ಗೋಕಾಕ: ಕೇಂದ್ರ ಸರ್ಕಾರದ ಜನ ಔಷಧಿ ಕೇಂದ್ರಗಳು ಜನ ಸಾಮಾನ್ಯರ ಆರೋಗ್ಯ ಜೀವನದ ಆಶಾ ಕೇಂದ್ರಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಮಾ-07 ರಂದು ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರ ಯೋಜನೆಯ 11ನೇ ವರ್ಷಾಚರಣೆಯ ನಿಮಿತ್ತ ಗೋಕಾಕ ನಗರದ ಸಾರ್ವಜನಿಕ ತಾಲೂಕಾ ಆಸ್ಪತ್ರೆಯ ಹತ್ತಿರ ಇರುವ ಜನಔಷಧಿ ಮಳಿಗೆಗೆ...
ಸಿಂದಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್‌ಜಿ ಬಣ) ತಾಲೂಕ ಶಾಖೆ ಸಿಂದಗಿ ವತಿಯಿಂದ ಮುಂಬರುವ ಏಪ್ರಿಲ್ ೧೪ನೇ ರಂದು ವಿಶ್ವ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ ಸಿ ಮಯೂರ...
ಸಾರಿ
-------------
ನಾರಿ ಮಹಿಳೆ
ನಿನ್ನ ಅಡವಿಗೆ
ಅಟ್ಟಿದ ದೇವಪುರುಷನ
ಪರವಾಗಿ ಸಾರಿ
ಅಂದು ಪಗಡಿಯಾಟದಲ್ಲಿ
ಒತ್ತೆ ಇಟ್ಟು ಸೀರೆ ಸೆಳೆದವರ
ಮಧ್ಯೆ ಸೊಲ್ಲೆತ್ತದೆ ಕುಳಿತವರ
ಪರವಾಗಿ ಸಾರಿ.
ಮೋಸದಿ ಮದುವೆಯಾಗಿ
ಉಪಭೋಗಿಸಿ
ತುಳಸಿಗೆ ನ್ಯಾಯ ಕೊಡದವರ
ಪರವಾಗಿ ಸಾರಿ
ಶೂರ್ಪನಖಿ ವಿರೂಪಗೊಳಿಸಿ
ಮೊಲೆ ಮೂಗು
ಕೊಯ್ದು ಅಟ್ಟಹಾಸ ಮೆರೆದವರ
ಪರವಾಗಿ ಸಾರಿ
ಶತಶತಮಾನದಿ ನಿನ್ನ ಕೊಂದವರ
ಮಾನಹರಣ ಮಾಡಿ ಕೇಕೆ ಹಾಕಿದವರ
ಸುಲಿಗೆ ಮಾಡಿ ಸೂಳೆ ಪಟ್ಟ ಕಟ್ಟಿದವರ
ಪರವಾಗಿ ವೆರಿ ವೆರಿ ಸಾರಿ.
ನಾರಿ ಗಟ್ಟಿ ಮನವ ಮಾಡು
ಚೆಂಡಾಡು ನಿನ್ನ ಶೋಷಿದವರ
ಹುಟ್ಟಡಗಿಸು ಮೆಟ್ಟಿ...
ಬೀದರ - ನಗರದಲ್ಲಿ ಕರ್ಕಶ ಶಬ್ದ ಮಾಡುತ್ತ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು ನೂರಾರು ಬೈಕ್ ಗಳ ಸೈಲೆನ್ಸರ್ ಗಳನ್ನು ಧ್ವಂಸ ಮಾಡಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ೧೪೭ ಸೈಲೆನ್ಸರ್ ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಧ್ವಂಸ ಮಾಡಿದ್ದಲ್ಲದೆ ರೂ. ೧.೩೭ ಲಕ್ಷ ದಂಡ ಕೂಡ ವಸೂಲಿ ಮಾಡಿದರು.
ಎಸ್ ಪಿ...
ಮೂಡಲಗಿ:- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು ಅದು ಎಲ್ಲರ ಆಶಾದಾಯಕ ಬಜೆಟ್ ಆಗಿದೆ ಎಂದು ಅರಭಾಂವಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಶ್ಲಾಘಿಸಿದ್ದಾರೆ.
ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ಕರ್ನಾಟಕವು ಶೇ.7.4 ರಷ್ಟು ಜಿಎಸ್‌ಡಿಪಿ ಬೆಳವಣಿಗೆ ದರವನ್ನು ಸಾಧಿಸುವ ವಿಶ್ವಾಸ, ದೇಶೀಯ ಉತ್ಪನ್ನಕ್ಕೆ ಶೇಕಡಾ 8.4 ರಷ್ಟು ಕೊಡುಗೆ,
ಸವದತ್ತಿಯ...
ಹಲೋ ಸುಂದರಾಂಗ,
ಅದೆಷ್ಟೋ ಬಾರಿ ಬರಿ ಕಂಗಳಲ್ಲಿಯೇ ಮಾತನಾಡಿದೆ. ಅಡೆತಡೆಯಿಲ್ಲದೇ ಸಾಗುವ ನಯನದ ಭಾಷೆ ನನಗೂ ಕಲಿಸಿದೆ. ಕಣ್ಣಿನಲ್ಲೇ ಸಲಿಗೆ ಬೆಳೆಸಿದೆ. ಸುದ್ದಿ ಇಲ್ಲದೇ ಸದ್ದು ಮಾಡದೆ ಹೃದಯದಿ ಕಳ್ಳಬೆಕ್ಕಿನಂತೆ ಮೆಲ್ಲ ಮೆಲ್ಲನೆ ಹೆಜ್ಜೆಯಿಟ್ಟೆ. ಎಂಥ ಚೆಂದದ ಚೆಲುವಿಯರು ನಿನ್ನ ಬಯಸಿ ಹಿಂದೆ ಹಿಂದೆ ಬಂದರೂ ಕ್ಯಾರೆ ಅನ್ನಲಿಲ್ಲ. ಅಂಥ ಮೋಹಕ ಚುಂಬಕ ವ್ಯಕ್ತಿತ್ವದವನು ನೀನು....
ಚಲನಚಿತ್ರ ಹಾಸ್ಯ ನಟ ಮೈಸೂರು ರಮಾನಂದ ಸಾರಥ್ಯದ ಹೆಜ್ಜೆ ಗೆಜ್ಜೆ ನಾಟಕ ತಂಡವು ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನದಲ್ಲಿ ಹಾಸ್ಯ ನಟ ಮೈಸೂರು ರಮಾನಂದ್ ವಿರಚಿತ ಮೊಬೈಲಾಯಣ ಹಾಸ್ಯ ವೈಚಾರಿಕ ನಾಟಕವನ್ನು ಪ್ರದರ್ಶಿಸಿತು.
ಈ ಸಂದರ್ಭ ನಟ ನಾಟಕಕಾರ ಹಾಸನದ ಸಾಹಿತಿ ಗೊರೂರು
ಅನಂತರಾಜು ಅವರ ರಂಗಭೂಮಿ ಸಾಧನೆ ಗುರುತಿಸಿ ಹೆಜ್ಜೆ ಗೆಜ್ಜೆ ತಂಡದಿಂದ ಸನ್ಮಾನಿಸಿ ಗೌರವಿಸಲಾಯಿತು.
ವೆಂಕಟೇಶ,...
ಸಾಲದ ಶೂಲಕ್ಕೆ ದೂಡಿದ ಬಜೆಟ್
ಸಿದ್ದರಾಮಯ್ಯನವರು 16ನೇ ಬಜೆಟ್ ಮಂಡನೆ ಮಾಡಿರುವುದೇ ಸಾಧನೆಯಾಗಿದೆ ಮಾತ್ರವಲ್ಲ, ಮುಂಬರಲಿರುವ ತಾಪಂ, ಜಿಪಂ ಚುನಾವಣೆಯನ್ನು ಮುಂದಿಟ್ಟುಕೊಂಡು ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅರಭಾವಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆಯೊಂದರಲ್ಲಿ ಅವರು ರಾಜ್ಯ ಬಜೆಟ್ ಕುರಿತ ಹೇಳಿಕೆ ನೀಡಿದರು.
ಉತ್ತರ ಕರ್ನಾಟಕಕ್ಕೆ ಹೇಳಿಕೊಳ್ಳುವಂತಹ...
ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಗುರಿ ಮತ್ತು ಕೃಷಿ ಸಮುದಾಯಗಳಿಗೆ ಆದಾಯ ಹೆಚ್ಚಿಸುವ ಉದ್ದೇಶ
ಬೆಳಗಾವಿ : ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್‌ನ (ಡಿ.ಸಿ.ಬಿ.ಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ವಿಭಾಗ ಆಗಿರುವ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿ.ಬಿ.ಎಫ್) ಇಂದು ಯಾದವಾಡ, ಬೆಳಗಾವಿ ಸುತ್ತಮುತ್ತಲಿನ ಗ್ರಾಮಗಳ...
ಇಂಗಾಲದ ಹೆಜ್ಜೆಗಳನ್ನು ಅಳಿಸಲು ಕಂಕಣಬದ್ಧವಾಗಿರುವ 'ಈಕ್ಯೂ ಅಂತರರಾಷ್ಟ್ರೀಯ' ಇಂಗ್ಲೀಷ ಮಾಸಪತ್ರಿಕೆಯು 'ಎಮ್ವಿ', ನೋವಾಸಿಸ್, ಧಶ್ ಟೆಕ್ನಾಲಜೀಜ್ ಹಾಗೂ ಇಂಡಿಯನ್ ಸೋಲಾರ್ ಅಸೋಸಿಯೇಷನ್ ಗಳ ಸಹಯೋಗದಲ್ಲಿ, ಬೆಂಗಳೂರಿನ ಲಲಿತ ಅಶೋಕಾ ಹೊಟೇಲಿನಲ್ಲಿ ಆಯೋಜಿಸಲಾಗಿದ್ದ ಸೂರ್ಯಕಾನ್ ಬೆಂಗಳೂರು-2025 ರಡಿಯಲ್ಲಿ ಕೊಡಮಾಡುವ 'ಕರ್ನಾಟಕ ಎನ್ಯುವಲ್ ಸೋಲಾರ್ ಅವಾರ್ಡ-2025' ನ್ನು ರಾಮದುರ್ಗದ ಗ್ರೀನ್ ಲ್ಯಾಂಡ್ ಬಯೋಟೆಕ್ ನ ಮುಖ್ಯ ಕಾರ್ಯನಿರ್ವಾಹಕ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...