ಬೀದರ: ಬಸವಣ್ಣನವರ ನಾಡು ಬಸವಕಲ್ಯಾಣ ಶಾಸಕ ಶರಣು ಸಲಗರ ರೈತರ ಜಮೀನಿನಲ್ಲಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡು ಸೋಯಾ ಬೀನ್ ಹಾಗೂ ತೊಗರಿ ಬಿತ್ತನೆ ಮಾಡಿದರು.
ರೈತರೊಂದಿಗೆ ರೈತರಾದ ಬಸವಕಲ್ಯಾಣ ಶಾಸಕ ಶರಣು ಸಲಗರ ಇಂದು ಹುಲಸೂರ ಗ್ರಾಮದ ರೈತ ಬಾಳಪ್ಪ ತಿಮ್ಮಯ್ಯ ಎನ್ನುವವರ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಆಗಮಿಸುತ್ತಿರುವ ವೇಳೆ ಕಾರಿನಿಂದ ಕೆಳೆಗೆ ಇಳಿದು ರೈತರೊಂದಿಗೆ ಸಮಾಲೋಚನೆ ಮಾಡಿದ ಬಳಿಕ ಸಲಗರ ಅವರು ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಬಿತ್ತನೆ ಮಾಡಿದ ದೃಶ್ಯ ಕಂಡುಬಂದಿದೆ.
ಬಡವರ ಪರವಾಗಿ ರೈತರ ಪರವಾಗಿ ಇರುವ ಬಸವಕಲ್ಯಾಣ ಶಾಸಕರ ಈ ಕಾರ್ಯ ಬೀದರ್ ಜಿಲ್ಲಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು.
ವರದಿ: ನಂದಕುಮಾರ ಕರಂಜೆ, ಬೀದರ