಮೌಢ್ಯವ ಅಳಿಸಲು
ಜ್ಞಾನವ ಉಳಿಸಿ
ಬೆಳೆಸಲು
ಸಾಲು ಸಾಲು
ದೀಪಗಳು
ಮನೆಯನು ಬೆಳಗಲು
ಮನವನು ತೊಳೆಯಲು
ಸಾಲು ಸಾಲು
ದೀಪಗಳು
ನಮ್ಮ ನಿಮ್ಮ
ಎಲ್ಲರ ಮನೆ
ಹಾಗೂ ಮನವನು
ಬೆಳಗಲಿ
ಮಾನವೀಯತೆಯ
ಜ್ಯೋತಿ ಎಲ್ಲೆಡೆ
ಪಸರಿಸಲಿ
ಶುಭ ದೀಪಾವಳಿ 🌹ಡಾ....