Monthly Archives: December, 2024
ಸುದ್ದಿಗಳು
ಫೆ. ೧೫/೧೬ ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ಚುಟುಕು ವಾಚನ ಸ್ಪರ್ಧೆ
ಬೆಳಗಾವಿ - ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಮತ್ತು ನಾಲ್ಕನೆಯ ಜಿಲ್ಲಾ ಸಮ್ಮೇಳನ 2025 ರ ಫೆಬ್ರುವರಿ ೧೫ ಮತ್ತು ೧೬ ರಂದು ಬೆಳಗಾವಿಯಲ್ಲಿ ನಡೆಯಲಿದ್ದು , ಬೆಳ್ಳಿಹಬ್ಬದ ಅಂಗವಾಗಿ ರಾಜ್ಯ ಮಟ್ಟದ ಚುಟುಕು ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಮತ್ತು ಪ್ರಾತಿನಿಧಿಕ ಚುಟುಕು ಕಾವ್ಯ ಸಂಕಲನವನ್ನೂ ಹೊರತರಲಾಗುತ್ತಿದೆ ಎಂದು...
Uncategorized
ಸಕ್ಕರೆಯ ಅಕ್ಕರೆಯ ಭವ್ಯ ಊರು ಮಂಡ್ಯ – ಮನಸ್ಸು ಮಲ್ಲಿಗೆ ನವಿರು
ಸಕ್ಕರೆ ಸೀಮೆ ಎಂದು ಹೆಸರಾದ ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇಲ್ಲಿಯ ಕವಿ ಮಿತ್ರ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿಯವರ ೩ನೇ ಕವನ ಸಂಕಲನ ಮನಸು ಮಲ್ಲಿಗೆ ನವಿರು ಈಗ ಕೈಗೆ ಸಿಕ್ಕಿದೆ.ಕಟ್ಟೆಯವರು ವಿಶ್ವ ವಿಖ್ಯಾತ ಬೃಂದಾವನ ಅಣೆಕಟ್ಟೆ ಇರುವ ಕೃಷ್ಣರಾಜಸಾಗರದಲ್ಲಿ ಹುಟ್ಟಿ ಈಗ ಮಂಡ್ಯದಲ್ಲಿ ಗೂಡು ಕಟ್ಟಿ ಇತ್ತೀಚೆಗೆ ಗೃಹಪ್ರವೇಶಕ್ಕೆ ಕರೆದಿದ್ದರು. ಹೋಗಲಾಗಲಿಲ್ಲ....
ಸುದ್ದಿಗಳು
ಕುಡಿಯುವ ನೀರಿಗಾಗಿ ಮಗು ಸಹಿತ ಅಲೆದಾಡುತ್ತಿರುವ ತುಂಬು ಗರ್ಭಿಣಿ
ಬೀದರ ಜಿಲ್ಲೆಯ ಸಾವಗಾಂವ್ ಗ್ರಾಮದಲ್ಲಿ ನೀರಿಗಾಗಿ ಪರದಾಟಬೀದರ - ಜಿಲ್ಲೆಯ ಭೋಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಗಾಂವ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಬಡಜನರು ಪರಿತಪಿಸುವಂತಾಗಿದ್ದು ನೀರು ತರಲು ತುಂಬು ಗರ್ಭಿಣಿಯೊಬ್ಬಳು ಹೆಗಲ ಮೇಲೆ ಮಗು ಹೊತ್ತು ತಿರುಗುವ ದುರಂತಮಯ ವಾತಾವರಣ ಕಂಡುಬಂದಿದೆ.ಶಾಸಕ ಪ್ರಭು ಚೌಹಾಣ ಅವರ ಸ್ವಗ್ರಾಮದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಸಾವಗಾಂವ್...
ಕವನ
ಕವನಗಳು
ಭ್ರೂಣವು.ಹೊಸ ಬಸುರಿನ
ಒಡಲೊಳಗೆ
ಚಿಗುರೊಡೆದ
ಭ್ರೂಣವುಒಡಲಾಚೆ ವಿಶ್ವದಿ
ಮೊಟ್ಟೆಯೊಡೆದು
ಹುಟ್ಟ ಬಯಸುವ
ಪಕ್ಷಿಯುಕಡಲೊಳಗೆ
ಕಣ್ಣ್ತೆರೆದು
ಕನಸು ಕಾಣುವ
ಪುಟ್ಟ ಮೀನುಜೀವಜಾಲದ ಮಧ್ಯೆ
ನಗೆಯ ಪರಿಮಳ
ಕಂಪು ಸೂಸುವದು
ಮುಗ್ಧ ಭಾವಮೊಳಕೆಯೊಡೆವ
ಜೀವಕೆ ಗೊತ್ತಿಲ್ಲ
ಹೆಣ್ಣೋ ಗಂಡೋ?
ಸಮಕಳೆ ಶಾಂತಿ ಮಂತ್ರ
________________________ನೆಲವನಾಳುವನೆಲವನಾಳುವ
ನೀಚ ಮನುಜರೆ
ಏಕೆ ಕಾಡು
ಕೊಲ್ಲುತಿರಿ
ಮರದ ಪೊದರಲಿ
ಪುಟ್ಟ ಪಕ್ಷಿ
ನಗುವ ಕಲೆಗೆ
ಏಕೆ ಕಲ್ಲು
ಹೊಡೆಯುವಿರಿ
ನದಿಯೊಳಗೆ
ಕನಸು ಬಯಕೆ
ಜೀವ ಜಾಲದ
ಜಲಚರಗಳಿಗೆ
ವಿಷವನೇಕೆ
ಉಣಿಸುವಿರಿ
ಹಸಿರು ಮೇಯುವ
ಹಸು ಕರುಗಳು
ಜಿಂಕೆ ಆನೆ ಒಂಟೆ
ಅಡವಿಯ ಹುಲ್ಲು ಹಾಸಿಗೆ
ಏಕೆ ಬೆಂಕಿ ಹಚ್ಚುವಿರಿ
ನೆಲವ ಅಗಿದು
ಗಣಿಯ ಬಗೆದು
ಅದಿರು ಮಾರುವ
ಲೂಟಿ ಕೋರರೆ
ಮುಗಿಲು ಮುಟ್ಟುವ
ಫೋನ್ ಟವರ್
ಹದ್ದು ಗುಬ್ಬಿ
ಸಾಯುತಿವೆ
ಅಣು ಪರೀಕ್ಷೆ
ಬಾಂಬ್ ಗುಂಡು
ಯುದ್ಧ...
ಸುದ್ದಿಗಳು
ಜೀವನ್ ಬಿಮಾ ಯೋಜನೆಯಡಿ ರೂ. ೭೭ ಕೋಟಿ ಪರಿಹಾರ – ಈರಣ್ಣ ಕಡಾಡಿ
ಬೆಳಗಾವಿ: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ 8.37 ಲಕ್ಷ ಜನರು ನೊಂದಣಿಯಾಗಿದ್ದು, ಅದರಲ್ಲಿ 3884 ಫಲಾನುಭವಿಗಳಿಗೆ 77.68 ಕೋಟಿ ರೂ.ಗಳ ವಿಮಾ ಮೊತ್ತದ ಪರಿಹಾರ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ ಚೌಧಿರಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ...
ಸುದ್ದಿಗಳು
ಕೇಂದ್ರ ಕೃಷಿ ಸಚಿವರ ಭೇಟಿಯಾದ ಈರಣ್ಣ ಕಡಾಡಿ
ಮೂಡಲಗಿ: ದೇಶದ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳ ಕುರಿತು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದ್ರಾಕ್ಷಿ ಬೆಳಗಾರರ ನಿಯೋಗದೊಂದಿಗೆ ಕೃಷಿ ಭವನದಲ್ಲಿ ಭೇಟಿಯಾಗಿ ಹಲವಾರು ವಿಷಯಗಳ ಕುರಿತು ಚರ್ಚಿಸಿದರು.ಬರುವ ದಿನಗಳಲ್ಲಿ ದ್ರಾಕ್ಷಿ ಬೆಳಗಾರರ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಅತಿ ಶೀಘ್ರದಲ್ಲಿ ಅಧಿಕಾರಿಗಳ ಸಭೆ...
ಲೇಖನ
ನವ ಪೌರೋಹಿತ್ಯ ಪೋಷಿಸುವ ನಮ್ಮ ಮಠಾಧೀಶರು ಮಾತೆ ಅಕ್ಕ ಸ್ವಾಮಿಗಳು
ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ ಚಿಂತಕ. ಯಾವುದೇ ಶ್ರೇಣೀಕೃತವಿಲ್ಲದ ಸಮಾನತೆ ಸಮತೆ ಪ್ರೀತಿ ಶಾಂತಿಯನ್ನು ಮೈಗೂಡಿಸಿಕೊಂಡ ಹೊಸ ಲಿಂಗಾಯತ ಧರ್ಮವನ್ನು ಶರಣರು ಸ್ಥಾಪಿಸಿದರು. ಭಕ್ತಿ ಮಾರ್ಗದಲ್ಲಿ ನಡೆದು ಭವಿಯ ಕಷ್ಟಗಳ ತೊರೆವ ಸುಂದರ ಪರಿಕಲ್ಪನೆ ಶರಣರದಾಗಿತ್ತು.ವರ್ಗ ವರ್ಣ ಲಿಂಗ ಮತ್ತು ಆಶ್ರಮ ಭೇದಗಳನ್ನು ಕಿತ್ತೊಗೆದು ಸರಳ ಸಹಜ ಬದುಕನ್ನು ಶರಣರು ನಿರೂಪಿಸಿದರು.
ಹದಿನೈದನೆಯ ಶತಮಾನದಲ್ಲಿ...
ಸುದ್ದಿಗಳು
ವೃತ್ತಿ ಜೊತೆ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ ಯಲಿಗಾರರ ಬದುಕು ಮಾದರಿಯಾದದ್ದು – ಜಗದ್ಗುರು ತೋಂಟದ ಶ್ರೀಗಳು
ಸಾಹಿತಿ ಪಿ.ಬಿ.ಯಲಿಗಾರರವರ 'ಶೃಂಗಾರ ತೀರ್ಥ 'ಕೃತಿ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿದ್ದರೂ ಪ್ರವೃತ್ತಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿ ಸಂಬಂಧಗಳ ಶ್ರೀಮಂತಿಕೆ ಹೆಚ್ಚಿಸುವ ಹಲವು ಕೃತಿಗಳನ್ನು ಬರೆಯುವುದರ ಜೊತೆಗೆ, ತಮ್ಮ ಸೇವೆಯಲ್ಲಿಯೂ ಜನಪರ ಕೆಲಸ ಮಾಡಿ, ಸಾಹಿತ್ಯದಲ್ಲಿ ಹಳಗನ್ನಡ ನಡುಗನ್ನಡ,ಹೊಸಗನ್ನಡ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಪರಿಣಿತಿ ಹೊಂದಿ 80ರ ಹರೆಯದಲ್ಲೂ ಮೌಲ್ಯಯುತ ಕೃತಿ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಏಸುಕ್ರಿಸ್ತನ ಪ್ರೀತಿ ಬುದ್ಧದೇವನ ಕರುಣೆ
ಮಹಮದನ ಸಹಬಾಳ್ವೆ ಸೋದರತ್ವ
ನಾನಕರ ಸಮಬಾಳು ಶಂಕರರ ಸಮಭಾವ
ಅಳವಡಿಸುಕೋ ನೀನು - ಎಮ್ಮೆತಮ್ಮಶಬ್ಧಾರ್ಥ
ಸಮಬಾಳ್ವೆ = ಸಹಜೀವನ. ಸೋದರತ್ವ = ಸಹೋದರತ್ವ
ಸಮಬಾಳು = ಸಮಾನರಾಗಿ ಜೀವಿಸುವುದು
ಸಮಭಾವ = ಸಮಾನತೆಯ ಮನಸ್ಸುತಾತ್ಪರ್ಯ
ಏಸುಕ್ರಿಸ್ತನು ಬಡವ ಬಲ್ಲಿದ ಎನ್ನದೆ ಎಲ್ಲರನ್ನು ಪ್ರೀತಿಸುತ್ತಿದ್ದ.
ಒಬ್ಬ ವೇಶ್ಯೆಯನ್ನು ಜನ ಕಲ್ಲಿನಿಂದ ಹೊಡೆಯುವುದನ್ನು
ನಿಲ್ಲಿಸಿದ. ಆಕೆಯನ್ನು ಆ ವೃತ್ತಿಯನ್ನು ತೊರೆಯುವಂತೆ ಮಾಡ ಅವಳನ್ನು ನಿಷ್ಕಾಮದಿಂದ...
ಲೇಖನ
ಸಾಹಿತ್ಯ ಪರಿಚಾರಿಕೆ ಕನ್ನಡ ಸೇವೆ ಸಿಸಿರಾ
ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬುದ್ಧ ಬಸವ ಗಾಂಧೀಜಿಯವರ ತತ್ವ ಆದರ್ಶಗಳಿಗೆ ಮಾರು ಹೋದ ನಾನು ಅಲ್ಲಿಂದಲೇ ಸರಳ ಸಸ್ಯಾಹಾರ,ಆಹಿಂಸಾ ತತ್ವ ಇನ್ನೊಬ್ಬರ ನೋವು ನಲಿವುಗಳಲ್ಲಿ ಸ್ಪಂದಿಸುವ ಗುಣವನ್ನು ಈ ಚೇತನಗಳಿಂದ ಕಲಿತೆ ಎನ್ನುತ್ತಾರೆ ಸಿಸಿರಾ.ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಕರು ಎಸ್.ರಾಮಲಿಂಗೇಶ್ವರ ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು ಪ್ರವೃತ್ತಿಯಲ್ಲಿ ಸಾಹಿತ್ಯ ಪರಿಚಾರಕರು. ಸಿಸಿರಾ ಸ್ವಭಾವತಃ ಕವಿ....
Latest News
ಬೆಳಕಿನ ಹಬ್ಬ ದೀಪಾವಳಿ.
'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ ದೀಪಾವಳಿ ಹಬ್ಬ'. ದೇಶದಾದ್ಯಂತ...