ಗುರ್ಲಾಪೂರ: ಸ್ಥಳೀಯ ಸರಕಾರಿ ಪ್ರೌಢಶಾಲೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಗೀತಾ ಕರಗಣ್ಣಿ ಇವರ ಅಧ್ಯಕ್ಷತೆಯಲ್ಲಿ ನೆರೆವೇರಿತು.
ಅಧ್ಯಕ್ಷರಾಗಿ ರಾಮಪ್ಪ. ಎನ್ ಹಳ್ಳೂರ, ಉಪಾಧ್ಯಕ್ಷರಾಗಿ ರೇವಪ್ಪ ಸಿ ಸತ್ತಿಗೇರಿ ಹಾಗೂ ಸದಸ್ಯರಾಗಿ ಮಹಾಲಿಂಗ ಮುಗಳಖೋಡ, ಮಹಾಲಿಂಗ ಶಿವಾಪೂರ,ಲಕ್ಷ್ಮಣ ಹಳ್ಳೂರ, ಅಶೋಕ ಮುಗಳಖೋಡ, ಶೈಲಾ ಪ ಗಾಣಿಗೇರ, ರೋಪಾ ನಾ ಕದಮ, ಸುನಿತಾ ಗಾಡಿವಡ್ಡರ ಆಯ್ಕೆಯಾಗಿದ್ದಾರೆ ಎಂದು ಗೀತಾ ಕರಗಣ್ಣಿ ಸರ್ವರನ್ನು ಸತ್ಕರಿಸಿ ಮಾತನಾಡುತ್ತಾ, ಎಲ್ಲರೂ ಶಾಲೆಯ ಅಭಿವೃದ್ಧಿ ಸಲುವಾಗಿ ಕೆಲಸ ಮಾಡೋಣವೆಂದರು.
ಸಕಾರದ ಆದೇಶದಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಕಾಳಜಿಯಿಂದ ನಮ್ಮಶಾಲೆಯ ಅಭಿವೃದ್ಧಿ ಕೆಲಸಗಳಿಗೆ ಸಲಹೆ ಸೂಚನೆಗಳೊಂದಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ನಮ್ಮನ್ನು ಎಸ್ ಡಿ ಎಮ್,ಸಿ ಅಧ್ಯಕ್ಷ ಉಪಾಧ್ಯಕ್ಷ ಹಾಗು ಆಡಳಿತ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾವು ಶಾಸಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಾಗಪ್ಪ ಹಳ್ಳೂರ, ಮಹಾದೇವ ರಂಗಾಪೂರ,ರಾಮಪ್ಪ ನೇಮಗೌಡರ,ಮಲ್ಲಿಕಾರ್ಜುನ ಮುಗಳಖೋಡ,ರುದ್ರಯ್ಯಾ ಹಿರೇಮಠ, ಶಿವಾನಂದ ಹಿರೇಮಠ, ಬಸವರಾಜ ಕುಲಗೊಡ, ಹನಮಂತ ಮತ್ತು ಖಾನಟ್ಟಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರಿನ ಗುರುಹಿರಿಯರು ಶಿಕ್ಷಕರು ಉಪಸ್ಥಿತರಿದ್ದರು.