ಮೂಡಲಗಿ : ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಲು ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮೂಡಲಗಿ ತಾಲೂಕಾ ಘಟಕದಿಂದ ಶನಿವಾರ ಗುರ್ಲಾಪೂರ ಕ್ರಾಸ್ ದಲ್ಲಿ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿದರು.
ತಹಶೀಲ್ದಾರ ಡಿ.ಜಿ.ಮಹಾತ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿಗಳು, ರಾಜ್ಯ ಸರ್ಕಾರ ಕೊಟ್ಟಮಾತು ತಪ್ಪಿದ ಕಾರಣ ಈ ಹೋರಾಟ ನಡೆಸುತ್ತಿದ್ದೇವೆ. ಇಡಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಕಳೆದ ೨೭ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು, ಆಡಳಿತ ನಡೆಸಿದ ಸರಕಾರಗಳು ಕೇವಲ ಮುಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವುದನ್ನು ಗಮನಿಸಿ ಈಗಾಗಲೇ ಪಾದಯತ್ರೆ ಪ್ರತಿಜ್ಞಾ ಸಮಾವೇಶ ಮತ್ತು ಸತ್ಯಾಗ್ರಹ ನಡೆಸಿದರು ಕೂಡಾ ಸರಕಾರ ಸ್ಪಂದಿಸುತ್ತಿಲ್ಲ. ಹಿಂದಿನ ಮುಖ್ಯ ಮಂತ್ರಿಗಳಂತೆ ಈಗಿನ ಮುಖ್ಯ ಮಂತ್ರಿಗಳು ಕೈ ಕೊಟ್ಟರೆ ನಮ್ಮ ಸಮಾಜದ ಜನತೆಯಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ. ಮೇ.23 ನಂತರ ಶಿಗ್ಗಾಂವದ ಸಿ.ಎಮ್ ಮನೆ ಮುಂದೆ ಹೋರಾಟ ಮಾಡಲಾಗುವದು ಎಂದು ಹೇಳಿದರು.
ಪಂಚಮಸಾಲಿ ಲಿಂಗಾಯತ ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಮಾತನಾಡಿ, ಪಂಚಮಸಾಲಿ ಸಮುದಾಯದ ಶಾಸಕರು ವಿಧಾನಸೌಧದಲ್ಲಿ 2ಎ ಮೀಸಲಾತಿಗಾಗಿ ದ್ವನಿ ಏತ್ತಿರುವ ಶಾಸಕ ಬಸನಗೌಡ ಯತ್ನಾಳರ ಧ್ವನಿಗೂಡಿಸಬೇಕು ಎಂದು ಮನವಿ ಮಾಡಿಕೋಳ್ಳುತ್ತೇವೆ. ಒಂದು ವೇಳೆ ದ್ವನಿಗೂಡಿಸದಿದ್ದರೆ, ಅಂಥವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವದು ಎಂದರು.
ಭೀಮಪ್ಪ ಗಡಾದ, ಬಿ.ಬಿ.ಹಂದಿಗುಂದ, ಬಿ.ಆರ್.ತರಕಾರ, ಶಶಿಕಾಂತ ಚಿಕ್ಕಪಡಸಲಿಗಿ, ಬಿ.ಸಿ.ಮುಗಳಖೋಡ, ಅಂಬರೀಶ ನಾಗೂರ ಮಾತನಾಡಿದರು.
ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ, ಮಲ್ಲು ಗೋಡಿಗೌಡರ, ಸಂಗಮೇಶ ಕೌಜಲಗಿ, ಶಿವನಗೌಡ ಪಾಟೀಲ, ಶಿವಬಸು ಜುಂಜರವಾಡ, ಸದಾಶಿವ ನಿಡಗುಂದಿ, ಈಶ್ವರ ಢವಳೇಶ್ವರ, ಕಲ್ಮೇಶ ಗೋಕಾಕ, ಅಜ್ಜಪ್ಪ ಬಳಿಗಾರ, ಮಲ್ಲು ಕುರಬಗಟ್ಟಿ, ಹೋಳೆಪ್ಪ ಶಿವಾಪೂರ ಮತ್ತಿತರರು ಉಪಸ್ಥಿತರಿದ್ದರು.