spot_img
spot_img

ನವರಾತ್ರಿಯ ನವದುರ್ಗೆಯರು

Must Read

spot_img
- Advertisement -

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಯಾರು ಎಲ್ಲ ಜೀವಿಗಳಲ್ಲಿ ತಾಯಿಯಾಗಿ ನೆಲೆಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು.

ಅನಾದಿ ಕಾಲದಿಂದಲೂ ನಮ್ಮ ಭರತಭೂಮಿಯಲ್ಲಿ ಮಾತೃಪೂಜೆ, ದೇವಿಯಪೂಜೆ ವಿಶೇಷವಾಗಿ ನಡೆದು ಬಂದಿದೆ.
ಆಶ್ವಯುಜ ಮಾಸದ ಮೊದಲ ದಿನದಿಂದ ಒಂಬತ್ತು ದಿನಗಳ ವರೆಗೆ ನಡೆಯುವ ವಿಶೇಷ ಪರ್ವ ನವರಾತ್ರಿ. ನಾಲ್ಕು ರೀತಿಯ ನವರಾತ್ರಿಗಳು ಇವೆ. ಶ್ರೀ ರಾಮನು ರಾವಣನನ್ನು ಸಂಹಾರ ಮಾಡುವ ಮೊದಲು ದೇವಿಯನ್ನು ಪೂಜಿಸುತ್ತಾನೆ. ಶರದ್ ಋತುವಿನಲ್ಲಿ ಬರುವ ಈ ನವರಾತ್ರಿ, ಶರನ್ನವರಾತ್ರಿ ಎಂದು ಪ್ರಸಿದ್ಧವಾಗಿದೆ. ವಸಂತ ಋತುವಿನಲ್ಲಿ ಬರುವ ಚೈತ್ರ ಮಾಸದ ನವರಾತ್ರಿ ವಸಂತ ನವರಾತ್ರಿ, ಆಷಾಢದಲ್ಲಿ ಆಷಾಢ ನವರಾತ್ರಿ, ಮಾಘಮಾಸದಲ್ಲಿ ಮಾಘನವರಾತ್ರಿ- ಹೀಗೆ ನಾಲ್ಕು ನವರಾತ್ರಿ ಆಚರಿಸುತ್ತಾರೆ .ಆದರೆ ಶರನ್ನವರಾತ್ರಿಯನ್ನು ಎಲ್ಲರೂ ಆಚರಿಸುತ್ತಾರೆ. ಇದನ್ನು ದುರ್ಗಾಪೂಜೆ, ದಸರಾ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ದೇವಿಗೆ ವಿಶೇಷ ಪೂಜೆ ಮಾಡಿ ಅವಳ ಕೃಪೆಗೆ ಪಾತ್ರರಾಗುವುದೇ ಮುಖ್ಯ ಗುರಿ. ಭಗವತಿಯು ಭಕ್ತರಿಗಾಗಿ ನಾನಾ ರೂಪಗಳನ್ನು ತಾಳಿದ್ದಾಳೆ.

- Advertisement -

ಆ ಪರತತ್ವದ ಒಂದು ಸಾಕಾರ ರೂಪವನ್ನು ದುರ್ಗಾ ಎಂದು ಕರೆಯುತ್ತೇವೆ. ದುರ್ಗಾ ಎಂಬ ಹೆಸರು, ಎಲ್ಲ ವಿಘ್ನ, ಪಾಪ, ರೋಗ, ಶತ್ರು ಭಯ ಹೋಗಲಾಡಿಸುವ ಮಹಾಶಕ್ತಿ.

ದೇವಿಯ ಒಂಬತ್ತು ರೂಪಗಳನ್ನು, ಒಂಬತ್ತು ದಿನಗಳ ವರೆಗೆ ನಡೆಯುವ ವಿಶೇಷ ಪೂಜೆ ಮಾಡಿ ಅವಳ ಕೃಪೆಗೆ ಪಾತ್ರರಾಗುವುದೇ ಮುಖ್ಯ ಗುರಿ. ಅವಳ ಒಂಬತ್ತು ರೂಪಗಳು ಈ ರೀತಿ ಇವೆ.

  1. ಶೈಲಪುತ್ರೀ
  2. ಬ್ರಹ್ಮಚಾರಿಣೀ
  3. ಚಂದ್ರಘಂಟಾ
  4. ಕೂಷ್ಮಾಂಡಾ
  5. ಸ್ಕಂದಮಾತಾ
  6. ಕಾತ್ಯಾಯಿನಿ
  7. ಕಾಲರಾತ್ರಿ ( ಕಾಳೀ )
  8. ಮಹಾಗೌರಿ
  9. ಸಿದ್ಧಿಧಾತ್ರೀ

ಹತ್ತನೆಯದಿನ ವಿಜಯದಶಮಿ.ಅಂದು ದುರ್ಗೆಯು ಚಾಮುಂಡಿರೂಪದಲ್ಲಿ ಮಹಿಷಾಸುರನ ಸಂಹಾರ ಮಾಡಿ, ಮಹಿಷಾಸುರ ಮರ್ದಿನಿಯಾದಳು. ಅದು ವಿಜಯೋತ್ಸವದ ಸಂಭ್ರಮ ವಿಜಯದಶಮಿ. ನಮ್ಮ ಕನ್ನಡ ನಾಡಿನ ನಾಡಹಬ್ಬ ಜಗತ್ಪ್ರಸಿದ್ಧ.ಭಾವೈಕ್ಯತೆ ಹಬ್ಬ.

- Advertisement -

ದೇವಿಯು ಜಗದ ಕಂಟಕ ದೂರ ಮಾಡಲೆಂದು ಪ್ರಾರ್ಥಿಸಿ, ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು..

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group