Homeಸುದ್ದಿಗಳುSavadatti: ರಾಷ್ಟ್ರೀಯ ನೇಕಾರ ದಿನಾಚರಣೆ ಕಾರ್ಯಕ್ರಮ

Savadatti: ರಾಷ್ಟ್ರೀಯ ನೇಕಾರ ದಿನಾಚರಣೆ ಕಾರ್ಯಕ್ರಮ

ಸವದತ್ತಿ: “ಕೈಮಗ್ಗ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ ಹೀಗಾಗಿ ಯುವಜನತೆ ಕೈಮಗ್ಗ ಉದ್ಯಮದಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿ, ಆರ್ಥಿಕವಾಗಿ ಸದೃಡರಾಗಬೇಕು” ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಾಸು ದೊಡ್ಡಮನಿ ಹೇಳಿದ್ದಾರೆ.

ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದಲ್ಲಿ ರಾಷ್ಟ್ರೀಯ ನೇಕಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಮಾರುಕಟ್ಟೆಯಲ್ಲಿ ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳಿಗೆ ವ್ಯಾಪಕ ಬೇಡಿಕೆಯಿದೆ ನೇಕಾರರು ಹೊಸ ತಂತ್ರಜ್ಞಾನ ಬಳಸಿಕೊಂಡು ಕೈಮಗ್ಗದ ಬಟ್ಟೆ ತಯಾರಿಸಿದರೆ ಉತ್ತಮ ಬೆಲೆ ಸಿಗುತ್ತದೆ’ ಎಂದರು.

ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭೀರಪ್ಪ ದೇವರಮನಿ ಮಾತನಾಡಿ ‘ರೈತ ನೇಕಾರ ದೇಶದ ಎರಡು ಕಣ್ಣುಗಳಿದ್ದಂತೆ. ಜನರ ಮಾನ ಮುಚ್ಚಲು ಬಟ್ಟೆ ಅವಶ್ಯವಿದೆ ಅಂತಹ ಪವಿತ್ರ ವೃತ್ತಿ ಮಾಡುವ ನೇಕಾರನಿಗೆ ಸರಿಯಾದ ಪ್ರೋತ್ಸಾಹ ಸಿಗದೇ ಆರ್ಥಿಕವಾಗಿ ಹಿಂದುಳಿದಿದ್ದಾನೆ ನೇಕಾರರು ಸಂಘಟಿತರಾಗಬೇಕು ಆಗಲೇ ಸರಕಾರದ ಸೌಲಬ್ಯ ಪಡೆಯಲು ಸಾಧ್ಯ’ ಎಂದರು.

ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಕೈಮಗ್ಗ ವೈತ್ತಿ ಕಾರ್ಯನಿರ್ವಹಿಸುತ್ತಿರುವ ನೇಕಾರರನ್ನು ಗುರುತಿಸಿ ಸನ್ಮಾನಿಸಲಾಯಿತು.

ಬೋಜರಾಜ ಕಟ್ಟಾರಿ ಜವಳಿ ಪ್ರವರ್ದನಾ ಅಧಿಕಾರಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಬೆಳಗಾವಿ, ಜವಳಿ ಉತ್ತೇಜನ ಅಧಿಕಾರಿ ಸತೀಶ ಕಾಪಶೆ, ಕೃಷ್ಣ ಅನಿಗೋಳಕರ ಡಿ.ಸಿ.ಸಿ.ಬ್ಯಾಂಕ ನಿರ್ದೆಶಕರು, ಸ್ಥಳೀಯ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘ ಕಾರ್ಯದರ್ಶಿ ಬಸಪ್ಪ ಮರ್ಚಪ್ಪನ್ನವರ, ಪ್ರಕಾಶ ಕಲ್ಲೇದÀ, ವಿಠ್ಠಲ ಮಳಗಲಿ, ಪ್ರಕಾಶ ಸಾವಳಗಿ, ಪಕ್ಕೀರಪ್ಪ ಕಲ್ಲೇದ, ನಾಮದೇವ ಹೆಗ್ಗನ್ನವರ, ಸಿದ್ದಪ್ಪ ಮರ್ಚಪ್ಪನವರ, ಲಕ್ಕಮ್ಮ ದೇವರಮನಿ, ಮಲ್ಲಮ್ಮ ಮರ್ಚಪ್ಪನವರ ಹಾಗೂ ಸಿಬ್ಬಂದಿ ಇದ್ದರು ಎ.ಬಿ.ಲಕ್ಕನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group