ಜೀವನ ಸ್ವಾತಂತ್ರ್ಯ
ಬ್ರಿಟಿಷರ ಆಳ್ವಿಕೆಯು
ಕೊನೆಗೊಂಡ ದಿನಗಳು
ದೊರಕಿಸಿದವು ನಮಗೆ ಸ್ವಾತಂತ್ರ್ಯ
ದೇಶವನಾಳುವ ಪ್ರಜೆಗಳ ಪ್ರಭುತ್ವ
ದೊರಕಿಸಿದ ಸ್ವಾತಂತ್ರ್ಯ
ದೇಶ ಕಂಡ ಹೆಮ್ಮೆ
ತನ್ನ ಹಕ್ಕುಗಳೊಡನೆ
ಬದುಕಲು ದೊರಕಿತು
ಜೀವನ ಸ್ವಾತಂತ್ರ್ಯ
ಜೀವ ಜೀವಗಳೊಂದಾದ
ಕ್ಷಣವದು ನಮಗೂ ಸ್ವಾತಂತ್ರ್ಯ
ಬದುಕಿನ ಸ್ವಚ್ಚಂದದೊಳು ವಿಹರಿಸಲು
ನಲ್ಲೆ ನಮ್ಮೀ ಪ್ರೀತಿಗೆ
ಹಿರಿಯರೊಪ್ಪಿಗೆ ಸಿಗುವ
ಮೊದಲು ಕದ್ದುಮುಚ್ಚಿ
ಸೇರುವ ಬಗೆ ನೆನೆಯಲು
ನಮಗೆ ಹಿರಿಯರು ಮದುವೆಗೆ
ಕೊಟ್ಟ ಒಪ್ಪಿಗೆ ಸ್ವಾತಂತ್ರ್ಯವಲ್ಲವೇ.?
ಎದೆಯ ಗುಟ್ಟಾದ ಮಾತು
ಸ್ವಚ್ಚಂದದೊಳು ಹೊರಗೆಡಹಲು
ತಲೆ ಎತ್ತಿ ಓಡಾಡಲು
ಯಾವ ಕಟ್ಟುಪಾಡುಗಳಿಲ್ಲದೇ
ದೊರಕಿಹ ದಿನ ನಮಗದು ಸ್ವಾತಂತ್ರ್ಯ
ಈ ದಿನ ನಮಗೆ ಹೆಮ್ಮೆಯಲ್ಲವೇ.?
ಈ ದಿನ ಬಂದಾಗ ನೆನಪಾಗುತಿಹದು
ಬ್ರಿಟಿಷರ ಹೊರದೂಡಲು
ನಮ್ಮವರು ಪಟ್ಟ ಹೋರಾಟದ
ದಿನಗಳು ರೋಚಕ ಘಟನೆಗಳು
ಸ್ವಂತಂತ್ರ ಸಿಕ್ಕಾಗ ಎಲೆಎತ್ತಿ
ಓಡಾಡಲು ದೊರೆತ ಕ್ಷಣಗಳು
ನಮಗೆ ಜೀವನ ಕಟ್ಟಿಕೊಳ್ಳಲು
ಕದ್ದು ಮುಚ್ಚಿ ಓಡಾಡಿದ
ಕ್ಷಣಗಳ ಮರೆತು ಸ್ವತಂತ್ರರಾದೆವು
ಎನುವ ಸಡಗರ ಸಂಭ್ರಮ
ದೇಶಭಕ್ತರ ನೆನೆಯುತಲಿ
ನಮ್ಮ ಸ್ವಾತಂತ್ರ್ಯ ನೆನೆಯುತಿಹೆವಲ್ಲವೇ.?
ವೈ.ಬಿ.ಕಡಕೋಳ
ಚಿತ್ರಗಳು: ರೇಖಾ ಮೊರಬ, ಚಿತ್ರ ಕಲಾ ಶಿಕ್ಷಕಿ, ಹುಬ್ಬಳ್ಳಿ