ಎಲ್ಲದಕ್ಕೂ ಹೂಂ ಎನ್ನುವ ಸ್ವಭಾವ ಬಹಳ ಜನರಲ್ಲಿ ಬೇರೂರಿದೆ. ಹೀಗಾಗಿ ಅವರೆಲ್ಲ ಹೌದಪ್ಪಗಳಾಗಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ಹೂಂ ಎಂದು ಒತ್ತಡ ಆತಂಕವನ್ನು ಅನಾಯಾಸವಾಗಿ ತಾವೇ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಯಾವುದಕ್ಕೂ ಇಲ್ಲ ಎಂದು ಹೇಳಿ ರೂಢಿಯೇ ಇಲ್ಲ. ಇಲ್ಲ ಎಂದು ಹೇಳುವುದು ಅಗೌರವ ಎಂದೇ ಭಾವಿಸಿದ್ದೇವೆ. ನನಗೀಗ ತಾವು ಹೇಳಿದ ಕೆಲಸ ಮಾಡಲಾಗುವುದಿಲ್ಲ. ನಾನು...
ಧಾರವಾಡ. ಮಂಡ್ಯ ದಲ್ಲಿ ಜರುಗುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವ ಡಾ. ಗೋ ರು ಚನ್ನಬಸಪ್ಪ ಅವರನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಗೋರುಚ ಸಾಹಿತ್ಯ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ, ಎಲ್ಲರೂ ಮಾತೃಭಾಷೆಯನ್ನು ಗೌರವಿಸಬೇಕೆಂದು ತಿಳಿಸಿದರು.
ಡಾ. ಲಿಂಗರಾಜ ಅಂಗಡಿ,...
ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ನ.26 ರಂದು ಸಂವಿಧಾನ ದಿನ ಆಚರಣೆ ಮಾಡಲಾಯಿತು.ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಉಪನಿರ್ದೇಶಕರಾದ ರಾಮಯ್ಯ ಅವರ ಮಾರ್ಗದರ್ಶನದಲ್ಲಿ,ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕ ಓದುಗರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಪ್ರತಿ ವರ್ಷ ನವೆಂಬರ್ 26 ರಂದು ಭಾರತದ "ಸಂವಿಧಾನ...
ನಿನ್ನ ಮಡಿಲಲ್ಲಿ
ನಿನ್ನ ಮಡಿಲಲ್ಲಿ ಮಗುವಾಗುವಾಸೆ
ನೀನು ಲಾಲಿ ಹಾಡುವುದನು
ಕೇಳಿ ಮಲಗುವ ಆಸೆ
ಚಂದಿರನು ತೋರಿಸಿ ನಿನ್ನ ಕೈ
ತುತ್ತು ಉಣ್ಣುವ ಆಸೆ
ನಿನ್ನ ಮೇಲೆ ಕುಳಿತು ಅನೆ
ಅಂಬಾರಿ ಕೂಸುಮರಿ
ಎಂದು ಆಡುವ ಆಸೆ
ನಿನ್ನ ಅಕ್ಕರೆಯ ಮಾತು
ಕೇಳಲು ಚಂದ
ನಿನ್ನ ಹಾಡು ಕಿವಿಗಳಿಗೆ ಅಂದ
ನೀನು ಮುಡಿದಿರುವ ಮಲ್ಲಿಗೆ
ಎಲ್ಲೆಡೆ ಬೀರುವುದು ಕಂಪು
ಸಂಗೀತ ಸ್ವರಗಳ ಇಂಪು
ಅಪ್ಪಿ ಮುತ್ತು ಕೊಟ್ಟು
ಪ್ರೀತಿಯ ಕಂದಾ
ಎಂದು ಕರೆದಾಗ ನನಗೆ
ಸ್ವರ್ಗ ಸುಖ
ನಿನ್ನ ಸುಖ ದುಃಖವನ್ನು
ನಿವಾರಿಸುವ...
ಸಿಂದಗಿ; ಸ್ವತಂತ್ರ ಸಿಕ್ಕ ನಂತರ ನಮ್ಮ ಆಡಳಿತವನ್ನು ಹೇಗೆ ಮುನ್ನಡೆಸಬೇಕು ಇದಕ್ಕೊಂದು ಸಂವಿಧಾನ ರಚಿಸಲು ಒಂದು ಕರಡು ಸಮಿತಿ ಅದ್ಯಕ್ಷರಾಗಿ ಡಾ ಅಂಬೇಡ್ಕರರನ್ನು ನೇಮಕ ಮಾಡಿ ಹಲವಾರು ದೇಶಗಳ ಗ್ರಂಥಗಳನ್ನು ಅಧ್ಯಯನ ಮಾಡಿ ಸಂವಿಧಾನ ರಚಿಸಿ ಯಾವುದೇ ಒಂದು ಕಟ್ಟಕಡೆಯ ಮನುಷ್ಯನಿಂದ ಉಚ್ಚವಾದ ಮುನುಷ್ಯರವರೆಗೆ ಒಂದು ನ್ಯಾಯ ಸಮಾನತೆಯಿಂದ ಅಧಿಕಾರ ನೀಡಿದ್ದು ಒಂದು ಧರ್ಮ...
ಸಿಂದಗಿ; ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನವನ್ನು ಅರಿಯುವುದು ಅಗತ್ಯವಾಗಿದೆ ಎಂದು ಪಿ.ಯು.ಸಿ ಪ್ರಥಮ ವರ್ಷದ ವಿದ್ಯಾರ್ಥಿಯಾದ ಕುಮಾರ ಕಾಶಿನಾಥ ಬಳುಂಡಗಿ ಅಭಿಪ್ರಾಯಪಟ್ಟರು.
ಪಟ್ಟಣದ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನ ಕಾರ್ಯಕ್ರಮದ ಅಂಗವಾಗಿ ಸ್ನೇಹಿತರನ್ನುದ್ದೇಶಿಸಿ ಮಾತನಾಡುತ್ತಾ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದ್ದು, ದೇಶದ...
ದಾಸವಾಣಿ ಕರ್ನಾಟಕದ ವತಿಯಿಂದ ಚಾಮರಾಜಪೇಟೆ ಶ್ರೀಪಾದರಾಜ ಮಠದಲ್ಲಿ ವಿಜಯ ದಾಸರ ಆರಾಧನೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ದಾಸಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿದವರು ಮಾತನಾಡುತ್ತಾ, ಪರಿಶುದ್ಧತೆಗೆ ನೈತಿಕತೆಗೆ ಹೆಚ್ಚಿನ ಮಹತ್ವವನ್ನು ದಾಸರು ನೀಡಿದ್ದಾರೆ,ವ್ಯಕ್ತಿತ್ವದ ನಿರ್ಮಿತಿಯಲ್ಲಿ ಮೌಲ್ಯಗಳ ಪಾತ್ರವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಧರ್ಮ ತತ್ವ ಜ್ಞಾನಗಳು ಆಡಂಬರ ಡಾಂಭಿಕತೆಯ ಮುಸುಕಿನಲ್ಲಿ ಮರೆಯಾಗಿದ್ದವು, ಇವೆರಡಕ್ಕೂ...
ಬೀದರ - ಹಣಬಲ, ತೋಳ್ಬಲ, ಅಧಿಕಾರದ ಬಲದಿಂದ ಚುನಾವಣೆ ಗೆದ್ದಿರುವ ಕಾಂಗ್ರೆಸ್ ಪಕ್ಷದ ಯೋಗೇಶ್ವರಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ಚನ್ನಪಟ್ಟಣ ಜನ ಎರಡು ಬಾರಿ ಕುಮಾರಸ್ವಾಮಿ ಯವರನ್ನು ಗೆಲ್ಲಿಸಿದ್ದಾರೆ. ಈಗ ಆ ಯುವಕ ಸೋತ ಕೂಡಲೇ ಏನೇನೋ ಮಾತಾಡ್ತಾರೆ ಅವರಿಗೆ ಯಾವ ಯೋಗ್ಯತೆ ಇದೆ ಜೆಡಿಎಸ್ ಬಗ್ಗೆ ಮಾತನಾಡಲಿಕ್ಕೆ ಎಂದು ಜೆಡಿಎಸ್...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...