ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ , ರೂರಲ್ ಡೆವಲಪಮೆಂಟ್ ಸೊಸೈಟಿ (RDS) ಸಂಸ್ಥೆ ಮುರಗೋಡ ,ಇವರ ಸಹಯೋಗದೊಂದಿಗೆ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಕೆರೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಲ ಜೀವನ ಮಿಷನ್ ಯೋಜನೆಯಲ್ಲಿ ಕಿರು ನೀರು/ಜಲ ಮೂಲಗಳ ಪುನಶ್ಚೇತನ ಕಾರ್ಯಕ್ರಮ ಅಡಿಯಲ್ಲಿ ಹುಕ್ಕೇರಿ ತಾಲೂಕಿನ ಉಳಾಗಡ್ಡಿ ಖಾನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿರಿ ನಗರ ಕೆರೆಯಲ್ಲಿ ಸ್ವಚ್ಛತೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕೆರೆಯ ಸುತ್ತ ಮುತ್ತಲಿನ ವಾತಾವರಣ ಮತ್ತು ಕೆರೆಯಲ್ಲಿ ತುಂಬಿರುವ ಹುಳು, ಕಸ ಗಿಡ ಗಂಟಿಗಳು ಮತ್ತು ಪ್ಲಾಸ್ಟಿಕ್ ಕವರ, ಪ್ಲಾಸ್ಟಿಕ್ ಚೀಲ ಬಾಟಲ್, ಕಸವನ್ನು ತೆಗೆದು ಕೆರೆಯನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಮುದಾಯದ ಸಂಘ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು, ಗ್ರಾಮಸ್ಥರು ಮತ್ತು ವಿಶೇಷವಾಗಿ ಕಾಲೇಜ್ ಮಕ್ಕಳು,N.S.S ಘಟಕದ ವಿದ್ಯಾರ್ಥಿಗಳು ಕೂಡ ಬಂದು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ದೀಪಕ್ ಕೆ ಅವರು ಕಿರು ನೀರು/ ಜಲ ಮೂಲಗಳ ಪುನಶ್ಚೇತನ ಜನಾಂದೋಲನ ಕುರಿತು ಮಾತನಾಡಿದರು.
ಈ ಜಲ ಮೂಲಗಳನ್ನು ನಾವು ಮುಂದಿನ ಪೀಳಿಗೆಗೆ ಸ್ವಚ್ಚವಾಗಿ ಮತ್ತು ಸುರಕ್ಷಿತವಾಗಿ ಕೊಡುಗೆ ನೀಡಬೇಕಾಗಿದೆ ಮತ್ತು ನಮ್ಮ ಎಲ್ಲರ ಜವಾಬ್ದಾರಿ ಕೂಡ ಆಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ PDO ವಿನಯ್ ಕುಮಾರ್ ಹಾಗೂ ಪಂಚಾಯತಿಯ ಎಲ್ಲ ಸಿಬ್ಬಂದಿಗಳು ಚುನಾಯಿತ ಪ್ರತಿನಿಧಿಗಳು ಮತ್ತು ಉಳಾಗಡ್ಡಿ ಖಾನಾಪುರದ ಪದವಿ ಪೂರ್ವ ಮಹಾವಿದ್ಯಾಲಯದ N.S.S ಘಟಕದ ವಿದ್ಯಾರ್ಥಿಗಳು ಉಪನ್ಯಾಸಕರು ಮತ್ತು ಉಳಾಗಡ್ಡಿ ಖಾನಾಪುರದ ಯುವಕ ಸಂಘಗಳ ಯುವಕರು ಮತ್ತು ಗ್ರಾಮಸ್ತರು,ISRA ತಂಡದ ನಾಯಕ ಶಿವರಾಜ್ ಹೊಳೆಪ್ಪಗೊಳ ಹಾಗೂ ISRA ಸಿಬ್ಬಂದಿಗಳಾದ ಅಭಿಯಂತರಾದ ಪದ್ಮಭೂಷಣ ಪಾಟೀಲ ಮತ್ತು ಪರಶುರಾಮ ಭಜಂತ್ರಿ ಉಪಸ್ಥಿತರಿದ್ದರು.